ಟೈಮ್ ವರ್ಷದ ವ್ಯಕ್ತಿ: 2ನೇ ಸ್ಥಾನಕ್ಕೆ ಕುಸಿದ ಮೋದಿ
ವಾಷಿಂಗ್ಟನ್, ನ.30: ಭಾರಿ ಕುತೂಹಲ ಕೆರಳಿಸಿರುವ ಟೈಮ್ ಮ್ಯಾಗಜೀನ್ ನ ವರ್ಷದ ವ್ಯಕ್ತಿ ಆಯ್ಕೆ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಫರ್ಗುಸನ್ ಪ್ರತಿಭಟನೆಕಾರರತ್ತ ಮತಗಳು ಹೆಚ್ಚಾಗಿ ಬೀಳುತ್ತಿವೆ ಎಂದು ಇತ್ತೀಚಿನ ವರದಿ ಹೇಳಿದೆ.
ಒಟ್ಟಾರೆ ಮತಗಳ ಶೇ 9.8 ರಷ್ಟು ಪಾಲು ಮೋದಿ ಅವರಿಗೆ ಸಿಕ್ಕಿದ್ದರೆ, ಫರ್ಗುಸನ್ ಪ್ರತಿಭಟನೆಕಾರರು ಶೇ 10.8 ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ಹಾಂಗ್ ಕಾಂಗ್ ನ ಪ್ರಜಾಪ್ರಭುತ್ವ ಪರ ಹೋರಾಟಗಾರ ಜೋಶುವಾ ವೋಂಗ್ ಅವರು ಮೂರನೇ ಸ್ಥಾನದಲ್ಲಿದ್ದಾರೆ.

ನೊಬೆಲ್ ಶಾಂತಿ ಪಾರಿತೋಷಕ ಪ್ರಶಸ್ತಿ ವಿಜೇತೆ ಪಾಕಿಸ್ತಾನದ ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲ ಯೂಸಫ್ ಜಾಯಿ ಶೇ 5.3ರಷ್ಟು ಮತಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದ್ದರೆ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಐದನೇ ಸ್ಥಾನದಲ್ಲಿದ್ದಾರೆ. [ಒಬಾಮಾ ನಂತರ ಮೋದಿಯೇ ಜನಪ್ರಿಯ ವ್ಯಕ್ತಿ!]
ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರು 11ನೇ ಸ್ಥಾನದಲ್ಲಿ ಶೇ 2.4 ಮತಗಳನ್ನು ಮಾತ್ರ ಹೊಂದಿದ್ದಾರೆ. ವಾರ್ಷಿಕ ಮತದಾನ ಇನ್ನೂ ಜಾರಿಯಲ್ಲಿದ್ದು ಡಿಸೆಂಬರ್ 6ರಂದು ಕೊನೆಗೊಳ್ಳಲಿದೆ. ಸಮೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 8 ರಂದು ಘೋಷಿಸಲಾಗುತ್ತದೆ. ಅದರೆ, ಅಧಿಕೃತವಾಗಿ ಟೈಮ್ ವರ್ಷದ ವ್ಯಕ್ತಿ ವಿಜೇತರ ಹೆಸರನ್ನು ಡಿಸೆಂಬರ್ 10 ರಂದು ಪ್ರಕಟಿಸಲಾಗುತ್ತದೆ.
ಯುಎಸ್ ನಲ್ಲಿ ಕರಿಜನಾಂಗದ ಯುವಕನೊಬ್ಬನನ್ನು ಶ್ವೇತವರ್ಣದ ಪೊಲೀಸ್ ಅಧಿಕಾರಿಯೊಬ್ಬ ಗುಂಡಿಕ್ಕಿ ಕೊಂದ ಪ್ರಕರಣ ಈಗ ಭಾರಿ ಚರ್ಚೆಗೊಳಲ್ಪಟ್ಟಿದ್ದು ಈ ವಾರ ಫರ್ಗುಸನ್ ಪ್ರತಿಭಟನೆಕಾರರು ಸಮೀಕ್ಷೆಯಲ್ಲಿ ಮುಂದಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಅವರ ಆರ್ಥಿಕ ನೀತಿ, ವಿದೇಶಾಂಗ ನೀತಿ ಆಡಳಿತ ವೈಖರಿ, ನೆರೆ ರಾಷ್ಟ್ರಗಳೊಂದಿಗೆ ಬಾಂಧವ್ಯ, ಎನ್ನಾರೈಗಳು ಉದ್ಯಮಿಗಳ ಜೊತೆ ಸಂಬಂಧ ಎಲ್ಲವೂ ಅವರನ್ನು ಟೈಮ್ ವರ್ಷದ ವ್ಯಕ್ತಿ ಆಯ್ಕೆ ಪಟ್ಟಿಯಲ್ಲಿ ಮುಂಚೂಣಿಯಲ್ಲಿರಿಸಿವೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications