ಸೆಪ್ಟೆಂಬರ್ ನಲ್ಲಿ ಸಂತ ಪದವಿಗೇರಲಿರುವ ಮದರ್ ತೆರೆಸಾ!
ಕೋಲ್ಕತ್ತಾ, ಡಿ. 18: ನೊಬೆಲ್ ಪಾರಿತೋಷಕ ವಿಜೇತೆ ಮದರ್ ತೆರೆಸಾ ಅವರನ್ನು ಸಂತ ಪದವಿಗೇರಿಸಲು ಬೇಕಾದ ಅರ್ಹತೆ ಸಿಕ್ಕಿದೆ ಎಂದು ಇಟಲಿಯ ಕ್ಯಾಥೋಲಿಕ್ ಪತ್ರಿಕೆಯೊಂದು ವರದಿ ಮಾಡಿದೆ. ತೆರೆಸಾ ಅವರ ಆಶೀರ್ವಾದದಿಂದ ಬ್ರೆಜಿಲ್ಲಿನ ವ್ಯಕ್ತಿಯೊಬ್ಬ ಟ್ಯೂಮರ್ ಕಾಯಿಲೆ ಗುಣಮುಖವಾಗಿದೆ. ಎರಡನೇ ಪವಾಡಕ್ಕೆ ಪೋಪ್ ಅವರು ಸಮ್ಮತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಇಟಲಿಯ ಬಿಷಪ್ಸ್ ಕಾನ್ಫರೆನ್ಸ್ ನ ಅಧಿಕೃತ ಪತ್ರಿಕೆಯಾದ Avvenire ನಲ್ಲಿ ಮದರ್ ತೆರೆಸಾರನ್ನು ಮುಂದಿನ ವರ್ಷ ಸೆಪ್ಟೆಂಬರ್ ನಲ್ಲಿ ಸಂತ ಪದವಿಗೇರಿಸಲಾಗುವುದು ಎಂದು ಬರೆಯಲಾಗಿದೆ. [ಮದರ್ ತೆರೆಸಾ ಹೆಸರಿನ ಅನಾಥಾಶ್ರಮಗಳು ಇನ್ನಿಲ್ಲ]

1997ರಲ್ಲಿ 87 ವರ್ಷ ವಯಸ್ಸಿನಲ್ಲಿ ಇಹಲೋಕ ವ್ಯಾಪಾರ ಮುಗಿಸಿದ ಮದರ್ ತೆರೆಸಾರನ್ನು 2003ರಲ್ಲಿ ಸಂತ ಪದವಿಗೇರಿಸಲು ನಿರ್ಧರಿಸಲಾಯಿತು. ಅಂದಿನ ಪೋಪ್ ಜಾನ್ ಪಾಲ್ ಅವರು ಮತ್ತೊಂದು ಬಾರಿ ಮದರ್ ತೆರೆಸಾ ಹೆಸರಿನಲ್ಲಿ ಪವಾಡ ಸಂಭವಿಸಿದರೆ ಅವರನ್ನು ನಿಯಮದ ಪ್ರಕಾರ 'ಸಂತರೆಂದು' ಕರೆಯಲಾಗುತ್ತದೆ ಎಂದಿದ್ದರು.
1910ರಲ್ಲಿ ಅಂಜೆಜ್ಸ್ ಗೊನ್ಜೆ ಬೊಜಾಕ್ಸಿಯು ಆಗಿ ಅಲ್ಬೇನಿಯಾ ದಂಪತಿಗೆ ಜನಿಸಿದ ತೆರೆಸಾ ಅವರು ಭಾರತದ ಕಲ್ಕತ್ತಾ (ಇಂದಿನ ಕೋಲ್ಕತ್ತಾ) ಗೆ ಬಂದು ಬಡವರು, ನಿರ್ಗತಿಕರಿಗೆ ವೈದ್ಯಕೀಯ ನೆರವು ಆಶ್ರಯ ನೀಡಿ 'ಕೊಳಗೇರಿಯ ಸಂತ' ಎನಿಸಿಕೊಂಡಿದ್ದರು.
BREAKING: Vatican says Pope Francis has approved second miracle required to make Mother Teresa a saint
— Fox News (@FoxNews) December 18, 2015 2002ರಲ್ಲಿ ಮೊದಲ ಬಾರಿಗೆ ತೆರೆಸಾ ಹೆಸರಿನಲ್ಲಿ ನಡೆದ ಪವಾಡವನ್ನು ಗುರುತಿಸಲಾಗಿತು. ಬೆಂಗಾಳಿ ಬುಡಕಟ್ಟು ಜನಾಂಗದ ಮಹಿಳೆ ಮೋನಿಕಾ ಬೆಸ್ರಾ ಅವರು ಕಿಬ್ಬೊಟ್ಟೆಯಲ್ಲಿ ಟ್ಯೂಮರ್ ಆಗಿ ಮಾರಣಾಂತಿಕ ಸ್ಥಿತಿಯಲ್ಲಿದ್ದರು. ಮದರ್ ಸ್ಮರಣೆಯಿಂದ ಗುಣಮುಖರಾಗಿದ್ದರು. ಈಗ ಬ್ರೆಜಿಲ್ಲಿನ ವ್ಯಕ್ತಿ ಗುಣಮುಖರಾಗಿರುವ ವರದಿ ಬಂದಿದೆ. ಆದರೆ, ವ್ಯಾಟಿಕನ್ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.












Click it and Unblock the Notifications