• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸಾವಿನ ಸಂಖ್ಯೆಯಲ್ಲಿ ಬ್ರಿಟನ್ ಹಿಂದಿಕ್ಕಿದ ಮೆಕ್ಸಿಕೋ!

|
Google Oneindia Kannada News

ದೆಹಲಿ, ಆಗಸ್ಟ್ 1: ಜಗತ್ತಿನಾದ್ಯಂತ 6.8 ಲಕ್ಷ ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಈ ಪೈಕಿ ಅಮೆರಿಕ ಒಂದರಲ್ಲೇ 156,747 ಜನರು ಕೊವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಕೊರೊನಾದಿಂದ ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ.

ಇದೀಗ, ಕೊವಿಡ್ ಸಾವಿನ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಯುಕೆ ದೇಶವನ್ನು ಮೆಕ್ಸಿಕೋ ಹಿಂದಿಕ್ಕಿದೆ. ಬ್ರಿಟನ್‌ನಲ್ಲಿ ಒಟ್ಟು 46,119 ಜನರು ಕೊರೊನಾದಿಂದ ಸಾವನ್ನಪ್ಪಿದ್ದರು. ಆದರೆ, ಶುಕ್ರವಾರದ ವರದಿ ಬಳಿಕ ಈ ಸಂಖ್ಯೆಯನ್ನು ಮೆಕ್ಸಿಕೋ ಹಿಂದಿಕ್ಕಿದೆ. ಈ ಮೂಲಕ ಮೆಕ್ಸಿಕೋ ಮೂರನೇ ಹೆಚ್ಚು ಸಾವು ಕಂಡ ದೇಶವಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನ 57 ಸಾವಿರ ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನ 57 ಸಾವಿರ ಕೊರೊನಾ ಸೋಂಕಿತರು ಪತ್ತೆ

ಅಮೆರಿಕ ನಂತರ ಅತಿ ಹೆಚ್ಚು ಕೊರೊನಾ ಸಾವು ಹೊಂದಿರುವ ಬ್ರೆಜಲ್‌ನಲ್ಲಿ 92,568 ಮಂದಿ ಮೃತಪಟ್ಟಿದ್ದಾರೆ. ಯುಕೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಐದನೇ ಸ್ಥಾನದಲ್ಲಿ 36,511 ಸಾವು ಕಂಡಿರುವ ಭಾರತವಿದೆ.

ಇನ್ನು ಅತಿ ಕೊರೊನಾ ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಅಮೆರಿಕ (4,705,889) ಮೊದಲು, ಬ್ರೆಜಿಲ್ (2,666,298) ಎರಡನೇ ಸ್ಥಾನ, ಭಾರತ (1,697,054) ಮೂರನೇ ಸ್ಥಾನ, ರಷ್ಯಾ (839,981) ನಾಲ್ಕನೇ ಸ್ಥಾನ, ದಕ್ಷಿಣ ಆಫ್ರಿಕಾ (493,183) ಐದನೇ ಸ್ಥಾನ ಹಾಗು ಮೆಕ್ಸಿಕೋ (416,179) ಆರನೇ ಸ್ಥಾನದಲ್ಲಿದೆ.

English summary
Mexico surpassed Britain as the country with the third-highest coronavirus death toll on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X