ಈಜಿಪ್ಟ್ ಮಸೀದಿ ಮೇಲಿನ ಭಯಾನಕ ದಾಳಿ ಖಂಡಿಸಿದ ಮೋದಿ, ಟ್ರಂಪ್

Posted By:
Subscribe to Oneindia Kannada

ಕೈರೋ, ನವೆಂಬರ್ 25: 'ಈಜಿಪ್ಟ್ ನ ಮಸೀದಿಯಲ್ಲಿ ನಡೆದ ಬರ್ಬರ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಈಜಿಪ್ಟಿನ ಸಿನೈ ಪ್ರದೇಶದ ಮಸೀದಿಯೊಂದರಲ್ಲಿ ನಿನ್ನೆ(ನ.24) ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 235 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಉಗ್ರರು ಮಸೀದಿ ಮೇಲೆ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದರು. ಮಸೀದಿಗೆ ಪ್ರಾರ್ಥನೆಗೆಂದು ತೆರಳಿದ್ದ ಇನ್ನೂರಕ್ಕೂ ಹೆಚ್ಚು ಜನರಿಗೆ ಅದೇ ಕೊನೆಯ ಪ್ರಾರ್ಥನೆಯಾಗಿತ್ತು.

ಈ ದುರಂತವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿದ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿ, ಟ್ವೀಟ್ ಮಾಡಿದ್ದಾರೆ.

ಈ ಬರ್ಬರ ಘಟನೆಯನ್ನು ನಾನು ಖಂಡಿತವರ್ತಿಸುತ್ತೇನೆ. ಅಮಾಯಕ ಜೀವಗಳು ಬಲಿಯಾಗಿದ್ದರ ಬಗ್ಗೆ ನಮ್ಮ ತೀವ್ರ ಸಂತಾಪವಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತ ಸದಾ ಈಜಿಪ್ಟ್ ನೊಂದಿದಗೆ ಸಹಕರಿಸಲಿದೆ. ನಾವು ಈಜಿಪ್ಟ್ ಸರ್ಕಾರದೊಂದಿಗಿದ್ದೇವೆ ಎಂದು ಮೋದಿ ಅಭಯ ನೀಡಿದ್ದಾರೆ.

ಪ್ರಾರ್ಥನೆ ಮಾಡುತ್ತಿದ್ದ ಅಮಾಯಕರ ಮೇಲೆ ನಡೆದ ಈ ಕ್ರೂರ ದಾಳಿ ನಿಜಕ್ಕೂ ಭೀಕರ. ಜಗತ್ತು ಖಂಡಿತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಮಿಲಿಟರಿ ಬಲದಿಂದ ನಾವು ಭಯೋತ್ಪಾದನೆಯನ್ನು ಹತ್ತಿಕ್ಕುವ ಅಗತ್ಯವಿದೆ. ಅವರ ಹುಟ್ಟಡಗಿಸುವ ಅಗತ್ಯವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian prime minister Narendra Modi and US president Donald Trump strongly condemn the cowardly terrorist attack in a mosgue in Egypt's Sinai region which kills more than 235 people.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ