ರಷ್ಯಾ ವಿರುದ್ಧ ‘ಇಸ್ರೇಲ್ ಮಾದರಿ’ ಯುದ್ಧ ತಂತ್ರ ರೂಪಿಸಿದ ಅಮೆರಿಕ?
ಕೀವ್: ರಷ್ಯಾ ಮತ್ತು ಉಕ್ರೇನ್ ಯುದ್ಧ 500ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಹೊತ್ತಲ್ಲೇ ಮತ್ತೊಂದು ಭೀಕರ ಪರಮಾಣು ದಾಳಿಯ ಭೀತಿಯಲ್ಲಿ ಜಗತ್ತು ಮುಳುಗಿದೆ. 1945ರಲ್ಲಿ ಜಪಾನ್ ಮೇಲೆ ನ್ಯೂಕ್ಲಿಯರ್ ಬಾಂಬ್ ಹಾಕಿದಂತೆ ರಷ್ಯಾ ಕೂಡ ಉಕ್ರೇನ್ ಮೇಲೆ ಡೆಡ್ಲಿ ಪರಮಾಣು ಬಾಂಬ್ ಹಾಕುತ್ತಾ? ಅನ್ನೋ ಪ್ರಶ್ನೆ ಮೂಡಿರುವಾಗ ನ್ಯಾಟೋ & ಅಮೆರಿಕ ಬೇರೆಯದ್ದೇ ಸ್ಕೆಚ್ ಹಾಕಿವೆ.
ಹೌದು, ರಷ್ಯಾ ವಿರುದ್ಧ ಇಷ್ಟುದಿನ ಉಕ್ರೇನ್ ಸ್ಟ್ರಾಟಜಿ ಬಳಸಿ ಪರೋಕ್ಷವಾಗಿ ಯುದ್ಧಕ್ಕೆ ಕೈಜೋಡಿಸಿದ್ದ ನ್ಯಾಟೋ ಮಿತ್ರರು ಮೈಕೊಡವಿ ನಿಂತಿದ್ದಾರೆ. 16 ತಿಂಗಳಿಂದ ಯುದ್ಧವು ನಿರಂತರವಾಗಿ ನಡೆಯುತ್ತಿದೆ, ಆದರೂ ರಷ್ಯಾ ಮಾತ್ರ ಹಿಂದೆ ಸರಿಯುತ್ತಿಲ್ಲ. ಹೀಗಾಗಿಯೇ ರಣತಂತ್ರ ಬದಲಾಯಿಸಿರುವ ಅಮೆರಿಕ, ರಷ್ಯಾ ಸೋಲಿಗೆ 'ಇಸ್ರೇಲ್ ಮಾದರಿ'ಯ ಯುದ್ಧ ತಂತ್ರ ಅನುಸರಿಸಲು ಮುಂದಾಗಿದೆ. ಹಾಗಾದ್ರೆ ಏನಿದು ಇಸ್ರೇಲ್ ಮಾದರಿ ಯುದ್ಧ ತಂತ್ರ? ಈ ತಂತ್ರ ಬಳಸಿದರೆ ರಷ್ಯಾ ಸೋಲುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ (Russia Ukraine War).

ರಷ್ಯಾ ವಿರುದ್ಧ ಅಮೆರಿಕ ರಣತಂತ್ರ?
ಈಗಾಗಲೇ ಸಿಕ್ಕಿರುವ ಮಾಹಿತಿ ಪ್ರಕಾರ ಉಕ್ರೇನ್ ವಿರುದ್ಧ ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್ ಆಪ್ತರೇ ಈ ಕುರಿತು ಕೆಲ ದಿನಗಳ ಹಿಂದಷ್ಟೇ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಎಲ್ಲ ಕಾರಣಕ್ಕೆ ಅಮೆರಿಕ ಮತ್ತು ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿವೆ. ಹಾಗಾದ್ರೆ ದೀರ್ಘ ಕಾಲದ ಯುದ್ಧ ತಂತ್ರ ಹೇಗಿರುತ್ತೆ? ಮುಂದೆ ಓದಿ.
ಉಕ್ರೇನ್‌ಗೆ ಭರ್ಜರಿ ಗಿಫ್ಟ್ ಗ್ಯಾರಂಟಿ!
ಇಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಜಗತ್ತಿನ 3ನೇ ಮಹಾಯುದ್ಧ ಎನ್ನಬಹುದು. ಏಕೆಂದರೆ ಸುದೀರ್ಘ ಯುದ್ಧಕ್ಕೆ ರಷ್ಯಾ ತೊಡೆತಟ್ಟಿ ನಿಂತಿರುವ ಸಂದರ್ಭದಲ್ಲೇ, ನ್ಯಾಟೋ ಮತ್ತು ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು ಯುದ್ಧಕ್ಕೆ ಸಾಥ್ ಕೊಡಲು ಮುಂದಾಗಿವೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ಅದೆಷ್ಟು ವರ್ಷ ನಡೆದರೂ ಸಹಾಯ ಸಿಗಲಿದೆ. ಈಗಾಗಲೇ ಅಮೆರಿಕ 3 ಲಕ್ಷ ಕೋಟಿಯಷ್ಟು ನೆರವು ನೀಡಿ ಉಕ್ರೇನ್ ಬೆನ್ನಿಗೆ ನಿಂತಿದೆ. ಮುಂದೆಯೂ ಈ ರೀತಿ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಪರಮಾಣು ಯುದ್ಧಕ್ಕೆ ರಷ್ಯಾ ಸಿದ್ಧತೆ?
ಉಕ್ರೇನ್ & ರಷ್ಯಾ ನಡುವೆ ಯುದ್ಧ ಆರಂಭವಾಗಿ ಇಂದಿಗೆ ಸರಿಯಾಗಿ 477ನೇ ದಿನ. ಹೀಗೆ ಎರಡೂ ರಾಷ್ಟ್ರಗಳ ಯುದ್ಧ 16 ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ಇನ್ನೇನು 500 ದಿನಗಳನ್ನು ಕೂಡ ಯುದ್ಧ ಪೂರೈಸಲಿದೆ. ಆದರೆ ಈ ಸಂದರ್ಭದಲ್ಲೇ ರೊಚ್ಚಿಗೆದ್ದ ರಷ್ಯಾ ಉಗ್ರಾಣದ ಒಳಗಿಟ್ಟಿದ್ದ ಡೆಡ್ಲಿ ನ್ಯೂಕ್ಲಿಯರ್ ವೆಪನ್ ಹೊರತೆಗೆದಿದೆ. ಅಮೆರಿಕ ಅದೆಷ್ಟೇ ಬಾಯಿ ಬಡಿದುಕೊಂಡರೂ ಕೇರ್ ಮಾಡದೆ, ನೇರವಾಗಿ ನ್ಯೂಕ್ಲಿಯರ್ ಅಸ್ತ್ರಗಳನ್ನು ತನ್ನ ಸ್ನೇಹಿತ ಬೆಲಾರಸ್‌ಗೆ ಕೊಟ್ಟು ಕಳುಹಿಸಿದೆ. ಆದರೆ ಇಲ್ಲಿ ಭಯ ಪಡುವ ಪರಿಸ್ಥಿತಿ ಯಾಕೆ ಎದುರಾಗಿದೆ ಎಂದರೆ, ಬೆಲಾರಸ್ ಗಡಿಯಿಂದ ಕೇವಲ 200 ಕಿಲೋ ಮೀಟರ್ ದೂರದಲ್ಲಿ ಉಕ್ರೇನ್‌ನ ರಾಜಧಾನಿ ಇದೆ (Nuclear Weapons).
ಒಟ್ಟಾರೆ ಹೇಳುವುದಾದರೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಡೆಡ್ಲಿ ಆಗುತ್ತಿದೆ. ಯಾವ ಕ್ಷಣದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣ ಆಗುತ್ತೋ ಗೊತ್ತಿಲ್ಲ. ಈ ಸಂದರ್ಭದಲ್ಲೇ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. '1945ರಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಾಸಾಕಿ ನಗರಗಳನ್ನು ನಾಶಪಡಿಸಿದ ಪರಮಾಣು ಬಾಂಬುಗಳಿಗಿಂತ 3 ಪಟ್ಟು ಹೆಚ್ಚು ಶಕ್ತಿಶಾಲಿಯಾದ ಬಾಂಬ್ ಇದಾಗಿದೆ' ಎಂದಿದ್ದಾರೆ ಲುಕಾಶೆಂಕೊ! ಇದು ಉಕ್ರೇನ್ ಎದೆ ನಡುಗಿಸಿದೆ.












Click it and Unblock the Notifications