ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ರಿಕಾದಲ್ಲಿ ನಿಗೂಢ ರೀತಿಯಲ್ಲಿ 350 ಆನೆಗಳ ಮರಣ!

|
Google Oneindia Kannada News

ಬೋಟ್ಸ್ವಾನಾ, ಜುಲೈ 02: ಬೋಟ್ಸ್ವಾನಾದ ಉತ್ತರ ಒಕಾವಾಂಗೋದ ಭಾಗದ ವಾಯುವ್ಯ ಪ್ರದೇಶದಲ್ಲಿ ನೂರಾರು ಆನೆಗಳ ಶವ ಪತ್ತೆಯಾಗಿದೆ. ಆನೆಗಳ ದೇಹದಲ್ಲಿ ಯಾವುದೇ ಗಾಯ ಗುರುತು ಕಂಡು ಬಂದಿಲ್ಲ, ಇದು ಬೇಟೆಗಾರರ ಕೃತ್ಯವಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸುಮಾರು 350ಕ್ಕೂ ಅಧಿಕ ಆನೆಗಳ ಸರಣಿ ಸಾವಿಗೆ ಕಾರಣವನ್ನು ವಿಜ್ಞಾನಿಗಳು, ಸಂಶೋಧನಾಕಾರರು ಹುಡುಕುತ್ತಿದ್ದಾರೆ.

Recommended Video

Corona Cases,Hassan ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ , ಆತಂಕದಲ್ಲಿ ಜನಗಳು | Oneindia Kannada

ಮೇ ತಿಂಗಳಿನಿಂದ ಇಲ್ಲಿ ತನಕ ಈ ಭಾಗದ ನೀರಿನ ಹೊಂಡಗಳ ಬಳಿಯೇ ಆನೆಗಳ ಶವ ಕಂಡು ಬಂದಿದೆ. ನೀರನ್ನು ಅರಸಿ ಬಂದು ಹೊಂಡಕ್ಕೆ ಜಾರಿ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಆದರೆ, ನೀರಿಗಾಗಿ ಅಲೆದಾಡುವಷ್ಟು ಬರಗಾಲ ಇನ್ನೂ ತಲೆದೋರಿಲ್ಲ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಅಚ್ಚರಿಯಾದರೂ ಸತ್ಯ, ಏಷ್ಯಾದ ಆನೆ ಕೂಡಾ ವಿನಾಶದ ಅಂಚಿನಲ್ಲಿದೆ!ಅಚ್ಚರಿಯಾದರೂ ಸತ್ಯ, ಏಷ್ಯಾದ ಆನೆ ಕೂಡಾ ವಿನಾಶದ ಅಂಚಿನಲ್ಲಿದೆ!

ಆನೆಗಳದ ಮೃತದೇಹದಲ್ಲಿ ವಿಷದ ಅಂಶ ಇದೆಯೇ ಎಂದು ಪರೀಕ್ಷಿಸಲಾಗುತ್ತಿದೆ. ವಿಷ ಇರುವುದು ಪತ್ತೆಯಾದರೆ ಇದು ಬೇಟೆಗಾರರ ಕೃತ್ಯ ಎಂದು ಶಂಕಿಸಬಹುದಾಗಿತ್ತು.


ಆನೆಗಳ ಮರಣೋತ್ತರ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ವಿಜ್ಞಾನಿಗಳು ಆರೋಪಿಸಿದ್ದಾರೆ.

More than 350 Elephants Mysterious Deaths in Africa

ಮರಿಯೊಂದನ್ನು ರಕ್ಷಿಸುವ ಪ್ರಯತ್ನದಲ್ಲಿ ಆಳವಾದ ಜಲಪಾತಕ್ಕೆ ಬಿದ್ದು 11 ಆನೆಗಳು ದಾರುಣವಾಗಿ ಸಾವಿಗೀಡಾದ ಮನಕಲಕುವ ಘಟನೆ ಥಾಯ್ಲೆಂಡ್‌ನ ಖಾವೊ ಯಾ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದ್ದು ನೆನಪಿರಬಹುದು. ಆದರೆ, ಬೋಟ್ಸ್ವಾನಾದ ಆನೆಗಳ ಸರಣಿ ಸಾವನ್ನು ಸಂರಕ್ಷಣಾ ದುರಂತ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜಲಪಾತದೊಳಗೆ ಬಿದ್ದು 11 ಆನೆಗಳ ದಾರುಣ ಸಾವು: ಹೃದಯ ಕಲಕುವ ಘಟನೆಜಲಪಾತದೊಳಗೆ ಬಿದ್ದು 11 ಆನೆಗಳ ದಾರುಣ ಸಾವು: ಹೃದಯ ಕಲಕುವ ಘಟನೆ

ಸಾಂಕ್ರಾಮಿಕ ರೋಗದ ಭೀತಿ: ಕೊರನಾವೈರಸ್ ಸೋಂಕಿನ ಭೀತಿ ನಡುವೆ ಮಾನವರ ವಸಾಹತುಗಳಿಗೆ ಹೊಂದಿಕೊಂಡಂತೆ ಇರುವ ರಕ್ಷಿತಾರಣ್ಯಗಳಲ್ಲಿ ಈ ರೀತಿ ಸರಣಿ ಸಾವು ಸಂಭವಿಸಿದರೆ ಮೊದಲಿಗೆ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸುತ್ತದೆ. ಈ ನಿಟ್ಟಿನಲ್ಲೂ ತನಿಖೆ ಜಾರಿಯಲ್ಲಿದೆ. ಲಂಡನ್ ಮೂಲದ ಪರಿಸರವಾದಿಗಳು ಶವಗಳ ಸಂರಕ್ಷಣೆಗೆ ನಿಂತಿದ್ದಾರೆ.

English summary
Scientists and researchers worry about the mysterious deaths of over 350 elephants in Botswana over a period of two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X