ಫ್ರಾನ್ಸ್ ಸುಂದರಿಗೆ ಒಲಿಯಿತು ಮಿಸ್ ಯೂನಿವರ್ಸ್ ಪಟ್ಟ

Posted By:
Subscribe to Oneindia Kannada

ಮನಿಲಾ, ಜನವರಿ 30: ಇಪ್ಪತ್ಮೂರು ವರ್ಷದ ಫ್ರಾನ್ಸ್ ನ ದಂತವೈದ್ಯ ವಿದ್ಯಾರ್ಥಿನಿ ಐರಿಸ್ ಮಿಟನೀರ್ ಅವರು 2017ನೇ ಸಾಲಿನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ.

ಮನಿಲಾದಲ್ಲಿ ಭಾರತೀಯ ಕಾಲಮಾನದ ಪ್ರಕಾರ, ಭಾನುವಾರ ಮಧ್ಯರಾತ್ರಿ ಜರುಗಿನ ಮಿಸ್ ಯೂನಿರ್ವರ್ಸ್ ಆಯ್ಕೆ ಅಂತಿಮ ಸುತ್ತಿನಲ್ಲಿ ಅವರು, ಹೈಟಿಯ ಸುಂದರಿ ರಾಕ್ವೆಲ್ ಪೆಲಿಸಿಯರ್ ಹಾಗೂ ಕೊಲಂಬಿಯಾದ ಸುಂದರಿ ಆಂಡ್ರಿಯಾ ಟೋವರ್ ಅವರನ್ನು ಹಿಂದಿಕ್ಕಿ ಈ ಪ್ರತಿಷ್ಠಿತ ಪಟ್ಟ ಗೆಲ್ಲುವಲ್ಲಿ ಯಶಸ್ವಿಯಾದರು.

Miss France Iris Mittenaere is crowned Miss Universe 2017

ಸುಂದರಿಯರ ಬುದ್ಧಿಮತ್ತೆ ಪರೀಕ್ಷೆಗಾಗಿ ಕೇಳಲಾಗುವ ಪ್ರಶ್ನೆಗಳಿಗೆ ಚುರುಕಾಗಿ, ಸ್ಫುಟವಾಗಿ, ಪಂಡಿತರೂ ತಲೆದೂಗುವಂಥ ಉತ್ತರ ನೀಡಿದ ಐರಿಸ್ ಗೆ ಫ್ರಾನ್ಸ್ ದೇಶದ ಗಡಿ ಮುಕ್ತ ನೀತಿಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ''ಫ್ರಾನ್ಸ್ ದೇಶವು ಜಾಗತೀಕರಣಕ್ಕೆ ತನ್ನನ್ನು ಎಷ್ಟು ಒಡ್ಡಿಕೊಳ್ಳಲು ಸಾಧ್ಯವೋ ಅಷ್ಟೂ ಒಡ್ಡಿಕೊಂಡಿದೆ. ನಮ್ಮಲ್ಲಿ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಆಶ್ರಯ ಕೊಡಲು ಸಿದ್ಧ ಇತರ ದೇಶಗಳಿಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರತಿಭೆಗಳನ್ನು ನೀಡಲೂ ಸಿದ್ಧ'' ಎಂದಿದ್ದು ಅವರ ಗೆಲವಿಗೆ ಕಾರಣ ಎಂದು ಹೇಳಲಾಗಿದೆ.

ಇನ್ನು, ಮಿಸ್ ಹೈಟಿ ಪೆಲಿಸಿಯರ್ ಅವರು ಮೊದಲ ರನ್ನರ್ ಆಪ್ ಆದರೆ, ಟೋವರ್ ಸಹಜವಾಗಿ ದ್ವಿತೀಯ ರನ್ನರ್ ಅಪ್ ಎಂದೆನಿಸಿದರು.

ಇತ್ತ, ಫ್ರಾನ್ಸ್ ವಿದ್ಯಾರ್ಥಿನಿಗೆ ಈ ಪಟ್ಟ ದೊರೆಯುತ್ತಿದ್ದಂತೆ ಸಮಾರಂಭದಲ್ಲಿದ್ದ ಜನ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ತಮ್ಮ ಗೌರವ ಸೂಚಿಸಿದರು. ಆನಂತರ ಮಾತನಾಡಿದ ಐರಿಸ್, ಮಿಸ್ ಯೂನಿರ್ವರ್ಸ್ ನಿಂದ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Of the three Miss Universe finalists — Miss France Iris Mittenaere, Miss Haiti Raquel Pelissier and Miss Colombia Andrea Tovar — he honors went to Miss France. ಇಪ್ಪತ್ಮೂರು ವರ್ಷದ ಫ್ರಾನ್ಸ್ ನ ದಂತವೈದ್ಯ ವಿದ್ಯಾರ್ಥಿನಿ ಐರಿಸ್ ಮಿಟನೀರ್ ಅವರು ಈ ಬಾರಿಯ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ.
Please Wait while comments are loading...