ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಕೆಳಗಿಳಿಯಬೇಕೇ ಎಂಬ ಮಸ್ಕ್‌ ಪ್ರಶ್ನೆಗೆ ಉತ್ತರಿಸಿದ ಟ್ವೀಟಿಗರು: ಸಮೀಕ್ಷೆಯ ಫಲಿತಾಂಶ ಇಲ್ಲಿದೆ

|
Google Oneindia Kannada News

ವಾಷಿಂಗ್ಟನ್‌, ಡಿಸೆಂಬರ್ 19: ಉದ್ಯಮಿ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಅನ್ನು ಖರೀಧಿಸಿದ ನಂತರ ಹಲವಾರು ವಿವಾದಗಳಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ತ್ವರಿತ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಅವರು ಮಾಡಿದ ಯತ್ನಗಳು ಹೆಚ್ಚುಕಮ್ಮಿ ಸೋತಿವೆ.

ಜಾಹೀರಾತುದಾರರು ಜಾಹೀರಾತುಗಳನ್ನು ನೀಡುತ್ತಿಲ್ಲ ಎನ್ನುವುದು ಮಸ್ಕ್‌ ಚಿಂತೆಗೆ ಕಾರಣವಾಗಿದೆ. ಸಾವಿರಾರು ನೌಕರರನ್ನು ಮಸ್ಕ್‌ ತೆಗೆದುಹಾಕಿದ್ದಾರೆ. ಟ್ವಿಟರ್‌ ಕಂಪನಿಯು ನಷ್ಟ ಅನುಭವಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ನಾನು ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕೇ?: ಟ್ವಿಟರ್‌ನಲ್ಲಿಯೇ ಸಮೀಕ್ಷೆ ಆರಂಭಿಸಿದ ಎಲಾನ್‌ ಮಸ್ಕ್‌ ನಾನು ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕೇ?: ಟ್ವಿಟರ್‌ನಲ್ಲಿಯೇ ಸಮೀಕ್ಷೆ ಆರಂಭಿಸಿದ ಎಲಾನ್‌ ಮಸ್ಕ್‌

ಭಾರತವೂ ಸೇರಿದಂತೆ ಹಲವಾರು ದೇಶಗಳ ನೌಕರರು ಟ್ವಿಟರ್‌ನಿಂದ ಹೊರಬಂದಿದ್ದಾರೆ. ಮಸ್ಕ್‌ ಅವರ ತೀರ್ಮಾನಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಹಲವು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ಬೇಸೊತ್ತಿರುವ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನಲ್ಲಿ ಸಮೀಕ್ಷೆಯೊಂದನ್ನು ಆರಂಭಿಸಿದ್ದರು.

Musks poll asking followers on stepping down as Twitter boss ends

'ನಾನು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ?' ಎಂದು ಪ್ರಶ್ನೆಯೊಂದನ್ನು ಕೇಳಿದ್ದರು. ಸಮೀಕ್ಷೆಯ ಫಲಿತಾಂಶದ ಪ್ರಕಾರ ನಡೆದುಕೊಳ್ಳುವುದಾಗಿಯೂ ಅವರು ಹೇಳಿದ್ದರು.

ಈಗ ಸಮೀಕ್ಷೆ ಫಲಿತಾಂಶ ಹೊರಬಂದಿದೆ. ಮಸ್ಕ್ ಅವರ ಸಮೀಕ್ಷೆಯಲ್ಲಿ ಒಟ್ಟು 17 ಮಿಲಿಯನ್ ಮತಗಳು ಚಲಾವಣೆಯಾಗಿವೆ. ಈ ಪೈಕಿ ಶೇ.57.5ರಷ್ಟು ಮತಗಳು 'ಹೌದು' ಎಂಬುದಕ್ಕೆ ಬಿದ್ದಿವೆ. ಶೇ.42.5ರಷ್ಟು ಮತಗಳು ಅವರ ರಾಜೀನಾಮೆಗೆ ವಿರುದ್ಧವಾಗಿವೆ. ಸಮೀಕ್ಷೆಗೆ ಬದ್ಧನಾಗಿದ್ದೇನೆ ಎಂಬ ಹೇಳಿಕೆ ನೀಡಿರುವ ಮಸ್ಕ್ ಅವರ ಮುಂದಿನ ನಿರ್ಧಾರಗಳೇನು ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.

ಕಳೆದ ವಾರ ಮಸ್ಕ್‌ ಅವರು ಜಗತ್ತಿನ ಹೆಸರಾಂತ ಪತ್ರಕರ್ತರ ಖಾತೆಗಳನ್ನು ಅಮಾನತು ಮಾಡಿದ್ದರು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಎಲಾನ್‌ ಮಸ್ಕ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿ ಇದ್ದಾರೆ ಎಂದು ಟೀಕಿಸಲಾಗಿತ್ತು. ವಿಶ್ವಸಂಸ್ಥೆಯೂ ಸಹ ಈ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು.

ಇದೇ ವೇಳೆ, ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ಗಳನ್ನು ಪ್ರಮೋಟ್‌ ಮಾಡುವ ಲಿಂಕ್‌ಗಳನ್ನು ಟ್ವಿಟರ್‌ನಲ್ಲಿ ನಿಷೇಧಲಾಗಿದೆ ಎಂಬ ಹೊಸ ನೀತಿಯನ್ನು ಮಸ್ಕ್‌ ಜಾರಿಗೆ ತಂದಿದ್ದಾರೆ.

English summary
A total of 17 million votes were cast in Musk's poll. Out of this, 57.5% of the votes fell for 'Yes'. 42.5% votes were against his resignation. Everyone is curious about Musk's next decisions as he has stated that he is committed to the survey,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X