Temperature: ಪ್ರಪಂಚ ಜುಲೈ ತಿಂಗಳಲ್ಲಿ ಅತ್ಯಧಿಕ ತಾಪಮಾನಕ್ಕೆ ಸಾಕ್ಷಿ ಆಗಲಿದೆ: NASA
ವಾಷಿಂಗ್ಟನ್, ಜುಲೈ 21: ಪ್ರಸಕ್ತ ವರ್ಷ ಜುಲೈ ತಿಂಗಳು ಬಹುಶಃ ಈ ಹಿಂದಿನ ನೂರಾರು ವರ್ಷಗಳ ಇತಿಹಾಸದಲ್ಲೇ ವಿಶ್ವದ ಅತ್ಯಂತ ಗರಿಷ್ಠ ತಾಪಮಾನದ (ಬಿಸಿ) ತಿಂಗಳು ಆಗಿರುತ್ತದೆ ಎಂದು NASA (ನಾಸಾ) ದ ಉನ್ನತ ಹವಾಮಾನ ಶಾಸ್ತ್ರಜ್ಞ ಗೇವಿನ್ ಸ್ಮಿತ್ ಗುರುವಾರ ಮಾಹಿತಿ ನೀಡಿದ್ದಾರೆ.
ಸದರಿ ಜುಲೈ ತಿಂಗಳು ಈಗಾಗಲೇ ಯುರೋಪಿಯನ್ ಯೂನಿಯನ್ ಮತ್ತು ಮೈನೆ ವಿಶ್ವವಿದ್ಯಾನಿಲಯವು ನಡೆಸುತ್ತಿರುವ ಅಧ್ಯಯನಗಳ ಪ್ರಕಾರ, ಪ್ರತಿನಿತ್ಯವು ದಾಖಲಾಗುತ್ತಿರುವ ತಾಪಮಾನ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತಿದೆ. ಇದು ಪ್ರಾಥಮಿಕ ದತ್ತಾಂಶಗಳ ಅಂದಾಜುಗಳ ರಚನೆಗೆ ಉಪಗ್ರಹ ಮಾದರಿ ಮಾದರಿಗಳಾಗಿ ಸಂಯೋಜನೆಗೆ ಸಹಕಾರಿಯಾಗುತ್ತದೆ.

ಇಂದಿನ ದೈನಂದಿನ ಬಿಸಿ ಮತ್ತು ಈ ಹಿಂದಿನ ಬಿಸಿ ವಾತಾವರಣ ತುಸು ಭೀನ್ನವಾದರೂ ಶಾಖದ ತೀವ್ರತೆ ಹೆಚ್ಚಿದೆ. ಈ ಸಂಬಂಧ US ಏಜೆನ್ಸಿಗಳು ನೀಡಿದ ಹೆಚ್ಚು ದೃಢವಾದ ಮಾಸಿಕ ವರದಿಗಳಲ್ಲಿ ಪ್ರತಿಫಲಿಸುತ್ತದೆ ಎಂದು ಸ್ಮಿತ್ ಹೇಳಿದರು.
ಯುರೋಪ್, ಚೀನಾ, ಅಮೆರಿಕಾದಲ್ಲಿ ಅಧಿಕ ತಾಪಮಾನ
ಪ್ರಪಂಚದಾದ್ಯಂತ ವಾತಾವರಣ ಮತ್ತು ತಾಪಮಾನ ವಿಚಾರದಲ್ಲಿ ಅಭೂತಪೂರ್ವ ಬದಲಾವಣೆಗಳು ಘಟಿಸುತ್ತಿವೆ. ಯುರೋಪ್ ಮತ್ತು ಚೀನಾ ಮತ್ತು ಅಮೆರಿಕಾ (ಯುಎಸ್) ಜನರು ನೋಡುತ್ತಿರುವ ಶಾಖದ ಅಲೆಗಳು ಎಲ್ಲ ಹಂತಗಳ ದಾಖಲೆಗಳನ್ನು ಪುಡಿ ಮಾಡಿವೆ. ಈ ರೀತಿಯ ವಾತಾವರಣ ಮತ್ತು ಬಿಸಿ ಗಾಳಿಗೆ ಹವಾಮಾನದ ಎಲ್ ನಿನೊ ವಿದ್ಯಮಾನದ ಕಾರಣವೆಂದು ಹೇಳಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಾತಾವರಣ ಬದಲಾವಣೆಯಲ್ಲಿ 'ಎಲ್ ನಿನೊ' ಒಂದು ಸಣ್ಣ ಪಾತ್ರವನ್ನು ನಿರ್ವಹಿಸುತ್ತದೆ. ಸಾಗರದಲ್ಲಿ ಮೇಲಿನಿಂದ ಬೀಸುವ ಗಾಳಿ ಸಹ ಬಿಸಿ ಶಾಖದಿಂದ ಕೂಡಿರುತ್ತದೆ. ವಿಶೇಷವಾಗಿ ಸಮುದ್ರದ ಮೇಲ್ಮೈ ತಾಪಮಾನವನ್ನು ಹಲವು ತಿಂಗಳುಗಳಿಂದ ವಿವಿಧ ದೇಶಗಳ ಅನುಭವಕ್ಕೆ ಬರುತ್ತಿದೆ. ಈ ಬಿಸಿ ಅಲೆ ಹೀಗೆ ಮುಂದುವರಿಯುವ ನಿರೀಕ್ಷೆ ಇದೆ.
ಈ ವರ್ಷ 2023 ದಾಖಲೆ ಮಟ್ಟದಲ್ಲಿ ಅತ್ಯಂತ ಬಿಸಿ ಅಲೆಯ ವರ್ಷವಾಗುವ ಸಾಧ್ಯತೆಗಳನ್ನು ಹೆಚ್ಚಿದೆ ಎಂದು ಅಧ್ಯಯನದ ವರದಿ ಹೇಳುತ್ತಿದೆ. ಸ್ಮಿತ್ ಅವರು ಪ್ರಸ್ತುತ ಲೆಕ್ಕಾಚಾರಗಳ ಆಧಾರದ ಮೇಲೆ ತಪಾಮಾನ ಏರಿಕೆ ಮುಂದುವರಿಯುವ ಸಾಧ್ಯತೆ ಶೇಕಡಾ 50-50ರಷ್ಟ ಎಂದಿದ್ದಾರೆ. ಇತರ ವಿಜ್ಞಾನಿಗಳು ಇದನ್ನು ಶೇಕಡಾ 80 ರಷ್ಟು ಸಾಧ್ಯತೆ ಇದೆ ಎಂದಿದ್ದಾರೆ.
ಇನ್ನೂ ಭವಿಷ್ಯದ 2024ನೇ ವರ್ಷದಲ್ಲಿ ಇನ್ನೂ ಅಧಿಕ ಶಾಖದ ವಾತಾವರಣವನ್ನು ನಾವು ಎದುರಿಸುವ ನಿರೀಕ್ಷೆ ಇದೆ. ಸದ್ಯ ನಿರ್ಮಿಸುತ್ತಿರುವ 'ಎಲ್ ನಿನೊ' ಪ್ರಭಾವ ಮುಂದಿನ ವರ್ಷಾಂತ್ಯದ ಹೊತ್ತಿಗೆ ಉತ್ತುಂಗಕ್ಕೆ ಏರಲಿದೆ ಎನ್ನಾಗಿದೆ. ಇದೇ ಜುಲೈ ತಿಂಗಳ ಕಳೆದ ವಾರಾ ಕೆಲವು ದೇಶಗಳು ಗರಿಷ್ಠ ತಾಪಮಾನ ದಾಖಲಾತಿಗೆ ಸಾಕ್ಷಿಯಾಗಿವೆ. ಇದು ಭೀಕರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications