ಮೆಕ್ಸಿಕೋದಲ್ಲಿ ಮೋದಿ -ಎನ್ರಿಕ್ ಸುತ್ತಾಟದ್ದೇ ಸುದ್ದಿ

Posted By:
Subscribe to Oneindia Kannada

ಮೆಕ್ಸಿಕೋ, ಜೂನ್ 09: ಅಣುಸಾಮಗ್ರಿ ಪೂರೈಕೆದಾರರ ಗುಂಪು (ಎನ್​ಎಸ್​ಜಿ)ಗೆ ಸೇರ್ಪಡೆಯಾಗಲು ಭಾರತಕ್ಕೆ ಮೆಕ್ಸಿಕೋ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ಮೆಕ್ಸಿಕೋದ ಅಧ್ಯಕ್ಷ ಎನ್ರಿಕ್ ಪೆನಾ ನಿಯೆಟೋ ಹೇಳಿದ್ದಾರೆ.

ಮೋದಿ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಡಿನ್ನರ್ ಗೆ ಕರೆದೊಯ್ದ ಚಿತ್ರ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಉಭಯ ನಾಯಕರು ಜಂಟಿ ಪತ್ರಿಕಾ ಗೋಷ್ಠಿ ನಡೆಸಿದರು.

Modi in Mexico: Enrique Pena drives PM to a restaurant India For NSG

ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್ ಕ್ಷೇತ್ರ, ಇಂಧನ, ಔಷಧ, ವಿಜ್ಞಾನ, ಅಂತರಿಕ್ಷ, ಕೃಷಿ ಸಂಶೋಧನೆ, ಬಯೋ ಟೆಕ್ನಾಲಜಿ, ಸೋಲಾರ್ ವಿದ್ಯುತ್ ಉತ್ಪಾದನೆ, ತ್ಯಾಜ್ಯ ನಿರ್ವಹಣೆ, ನೈಸರ್ಗಿಕ ವಿಕೋಪ ಮುನ್ನೆಚ್ಚರಿಕೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡಲು ಮತ್ತು ಬಂಡವಾಳ ಹೂಡಿಕೆ ಮಾಡಲು ಮೋದಿ ಮತ್ತು ನಿಯೆಟೋ ಒಪ್ಪಿಗೆ ಸೂಚಿಸಿದರು. [ಆಟೋಗ್ರಾಫ್ ಪ್ಲೀಸ್, ಮೋದಿಗೆ ಮುಗಿಬಿದ್ದ ಅಮೆರಿಕ ಸಂಸದರು]

ಇರಾನ್, ಅಫ್ಘಾನಿಸಾನ್, ಕತಾರ್, ಸ್ವಿಟ್ಜರ್ಲೆಂಡ್, ಯುಎಸ್ಎ ನಂತರ ಪಂಚ ರಾಷ್ಟ್ರಗಳ ಪ್ರವಾಸದ ಕೊನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮೆಕ್ಸಿಕೋ ತಲುಪಿದರು. ಮೋದಿ ಅವರನ್ನು ಮೆಕ್ಸಿಕೋದ ವಿದೇಶಾಂಗ ವ್ಯವಹಾರಗಳ ಸಚಿವೆ ಕ್ಲೌಡಿಯಾ ರುಯೆಜ್ ಮಸಿಯು ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

-
-
-
-
-
-
-
-
ಮೆಕ್ಸಿಕೋದಲ್ಲಿ ಮೋದಿ -ಎನ್ರಿಕ್ ಸುತ್ತಾಟದ್ದೇ ಸುದ್ದಿ

ಮೆಕ್ಸಿಕೋದಲ್ಲಿ ಮೋದಿ -ಎನ್ರಿಕ್ ಸುತ್ತಾಟದ್ದೇ ಸುದ್ದಿ

-
-
-

ರಾಜೀವ್ ಗಾಂಧಿ ನಂತರ ಮೋದಿ : 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ದ್ವಿಪಕ್ಷೀಯ ಮಾತುಕತೆಗಾಗಿ ಮೆಕ್ಸಿಕೋಗೆ ಭೇಟಿ ನೀಡಿದ್ದರು. ರಾಜೀವ್ ಗಾಂಧಿ ನಂತರ ನರೇಂದ್ರ ಮೋದಿ ದ್ವಿಪಕ್ಷೀಯ ಭೇಟಿಗಾಗಿ ಮೆಕ್ಸಿಕೋಗೆ ಆಗಮಿಸಿದ್ದಾರೆ. ಮಿಕ್ಕಂತೆ 2012ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೆಕ್ಸಿಕೋದಲ್ಲಿ ನಡೆದ ಜಿ 20 ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದರು.ಆದರೆ, 30 ವರ್ಷಗಳಲ್ಲಿ ಇದು ಭಾರತೀಯ ಪ್ರಧಾನಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Showing a very special gesture to visiting Indian Prime Minister Narendra Modi, Mexican President Enrique Pena Nieto personally drove him to a restaurant for vegetarian dinner.Mexico extends support to India for NSG membership
Please Wait while comments are loading...