• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!

By ಪ್ರೇಮ್
|

ಲಂಡನ್, ಆ. 16 : ಗಂಡ ಒಳ್ಳೆಯವನೆ, ಯಾವುದಕ್ಕೂ ಕಡಿಮೆ ಮಾಡಿಲ್ಲ, ಅರಗಿಣಿಯ ಹಾಗೆ ನೋಡಿಕೊಂಡಿದ್ದಾನೆ. ಹೆಂಡತಿ ಕೂಡ ಗಂಡನನ್ನು ತುಂಬಾ ಪ್ರೀತಿಸುತ್ತಾಳೆ. ಆದರೆ, ಆಕೆಗೆ ಕಾಡುತ್ತಿರುವ ಒಂದೇ ಕೊರತೆಯೆಂದರೆ, ಗಂಡನಿಂದ ಸಂಪೂರ್ಣವಾಗಿ ಮತ್ತು ತೃಪ್ತಿಯಾಗುವಂತಹ ಲೈಂಗಿಕ ಸುಖ ಸಿಗದಿರುವುದು.

ಅದಕ್ಕೆ ಆ ಹೆಂಡತಿ ಏನು ಮಾಡುತ್ತಾಳೆ ಗೊತ್ತಾ? ಗಂಡನನ್ನ ವಂಚಿಸಿ ಅನ್ಯ ಪುರುಷನೊಂದಿಗೆ ಲೈಂಗಿಕ ತೃಪ್ತಿ ಪಡೆಯುವುದು. ದೇಹ ಸುಖದಿಂದ ವಂಚಿತಳಾದ ಆಕೆ, ತೃಪ್ತಿ ಪಡಿಸದ ಗಂಡನಿಗೆ ವಿಚ್ಛೇದನ ಕೊಡಲೂ ತರಾಯಿಲ್ಲ! ಆಕೆಗೆ ಬೇಕಾಗಿರುವುದು ಲೈಂಗಿಕ ಸುಖವೇ ಹೊರತು, ಸಂಸಾರ ಒಡೆಯುವುದಲ್ಲ. ಹೇಗಿದೆ ನೋಡಿ!

ಇದು ಆಕೆಯೊಬ್ಬಳ ಕಥೆಯಲ್ಲ. ಹಲವಾರು ಮಧ್ಯವಯಸ್ಕ ಮಹಿಳೆಯರು ದೈಹಿಕ ಸುಖಕ್ಕಾಗಿ ಗಂಡನನ್ನು ನಯವಾಗಿ ವಂಚಿಸುತ್ತಿದ್ದಾರೆ ಎಂಬ ಸಂಗತಿ ವಿಂಚೆಸ್ಟರ್ ವಿಶ್ವವಿದ್ಯಾಲಯದ ಮ್ಯಾಸ್‌ಕ್ಯುಲೈನಿಟಿ, ಸೆಕ್ಶುವಾಲಿಟಿ ಮತ್ತು ಸ್ಪೋರ್ಟ್ಸ್ ಪ್ರೊಫೆಸರಾಗಿರುವ ಎರಿಕ್ ಆಂಡರ್ಸನ್ ನಡೆಸಿರುವ ಅಧ್ಯಯನದಿಂದ ಹೊರಬಿದ್ದಿದೆ.

ಎರಿಕ್ ಎಂಥ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿದ್ದರು? ಈ ಅಧ್ಯಯನದಿಂದ ಅವರು ಕಂಡುಕೊಂಡ ಅಂಶಗಳೇನು? ಗಂಡನನ್ನು ಹೆಂಡತಿಯರು ವಂಚಿಸಲು ಕಾರಣಗಳೇನು? ಮದುವೆಯಾಗಿ ಸುಖವಾಗಿರುವುದಕ್ಕೂ, ಹಾಸಿಗೆಯಲ್ಲಿ ಸುಖ ಪಡೆಯುವುದು ಬೇರೆಬೇರೆಯಾ? ಏನು ನಿಮ್ಮ ಅಭಿಮತ? ಮುಂದಿನ ಸ್ಲೈಡುಗಳಲ್ಲಿ ಹೆಚ್ಚಿನ ವಿವರಗಳನ್ನು ಓದಿರಿ. [ಮದುವೆ ಕೊಲ್ಲುವ ಪ್ಯಾರಲಲ್ ಲೈಫ್ ಎಂಬ ಕಾಯಿಲೆ!]

ಮಧ್ಯವಯಸ್ಕ ಮಹಿಳೆಯರೇ ಅಧ್ಯಯನದ ವಸ್ತು

ಮಧ್ಯವಯಸ್ಕ ಮಹಿಳೆಯರೇ ಅಧ್ಯಯನದ ವಸ್ತು

ಎರಿಕ್ ಅವರು 35ರಿಂದ 45ರ ನಡುವಿನ ಮಧ್ಯಮ ವಯಸ್ಕ ವಿವಾಹಿತ ಮಹಿಳೆಯರನ್ನು ತಮ್ಮ ಅಧ್ಯಯನದ ವಸ್ತುವನ್ನಾಗಿಸಿಕೊಂಡಿದ್ದರು. ವಿವಾಹೇತರ ಸಂಬಂಧವನ್ನು ಉತ್ತೇಜಿಸುವ ವೆಬ್ ಸೈಟಿನಲ್ಲಿ ದೊರೆಯ ಮಾಹಿತಿಯನ್ನಾಧರಿಸಿ ಅವರು ಅಧ್ಯಯನ ನಡೆಸಿದ್ದರು.

ಅವರು ರೋಮ್ಯಾಂಟಿಕ್ ಸಂಗಾತಿಯನ್ನು ಬಯಸಿದ್ದರು

ಅವರು ರೋಮ್ಯಾಂಟಿಕ್ ಸಂಗಾತಿಯನ್ನು ಬಯಸಿದ್ದರು

ಇವರಲ್ಲಿ ಶೇ.67ರಷ್ಟು ಮಹಿಳೆಯರು ಗಂಡನಿಗೆ ವಂಚಿಸುವಂಥ ಕೆಲಸಕ್ಕೆ ಏಕಿಳಿದಿದ್ದರೆಂದರೆ ಅವರು ರೋಮ್ಯಾಂಟಿಕ್ ಸಂಗಾತಿಯನ್ನು ಬಯಸಿದ್ದರು ಮತ್ತು ಸಂಗಾತಿಯೊಡನೆ ಅದ್ಭುತ ಲೈಂಗಿಕ ಸುಖದ ಕನಸು ಕಂಡಿದ್ದರು.

ಗಂಡನ ಜೊತೆಗಿದ್ದುಕೊಂಡೇ ಪರರೊಂದಿಗೆ ಸಂಗ

ಗಂಡನ ಜೊತೆಗಿದ್ದುಕೊಂಡೇ ಪರರೊಂದಿಗೆ ಸಂಗ

ಇವರಲ್ಲಿ ಶೇ.100ಕ್ಕೆ 100ರಷ್ಟು ಮಹಿಳೆಯರು ಗಂಡನಿಂದ ವಿಚ್ಛೇದನ ಬಯಸಿರಲಿಲ್ಲ. ಪ್ರೀತಿಸುವ ಗಂಡನ ಜೊತೆಗಿದ್ದುಕೊಂಡೇ ಲೈಂಗಿಕ ಸುಖಕ್ಕಾಗಿ ಮತ್ತೊಬ್ಬ ವ್ಯಕ್ತಿಯನ್ನು ಬಯಸಿದ್ದರು. ತಮಗೆ ಬೇರೆ ಗಂಡ ಬೇಡವೇ ಬೇಡ ಎಂಬ ತೀರ್ಮಾನಕ್ಕೂ ಬಂದಿದ್ದರು.

ಕಾಡುವ ಸುಖ ಸಿಗದಿದ್ದಾಗ...

ಕಾಡುವ ಸುಖ ಸಿಗದಿದ್ದಾಗ...

ಅಚ್ಚರಿಯ ಸಂಗತಿಯೆಂದರೆ, ತಮ್ಮ ಗಂಡನನ್ನು ಒಲಿಸಿಕೊಳ್ಳಲು ಅನೇಕರು ನಾನಾ ಪ್ರಯತ್ನಗಳನ್ನು ಮಾಡಿ ಸೋತಿದ್ದರು. ಕಾಡುವ ಸುಖ ಸಿಗದಿದ್ದಾಗ ಅನ್ಯ ದಾರಿ ಕಾಣದೆ ಪರಪುರುಷರೊಂದಿಗೆ ಪ್ರಣಯ ಸಲ್ಲಾಪ ನಡೆಸಿದ್ದರು.

ಒಬ್ಬನೊಂದಿಗೆ ಯಪ್ಪೋ ಬೋರೋಬೋರು

ಒಬ್ಬನೊಂದಿಗೆ ಯಪ್ಪೋ ಬೋರೋಬೋರು

ಒಬ್ಬನೇ ಗಂಡನೊಂಡನೆ ಲೈಂಗಿಕ ಕ್ರಿಯೆ ನಡೆಸುವುದು ಬೋರೋಬೋರು ಎಂದು ಅನೇಕರು ಹೇಳಿಕೆ ನೀಡಿ ಎರಿಕ್ ಆಂಡರ್ಸನ್ ಹುಬ್ಬೇರುವಂತೆ ಮಾಡಿದ್ದರು.

ಗಂಡನ ಸಮ್ಮತಿ ಪಡೆದುಕೊಂಡೇ ಇತರರೊಂದಿಗೆ

ಗಂಡನ ಸಮ್ಮತಿ ಪಡೆದುಕೊಂಡೇ ಇತರರೊಂದಿಗೆ

ಮತ್ತೊಂದು ವಿಚಿತ್ರವಾದ ಸಂಗತಿಯೆಂದರೆ, ಶೇ.47ರಷ್ಟು ಹೆಂಡತಿಯರು ತಮ್ಮ ಗಂಡನೊಂದಿಗೆ ಅನೈತಿಕ ಸಂಬಂಧದ ಬಗ್ಗೆ ಚರ್ಚಿಸಿದ್ದರು. ವಿಭಿನ್ನ ಪುರುಷರೊಂದಿಗೆ ಕೇಳಿ ನಡೆಸುವ ಬದಲು ಒಬ್ಬೇಒಬ್ಬನೊಂದಿಗೆ ಮಾತ್ರ ಸಂಬಂಧವಿರಿಸಿಕೊಳ್ಳುವ ಬಗ್ಗೆ ಚರ್ಚಿಸಿದ್ದರು.

ಲೈಂಗಿಕತೆಗೆ ಸಿಗದ ಭಾವನಾತ್ಮಕ ಸಂಬಂಧ

ಲೈಂಗಿಕತೆಗೆ ಸಿಗದ ಭಾವನಾತ್ಮಕ ಸಂಬಂಧ

ಲೈಂಗಿಕ ಕ್ರಿಯೆ ನಡೆಸಬೇಕಾದರೆ ಸಂಗಾತಿಯೊಡನೆ ಭಾವನಾತ್ಮಕ ಸಂಬಂಧವಿರಿಸಿಕೊಳ್ಳಬೇಕು. ಅದು ಗಂಡನಿಂದ ಸಿಗದಿದ್ದರಿಂದಲೇ ಅನೈತಿಕ ಸಂಬಂಧದ ಹಾದಿ ಹಿಡಿಯಬೇಕಾಯಿತು ಎಂದು ಕೂಡ ಕೆಲ ಮಹಿಳೆಯರು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is it fine to have extramarital affair with another man when husband fails to satisfy wife? According to an interesting study, when middle-aged women seek extra-marital affairs, they are looking for more romantic passion which includes sex - and do not want to divorce their husbands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more