ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಪ್ರಧಾನಿಯ ಉನ್ನತ ತಂಡಕ್ಕೆ ನಾರಾಯಣ್ ಮೂರ್ತಿ ಅಳಿಯ

By Sachhidananda Acharya
|
Google Oneindia Kannada News

ಲಂಡನ್, ಜನವರಿ 10: ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರ ಉನ್ನತ ತಂಡಕ್ಕೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅಳಿಯ ರಿಷಿ ಸುನಾಕ್ ಸೇರ್ಪಡೆಯಾಗಿದ್ದಾರೆ.

ಸೋಮವಾರ ಥೆರೆಸಾ ಮೇ ಸಚಿವರು ಮತ್ತು ಕಾರ್ಯದರ್ಶಿಗಳ ತಂಡವನ್ನು ಪರಿಷ್ಕರಣೆ ಮಾಡಿದ್ದು, ತಂಡಕ್ಕೆ ಹೊಸದಾಗಿ ರಿಷಿ ಸುನಾಕ್ ಸೇರ್ಪಡೆಯಾಗಿದ್ದಾರೆ. 36 ವರ್ಷದ ಸುನಾಕ್ ರನ್ನು
ವಸತಿ, ಸಮುದಾಯಗಳು ಮತ್ತು ಸ್ಥಳೀಯ ಸರ್ಕಾರ ಇಲಾಖೆಯ ಅಂಡರ್ ಸೆಕ್ರೆಟರಿ (ಕಾರ್ಯದರ್ಶಿ)ಯಾಗಿ ಆಯ್ಕೆ ಮಾಡಲಾಗಿದೆ.

ಬ್ರಿಟನ್ ಚುನಾವಣೆಯಲ್ಲಿ ನಾರಾಯಣ ಮೂರ್ತಿ ಅಳಿಯನಿಗೆ ಭರ್ಜರಿ ಗೆಲುವುಬ್ರಿಟನ್ ಚುನಾವಣೆಯಲ್ಲಿ ನಾರಾಯಣ ಮೂರ್ತಿ ಅಳಿಯನಿಗೆ ಭರ್ಜರಿ ಗೆಲುವು

ತಮ್ಮ ಹೊಸ ತಂಡಕ್ಕೆ ಥೆರೆಸಾ ಮೇ ಹಲವು ಸ ಣ್ಣಪುಟ್ಟ ಸಮುದಾಯಗಳ ಜನರನ್ನು ಸೇರಿಸಿಕೊಂಡಿದ್ದಾರೆ. ತಮ್ಮ ಸಂಪುಟ ನಿಜವಾದ ದೇಶವನ್ನು ಪ್ರತಿನಿಧಿಸಬೇಕು ಎಂಬ ಕಲ್ಪನೆಯಲ್ಲಿ ಅವರು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದಾರೆ.

Narayana Murthy's Son-In-Law inducts into British PMs Top Team

ರಿಷಿ ಸುನಾಕ್ 2015ರ ಚುನಾವಣೆಯಲ್ಲಿ ಉತ್ತರ ಯಾರ್ಕ್ ಶೈರ್ ನ ರಿಚ್ಮಂಡ್ ನಿಂದ ಗೆದ್ದು ಬ್ರಿಟನ್ ಪಾರ್ಲಿಮೆಂಟ್ ಪ್ರವೇಶಿಸಿದ್ದರು.

ಸಂಕ್ರಾಂತಿ ವಿಶೇಷ ಪುಟ

ಆಕ್ಸ್ ಫರ್ಡ್ ವಿವಿಯಿಂದ ಪದವಿ ಪಡೆದಿರುವ ರಿಷಿ ಸುನಾಕ್ ಲಂಡನ್ ಮೂಲದ ಜಾಗತಿಕ ಹೂಡಿಕೆ ಸಂಸ್ಥೆಯೊಂದಕ್ಕೆ ಸಹ ಸಂಸ್ಥಾಪಕರಾಗಿದ್ದಾರೆ. 1 ಬಿಲಿಯನ್ ಪೌಂಡ್ ಮೌಲ್ಯದ ಇವರ ಸಂಸ್ಥೆ ಬ್ರಿಟನ್ನಿನ ಹಲವು ಸಣ್ಣ ಉದ್ಯಮ ಸಂಸ್ಥೆಗಳಲ್ಲಿ ಹಣ ಹೂಡಿದೆ. 2014ರಲ್ಲಿ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ.

ನಾರಾಯಣ್ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿಯವರನ್ನು ಇವರು ಮದುವೆಯಾಗಿದ್ದಾರೆ. ಅಕ್ಷತಾ ಮತ್ತು ಸುನಾಕ್ ಸ್ಟಾನ್ ಫರ್ಡ್ ಬುಸಿನೆಸ್ ಸ್ಕೂಲ್ ನಲ್ಲಿ ಸಹಪಾಠಿಗಳಾಗಿದ್ದರು. ಈ ದಂಪತಿಗೆ ಕೃಷ್ಣ ಮತ್ತು ಅನೋಷ್ಕ ಎಂಬ ಇಬ್ಬರು ಮಕ್ಕಳಿದ್ದಾರೆ.

English summary
British Prime Minister Theresa May has reshuffle of her top team of ministers and secretaries on Monday. In this reshuffle Indian-origin lawmaker Rishi Sunak appointed as an under secretary of state in Britain's Ministry of Housing, Communities and Local Government. Mr Sunak is the son-in-law of Infosys co-founder NR Narayana Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X