ಈಸ್ಟರ್ ಸ್ಫೋಟ ನಂತರ ಶ್ರೀಲಂಕಾಗೆ ಭೇಟಿ ನೀಡಿದ ವಿಶ್ವದ ಮೊದಲ ನಾಯಕ ಮೋದಿ

ಕೊಲಂಬೋ (ಶ್ರೀಲಂಕಾ), ಜೂನ್ 9: ಮಾಲ್ಡೀವ್ಸ್ ನ ಹಿಂತಿರುಗುವಾಗ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾಗೆ ಭೇಟಿ ನೀಡಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ಈಸ್ಟರ್ ದಿನದಂದು ಸರಣಿ ಸ್ಫೋಟದಲ್ಲಿ ಭಾರೀ ಸಂಖ್ಯೆಯಲ್ಲಿ ಸಾವು- ನೋವು ಸಂಭವಿಸಿದ ನಂತರ ಇಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ವಿಶ್ವ ನಾಯಕ ನರೇಂದ್ರ ಮೋದಿ.

ಶ್ರೀಲಂಕಾದ ಪ್ರಧಾನಮಂತ್ರಿ ರನಿಲ್ ವಿಕ್ರಮ್ ಸಿಂಘೆ ಅವರು ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡರು. ಕೊಲಂಬೋದ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಮೋದಿ ಟ್ವೀಟ್ ಮಾಡಿದ್ದಾರೆ. "ಶ್ರೀಲಂಕಾಗೆ ಬಂದಿರುವುದು ಬಹಳ ಖುಷಿಯಾಗಿದೆ. ನಾಲ್ಕು ವರ್ಷದಲ್ಲಿ ಈ ದ್ವೀಪ ರಾಷ್ಟ್ರಕ್ಕೆ ಮೂರನೇ ಭೇಟಿ. ಶ್ರೀಲಂಕಾ ಜನರು ಯಾವ ಪ್ರೀತಿ ತೋರಿದ್ದಾರೋ ಅದೇ ಪ್ರಮಾಣದಲ್ಲಿ ನಾನೂ ಸ್ಪಂದಿಸಿದ್ದೇನೆ.

"ಅಗತ್ಯ ಇರುವಾಗ ಭಾರತವು ತನ್ನ ಮಿತ್ರ ದೇಶಗಳನ್ನು ಮರೆಯುವುದಿಲ್ಲ. ಇಂಥ ಅಭೂತಪೂರ್ವ ಸ್ವಾಗತವು ಹೃದಯಸ್ಪರ್ಶಿ ಆಗಿತ್ತು" ಎಂದಿದ್ದಾರೆ.

Modi is the world first leader visited Sri Lanka after Easter series blast

ಈಸ್ಟರ್ ಭಾನುವಾರದಂದು ಯಾವ ಚರ್ಚ್ ನ ಮೇಲೆ ದಾಳಿ ನಡೆದಿತ್ತೋ ಅಲ್ಲಿಗೆ ನರೇಂದ್ರ ಮೋದಿ ಮೊದಲ ಭೇಟಿ ನೀಡಿದರು. "ಭಯೋತ್ಪಾದಕರ ಹೇಡಿ ಕೃತ್ಯವು ಶ್ರೀಲಂಕಾದ ಸ್ಥೈರ್ಯವನ್ನು ಹಾಳು ಮಾಡಲು ಸಾಧ್ಯವಿಲ್ಲ. ಶ್ರೀಲಂಕಾದ ಜನರ ಜತೆಗೆ ಭಾರತವು ದೃಢವಾಗಿ ನಿಲ್ಲುತ್ತದೆ" ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ವಿರೋಧ ಪಕ್ಷದ ನಾಯಕ ಮಹಿಂದ್ರಾ ರಾಜಪಕ್ಸೆ ಅವರನ್ನು ಮೋದಿ ಭೇಟಿ ಆಗಲಿದ್ದಾರೆ. ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರನ್ನು ಪ್ರತಿನಿಧಿಸುವ ರಾಜಕೀಯ ಪಕ್ಷ ತಮಿಳ್ ನ್ಯಾಷನಲ್ ಅಲಯನ್ಸ್ ನ ಅಧಿಕೃತ ನಿಯೋಗವನ್ನೂ ಮೋದಿ ಭೇಟಿ ಆಗಲಿದ್ದಾರೆ.

ಶ್ರೀಲಂಕಾದಲ್ಲಿ ಇರುವ ಭಾರತೀಯರ ಜತೆ ಮಾತುಕತೆ ನಡೆಸಲಿದ್ದಾರೆ. ಶ್ರೀಲಂಕಾಗೆ ಪ್ರಧಾನಿ ಮೋದಿ ಅವರ ಭೇಟಿಯು ದ್ವೀಪ ರಾಷ್ಟ್ರದ ಬಗ್ಗೆ ಭಾರತಕ್ಕೆ ಇರುವ ಮಾನವೀಯತೆಯನ್ನು ತೋರುತ್ತದೆ ಎಂದು ಭಾರತಕ್ಕೆ ಶ್ರೀಲಂಕಾ ಹೈಕಮಿಷನರ್ ಆಸ್ಟಿನ್ ಫರ್ನಾಂಡೋ ಹೇಳಿದ್ದರು.

ಎರಡು ದೇಶಗಳ ಭೇಟಿ ವೇಳೆ ನರೇಂದ್ರ ಮೋದಿ ಅವರು, ರಕ್ಷಣೆ, ನೌಕಾ ಭದ್ರತೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಆರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇನ್ನು ಮಾಲ್ಡೀವ್ಸ್ ನ ಅತ್ಯುನ್ನತ ಗೌರವ 'ರೂಲ್ ಆಫ್ ನಿಶಾನ್ ಇಜುದ್ದೀನ್'ಗೆ ಮೋದಿ ಪಾತ್ರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+