ಅಮೆರಿಕಾದಲ್ಲಿ ವಿದ್ಯಾರ್ಥಿನಿ ಹಿಜಬ್ ಕಿತ್ತು ಬಿಸಾಡಿದ ಸಹಪಾಠಿ

Posted By:
Subscribe to Oneindia Kannada

ಶಿಕಾಗೋ, ನವೆಂಬರ್, 16: ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯೊಬ್ಬಳ ತಲೆವಸ್ತ್ರವನ್ನು(ಹಿಜಬ್) ಸಹಪಾಠಿಯೇ ಕಿತ್ತುಬಿಸಾಡಿದ ಘಟನೆ ಅಮೆರಿಕದ ಮಿನ್ನೆಸೋಟಾದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯ ಕೂದಲನ್ನೂ ಸಹ ಹಿಡಿದು ಎಳೆಯಲಾಗಿದೆ ಎಂದು ಹೇಳಲಾಗಿದೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ನಿಯೋಜಿತ ಅಧ್ಯಕ್ಷರಾದ ನಂತರ ಬುರ್ಖಾ ಧರಿಸಿದ ಮಹಿಳೆಯರ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. [ಸಿದ್ದರಾಮಯ್ಯ ಬುರ್ಖಾ ನಿಷೇಧ ಮಾಡಲಿ : ಬಿಜೆಪಿ ಸವಾಲು]

ಮಿನ್ನೆಸೋಟಾದ ಕೂನ್ ರ್ಯಾಪಿಡ್ಸ್ ಪ್ರದೇಶದಲ್ಲಿರುವ ನಾರ್ತೆಡಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಖಂಡಿಸಿ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಸಂಘಟನೆ ತನಿಖೆ ನಡೆಸುವಂತೆ ಆಗ್ರಹಿಸಿದೆ.

Muslim girl's hijab ripped off in front of students in US

ಈ ಕುರಿತು ಕ್ರಮ ಕೈಗೊಳ್ಳುವಂತೆ ಅನೊಕ-ಹೆನ್ನಿಪಿನ್ ಸ್ಕೂಲ್ ಡಿಸ್ಟಿಕ್ ಗೆ ಮಂಗಳವಾರ ಸಂಘಟನೆ ಮನವಿ ಮಾಡಿದೆ. ಈ ಘಟನೆಯು ಶುಕ್ರವಾರ ನಡೆದಿದೆ.

ಸಹಪಾಠಿಯೊಬ್ಬ ವಿದ್ಯಾರ್ಥಿನಿಯ ಹಿಂದೆಯೇ ಬಂದು ಹಿಜಬ್ ಅನ್ನು ಕಿತ್ತು ಹಾಕಿದ್ದಾನೆ ಮತ್ತು ಇತರೆ ವಿದ್ಯಾರ್ಥಿಗಳ ಎದುರಿಗೆ ಅವಳ ಕೂದಲನ್ನು ಹಿಡಿದು ಎಳೆದಿದ್ದಾನೆ ಎಂದು ವಿದ್ಯಾರ್ಥಿನಿಯ ಪೋಷಕರು ಸಂಘಟನೆಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ.

ಆದರೆ ಅನೊಕಾ- ಹೆನ್ನಿಪಿನ್ ಸ್ಕೂಲ್ ಡಿಸ್ಟಿಕ್ ಇದುವರೆಗೂ ಪ್ರಕರಣ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಕೂಡಲೇ ಈ ಕುರಿತು ಕಠಿಣ ಕ್ರಮಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಬೇಕು ಎಂದು ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಸಂಘಟನೆ ಕಾರ್ಯನಿರ್ವಾಹಕ ನಿರ್ದೇಶಕ ಹುಸೇನ್ ಹೇಳಿದ್ದಾರೆ.

ಅಮೆರಿಕ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುತ್ತಿದ್ದಂತೆಯೇ ಹಲವು ಸಂಘಟನೆಗಳು ಟ್ರಂಪ್ ಗೆಲುವು ಖಂಡಿಸಿ ಪ್ರತಿಭಟನೆಗಳನ್ನು ನಡೆಸಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Muslim student's hijab was allegedly ripped off and her hair pulled down by a classmate at a school in Minnesota, the latest in a series of assaults and threats reported against headscarf-wearing women in the US following Donald Trump's win.
Please Wait while comments are loading...