ಟ್ರಂಪ್ ಗೆಲುವಿಗಾಗಿ ಎನ್ನಾರೈಗಳಿಂದ ವಿಶೇಷ ಪೂಜೆ!

Posted By:
Subscribe to Oneindia Kannada

ಮುಂಬೈ, ನವೆಂಬರ್ 08: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ವಿಜಯಶಾಲಿ ಆಗಲೆಂದು ಅನಿವಾಸಿ ಭಾರತೀಯರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿಲರಿ ಕ್ಲಿಂಟನ್ ಪರ ಕರ್ನಾಟಕದ ಕುದ್ರೋಳಿ ಗೋಕರ್ಣನಾಥ ದೇಗುಲದಲ್ಲಿ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಫ್ ಅವರ ಗೆಲುವಿಗಾಗಿ ನಾವು ವಿಶೇಷ ಯಾಗವನ್ನು ಮಾಡಿದ್ದೇವೆ. ಇದರಿಂದ ಅಮೆರಿಕದಲ್ಲಿರುವ ಎನ್ನಾರೈಗೆಗಳಿಗೆ ಒಳ್ಳೆಯದಾಗಲಿದೆ ಎಂದು ಮುಂಬೈನ ವಿಷ್ಣುಧಾಮ್ ದೇಗುಲದ ಟ್ರಸ್ಟಿ ರಮೇಶ್ ಜೋಶಿ ಅವರು ಹೇಳಿದ್ದಾರೆ.[ಹಿಲರಿ ಗೆಲ್ಲಲೆಂದು ಮಂಗಳೂರಲ್ಲಿ ಕೃಷ್ಣನಿಗೆ ವಿಶೇಷ ಪೂಜೆ]

Mumbai temple performs 'yagna' for Trump's win

ಮುಂಬೈನ ಉತ್ತರ ಭಾಗದ ಕಂಡಿವ್ಲಿಯ ಹೊರ ವಲಯದಲ್ಲಿರುವ ಈ ದೇಗುಲದಲ್ಲಿ ಮೂರು ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಯಾಗದಲ್ಲಿ ಎನ್ನಾರೈಗಳ ಪರವಾಗಿ ಪೂಜೆ ಸಲ್ಲಿಸಲಾಗಿದೆ. [ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಮುನ್ನಲೆ]

ಈ ದೇಗುಲಕ್ಕೆ ಎನ್ನಾರೈಗಳು ಹೆಚ್ಚಾಗಿ ಭೇಟಿ ಕೊಡುತ್ತಾರೆ. ಅಮೆರಿಕದಲ್ಲಿರುವ ಭಾರತ ಮೂಲದ ನಿವಾಸಿಗಳು ಮುಂಬೈಗೆ ಬಂದಾಗ ಈ ದೇಗುಲಕ್ಕೆ ತಪ್ಪದೇ ಭೇಟಿ ನೀಡುತ್ತಾರೆ. ಈ ಬಾರಿ ಹೀಗೆ ಬಂದಿದ್ದ ಎನ್ನಾರೈಗಳು ತಮ್ಮ ನೆಚ್ಚಿನ ಅಭ್ಯರ್ಥಿ ಟ್ರಂಪ್ ಪರವಾಗಿ ವಿಶೇಷ ಪೂಜೆ, ಯಾಗ ನಡೆಸುವಂತೆ ಕೋರಿದ್ದರು.
ಲಭ್ಯವಿರುವ ಮಾಹಿತಿಯಂತೆ ಟ್ರಂಪ್ ಗೆಲುವಿಗಾಗಿ ನಡೆಸಲಾದ ಯಾಗವನ್ನು 'ವಿಜಯ ಪ್ರತಿ ಯಜ್ಞ' ಎಂದು ಕರೆಯಲಾಗಿದೆ. ಶಾಸನ ಪ್ರತಿ ಯಜ್ಞ ನಡೆಸಿ ಟ್ರಂಪ್ ಅಧಿಕಾರ ನಡೆಸಲು ಅನುಕೂಲವಾಗಲಿ ಎಂದು ಹಾರೈಸಲಾಗಿದೆ.

ಭಾರತದಲ್ಲಿರುವ ಭಯೋತ್ಪಾದನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಭರವಸೆಯನ್ನು ಅನಿವಾಸಿ ಭಾರತೀಯರಿಗೆ ಟ್ರಂಪ್ ನೀಡಿದ್ದಾರೆ ಹೀಗಾಗಿ ಅವರ ಪರ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ದೇಗುಲದ ಟ್ರಸ್ಟಿ ಹೇಳಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Some rituals seeking divine blessings for the victory of Republican candidate Donald Trump were performed in a temple here today at the behest of some NRIs.
Please Wait while comments are loading...