ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ.. ಎಚ್ಚರ.. ಭೂಮಿಗೆ ಕಾದಿದೆ ಅತಿದೊಡ್ಡ ಗಂಡಾಂತರ..!

|
Google Oneindia Kannada News

2020 ತೊಲಗಿತು, 2021ರಲ್ಲಿ ನೆಮ್ಮದಿಯಾಗಿ ಬದುಕಬಹುದು ಅಂತಾ ಮಾನವರು ಕೋಟಿ ಕೋಟಿ ಕನಸು ಕಟ್ಟಿದ್ದಾರೆ. ಆದರೆ ಹೊಸವರ್ಷ ಆರಂಭವಾಗಿ 2 ದಿನ ಕಳೆದಿಲ್ಲ, ಅದಾಗಲೇ ಬಾಹ್ಯಾಕಾಶ ವಿಜ್ಞಾನಿಗಳು ಶಾಕ್ ಕೊಟ್ಟಿದ್ದಾರೆ.

220 ಮೀಟರ್ ಉದ್ದದ ದೈತ್ಯ ಕ್ಷುದ್ರಗ್ರಹ ಭೂಮಿಯ ಸಮೀಪಕ್ಕೆ ಓಡೋಡಿ ಬರುತ್ತಿದೆಯಂತೆ. ಜನವರಿ 3ರಂದು '2003 AF23' ಹೆಸರಿನ ಸುಮಾರು 2020 ಮೀಟರ್ ವ್ಯಾಸವುಳ್ಳ ಕ್ಷುದ್ರಗ್ರಹ ಭೂಮಿಗೆ ಸಮೀಪದಲ್ಲೇ ಹಾದು ಹೋಗಲಿದೆ. 2020ರಲ್ಲೂ ಈ ರೀತಿ ಭೂಮಿ ಸಮೀಪ ಕ್ಷುದ್ರಗ್ರಹ ಹಾದುಹೋಗಿತ್ತು. ಆ ಕ್ಷುದ್ರಗ್ರಹವನ್ನು '2020 YB4' ಎಂದು ಹೆಸರಿಸಲಾಗಿತ್ತು.

unforgettable 2020: ಸಾವಿರ ತಲೆಮಾರು ತಿಂದರೂ ಕರಗದಷ್ಟು ಸಂಪತ್ತು ಪತ್ತೆ!unforgettable 2020: ಸಾವಿರ ತಲೆಮಾರು ತಿಂದರೂ ಕರಗದಷ್ಟು ಸಂಪತ್ತು ಪತ್ತೆ!

ಆದರೆ '2020 YB4' ಸುತ್ತಳತೆ 36 ಮೀಟರ್ ಆಗಿತ್ತು. ಆದರೆ ಈಗ ಕಂಡು ಬಂದಿರುವ '2003 AF23' 220 ಮೀಟರ್‌ನಷ್ಟು ದೈತ್ಯವಾಗಿದೆ. ಇಂತಹ ಬಂಡೆ ಭೂಮಿಗೆ ಬಂದು ಅಪ್ಪಳಿಸಿದರೆ ಅತಿದೊಡ್ಡ ನಗರಗಳೇ ನಾಶವಾಗುವ ಆತಂಕ ಆವರಿಸಿದೆ. ಈ ವರ್ಷ ಇದೇ ರೀತಿ ಇನ್ನೂ ಹಲವು ಗಂಡಾಂತರಗಳು ಬಾಹ್ಯಾಕಾಶದಲ್ಲಿ ಎದುರಾಗಲಿವೆ.

ಅಪ್ಪಳಿಸಲಿವೆ 3 ಕ್ಷುದ್ರಗ್ರಹಗಳು..!

ಅಪ್ಪಳಿಸಲಿವೆ 3 ಕ್ಷುದ್ರಗ್ರಹಗಳು..!

ವಿಜ್ಞಾನಿಗಳು ಕೊಟ್ಟ ಎಚ್ಚರಿಕೆ ಪಟ್ಟಿಯಲ್ಲಿ ಇದೊಂದೆ ಕ್ಷುದ್ರಗ್ರಹ ಇಲ್ಲ ಬದಲಾಗಿ 2021ರಲ್ಲಿ ಬರೋಬ್ಬರಿ 3 ದೈತ್ಯ ಕ್ಷುದ್ರ ಗ್ರಹಗಳು ಭೂಮಿ ಬಳಿ ಹಾದು ಹೋಗಲಿವೆ. ಕ್ಷುದ್ರಗ್ರಹ ಭೂಮಿ ಸಮೀಪ ಬಂದಾಗ ಒಂದಿಷ್ಟು ವ್ಯತ್ಯಾಸವಾದರೂ ಕಥೆ ಮುಗಿದಂತೆ. ಭೂಮಿ ಗುರುತ್ವದ ಬಲೆಗೆ ಸಿಲುಕಿ ಬಂಡೆ ಕಲ್ಲು ಆಗಸದಿಂದ ಭೂಮಿಗೆ ದೊಪ್ಪೆಂದು ಬಿದ್ದು ಬಿಡುತ್ತದೆ. ಕ್ಷುದ್ರಗ್ರಹ ಅಪ್ಪಳಿಸಿದರೆ ಅದು ನ್ಯೂಕ್ಲಿಯರ್ ಬಾಂಬ್‌ಗಿಂತಲೂ ದೊಡ್ಡ ನಾಶ ಸೃಷ್ಟಿಸುವ ಅಪಾಯ ಇರುತ್ತದೆ. ಹೀಗಾಗಿ ನಾಸಾ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಹೈಅಲರ್ಟ್ ಘೋಷಿದ್ದಾರೆ.

 ಜ. 3ಕ್ಕೆ ಕಾದಿದೆಯಾ ಕಂಟಕ..?

ಜ. 3ಕ್ಕೆ ಕಾದಿದೆಯಾ ಕಂಟಕ..?

ಅಂದಹಾಗೆ ಜನವರಿ 3 ಭಾನುವಾರ, ಅದರಲ್ಲೂ ಹೊಸ ವರ್ಷದ ಮೊದಲ ಭಾನುವಾರ. ಚೆನ್ನಾಗಿ ನಿದ್ರಿಸಿ, ಒಂದಷ್ಟು ಎಂಜಾಯ್ ಮಾಡೋಣ ಅಂದುಕೊಂಡಿದ್ದ ಜನರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. '2003 AF23' ಹೆಸರಿನ ಸುಮಾರು 2020 ಮೀಟರ್ ವ್ಯಾಸವುಳ್ಳ ಕ್ಷುದ್ರಗ್ರಹ ಜನವರಿ 3 ಭಾನುವಾರ ಭೂಮಿಗೆ ಸಮೀಪ ಹಾದು ಹೋಗಲಿದೆ. ಗಂಟೆಗೆ 13 ಸಾವಿರ ಕಿಲೋ ಮೀಟರ್ ವೇಗದಲ್ಲಿ ಭೂಮಿ ಕಡೆಗೆ ಬರುತ್ತಿರುವ ಕ್ಷುದ್ರ ಗ್ರಹದಿಂದ ಭೂಮಿಗೆ ಅಪಾಯ ಸಂಭವಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆ

 ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.

ಭೂಮಿಯ ಸಮೀಪದಲ್ಲಿ ಹಾದು ಹೋಗಲಿದೆ ಕ್ಷುದ್ರಗ್ರಹಭೂಮಿಯ ಸಮೀಪದಲ್ಲಿ ಹಾದು ಹೋಗಲಿದೆ ಕ್ಷುದ್ರಗ್ರಹ

ಊಹೆಗೂ ನಿಲುಕದಷ್ಟು ಸಂಪತ್ತು..!

ಊಹೆಗೂ ನಿಲುಕದಷ್ಟು ಸಂಪತ್ತು..!

ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.

ಚೀನಾ ಕಣ್ಣು ಬಾಹ್ಯಾಕಾಶದ ಮೇಲೆ, ಮೈನಿಂಗ್‌ಗೆ ಸಿದ್ಧವಾಯ್ತು 'ರೋಬೋಟ್'ಚೀನಾ ಕಣ್ಣು ಬಾಹ್ಯಾಕಾಶದ ಮೇಲೆ, ಮೈನಿಂಗ್‌ಗೆ ಸಿದ್ಧವಾಯ್ತು 'ರೋಬೋಟ್'

English summary
NASA Scientists warned about monster asteroid, which on the way towards Erath. Asteroid ‘2003 AF23’ will pass near the earth on January 3rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X