#MeToo ಅಭಿಯಾನದ ಫಲ ಮೆಕ್ ಡೋನಾಲ್ಡ್ ನಲ್ಲಿ ಕಿರುಕುಳ ಬಹಿರಂಗ
ನ್ಯೂಯಾರ್ಕ್ , ಮೇ 23: #MeToo ಅಭಿಯಾನದ ಮೂಲಕ ವಿಶ್ವದೆಲ್ಲೆಡೆ ಕಿರುಕುಳಕ್ಕೆ ಒಳಗಾದವರ ಅಳಲು ತೋಡಿಕೊಳ್ಳಲು ವೇದಿಕೆ ಒದಗಿಸಿದೆ. ಈಗ ಪ್ರತಿಷ್ಠಿತ ಮೆಕ್ ಡೋನಾಲ್ಡ್ ಫಾಸ್ಟ್ ಫುಡ್ ಮಳಿಗೆಗಳಲ್ಲಿ ನಡೆದಿರುವ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದಿದೆ.
ಸೇಂಟ್ ಲೂಯಿಸ್ ನ 15 ವರ್ಷ ವಯಸ್ಸಿನ ಲೈಂಗಿಕ ಕಿರುಕುಳ ಅನುಭವಿಸಿದ ದೂರು ನೀಡಿದ ಬಳಿಕ ಇದೇ ರೀತಿಯ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಮಳಿಗೆಯ ಸೂಪರ್ ವೈಸರ್ಸ್ ವಿರುದ್ಧ ದೂರು ದಾಖಲಾಗಿದೆ.
ಯುಎಸ್ ಉದ್ಯೋಗಿಗಳ ಆಯೋಗಕ್ಕೆ ಕಾನೂನು ಸಂಸ್ಥೆ ಮೂಲಕ ದೂರು ನೀಡಲಾಗಿದೆ. ಆದರೆ, ನಾವು ಈ ಬಗ್ಗೆ ಕಠಿಣ ನಿಯಮಗಳನ್ನು ಹೊಂದಿದ್ದು ಯಾವುದೇ ರೀತಿ ಕಿರುಕುಳ ಪ್ರಕರಣಗಳು ನಡೆದಿಲ್ಲ ಎಂದು ಮೆಕ್ ಡೊನಾಲ್ಡ್ ವಕ್ತಾರರಾದ ಟೆರಿ ಹಿಕಿ ಹೇಳಿದ್ದಾರೆ.

ಮೆಕ್ ಡೋನಾಲ್ಡ್ ನ ಫ್ರಾಂಚೈಸಿ ಹೊಂದಿರುವ ಆಹಾರ ಮಳಿಗೆಗಳಲ್ಲಿ ಈ ರೀತಿ ಘಟನೆ ನಡೆದಿದ್ದು, 15 ಯುಎಸ್ ಡಾಲರ್ ಮೊತ್ತದ ಕೇಸ್ ಮಹತ್ವದ್ದಾಗಿದೆ.
ಶಿಕಾಗೋ, ಡೆಟ್ರಾಯಿಟ್, ಮಿಯಾಮಿ, ಓರ್ಲಾಂಡೋ, ಫ್ಲೋರಿಡಾ, ಡರ್ ಹ್ಯಾಮ್, ಉತ್ತರ ಕರೋಲಿನಾ, ಲಾಸ್ ಏಂಜಲೀಸ್, ಮಿಸ್ಸೋರಿ ಹಾಗೂ ಕಾನ್ಸಾಸ್ ನಗರಗಳ ಮಳಿಗೆಗಳಲ್ಲೂ ಇದೇ ರೀತಿ ಪ್ರಕರಣಗಳು ಬೆಳಕಿಗೆ ಬಂದಿವೆ.












Click it and Unblock the Notifications