ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇದು ನೂರಾಇಪ್ಪತ್ತೈದು ಕೋಟಿ ಭಾರತೀಯರಿಗೆ ಮಾಡಿದ ಸನ್ಮಾನ'!

By Prasad
|
Google Oneindia Kannada News

ವಾಷಿಂಗ್ಟನ್ ಡಿಸಿ, ಜೂನ್ 27 : "ಇದು ನನಗೊಬ್ಬನಿಗೇ ಮಾಡಿರುವ ಸನ್ಮಾನವಲ್ಲ, ಇದು ಭಾರತದ ಇಡೀ ನೂರಾ ಇಪ್ಪತ್ತೈದು ಕೋಟಿ ಭಾರತೀಯರಿಗೆ ಮಾಡಿದ ಸನ್ಮಾನ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಜೂನ್ 27ರಂದು ಭಾರತೀಯ ಕಾಲಮಾನ 1.30ರ ಸುಮಾರಿಗೆ ವೈಟ್ ಹೌಸ್ ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರಿಂದ ಭವ್ಯ ಸ್ವಾಗತ ಪಡೆದ ನಂತರ ಮೋದಿಯವರು ಆಡಿರುವ ಮಾತುಗಳಿವು.

Narendra Modi meets US president Donald Trump at White House

ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಭೆ ನಡೆಯುತ್ತಿದ್ದು, ಎರಡೂ ಬಲಿಷ್ಠ ರಾಷ್ಟ್ರಗಳ ಉನ್ನತ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಮೋದಿ ಅಮೆರಿಕಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದರೂ, ಇದು ಮೋದಿ ಮತ್ತು ಟ್ರಂಪ್ ನಡುವಿನ ಮೊದಲ ಭೇಟಿ.

ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿಯವರು, ನಿಮ್ಮದು ಜಗತ್ತಿನ ಅತ್ಯಂತ ಪುರಾತನ ಪ್ರಜಾಪ್ರಭುತ್ವವಾದರೆ, ನಮ್ಮದು ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರ ಎಂದರು.

ಡೊನಾಲ್ಡ್ ಟ್ರಂಪ್ ಅವರು, ಮೋದಿ ಅವರ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ ಗಮನಾರ್ಹವಾಗಿ ಪ್ರಗತಿಯನ್ನು ಕಂಡಿದೆ. ಅದನ್ನು ಅವರು ಹಲವಾರು ವಿಭಿನ್ನ ರೀತಿಯಲ್ಲಿ ಸಾಧಿಸಿದ್ದಾರೆ. ಅದಕ್ಕಾಗಿ ಅಭಿನಂದಿಸುತ್ತೇನೆ ಎಂದು ಮುಕ್ತಕಂಠದಿಂದ ಮೋದಿಯವರನ್ನು ಶ್ಲಾಘಿಸಿದರು.

ಅಮೆರಿಕ ಅತ್ಯುತ್ಕೃಷ್ಟ ಮಿಲಿಟರಿ ಸಾಧನಗಳನ್ನು ತಯಾರಿಸುತ್ತಿದ್ದು, ಅಮೆರಿಕದಂತೆ ಬೇರೆ ಯಾವ ರಾಷ್ಟ್ರವೂ ತಯಾರಿಸುವುದಿಲ್ಲ. ಭಾರತ ಅವುಗಳಿಗಾಗಿ ಬೇಡಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು ಎಂದು ಟ್ರಂಪ್ ನುಡಿದರು.

ಭಾರತಕ್ಕೆ ಅಮೆರಿಕ 365 ಮಿಲಿಯನ್ ಡಾಲರ್ ನಷ್ಟು ಸಿ-17 ಮಿಲಿಟರಿ ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟನ್ನು ಮಾರಾಟ ಮಾಡಿದೆ. ಜೊತೆಗೆ, 2 ಬಿಲಿಯನ್ ಡಾಲರ್ ನಷ್ಟು ಡ್ರೋಣ್ ಗಳನ್ನು ಕೂಡ ಭಾರತಕ್ಕೆ ಅಮೆರಿಕ ಮಾರಾಟ ಮಾಡಲಿದೆ.

ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಅತ್ಯಂತ ಬಲಿಷ್ಠವಾಗಿದೆ ಮತ್ತು ಹಲವಾರು ಸಂಗತಿಗಳಿಗೆ ಸಂಬಂಧಿಸಿದಂತೆ ಎರಡೂ ದೇಶಗಳು ಸಹಮತ ಹೊಂದಿವೆ ಎಂದು ಟ್ರಂಪ್ ಹೇಳಿದರು.

English summary
Indian Prime Minister Narendra Modi meets US President Donald Trump at the White House. Melania Trump also present. Modi says, this warm welcome is true respect to entire Indian community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X