• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಲಿನಂತಹ ಸಮುದ್ರದ ಮೇಲೆ ಆಯಿಲ್ ವಿಷದ ಆತಂಕ!

|
Google Oneindia Kannada News

ಮಾರಿಷಸ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ..? ಸ್ವಚ್ಛಂದವಾದ -ಕಡಲ ತೀರ, ಹಾಲ್ನೊರೆಯಂತೆ ಕಂಗೊಳಿಸುವ ಅಲ್ಲಿನ ಸಮುದ್ರದ ನೀರು. ಇನ್ನೇನು ಬೇಕು ಪ್ರಕೃತಿಯ ಅಂದ ಸವಿಯಲು. ಆದರೆ ಜಪಾನ್ ಮೂಲದ ಕಂಪನಿಯೊಂದರ ಹಡಗು ಈ ಪ್ರಾಕೃತಿಕ ಸೌಂದರ್ಯಕ್ಕೆ ವಿಷ ಸುರಿದಿದೆ. 2 ವಾರದ ಹಿಂದೆ ಮಾರಿಷಸ್ ತೀರಕ್ಕೆ ಬಂದಿದ್ದ ಜಪಾನ್‌ ಮೂಲದ ಸರಕು ಸಾಗಣೆ ಹಡಗು ತೀವ್ರ ಪ್ರಮಾಣದಲ್ಲಿ ಹಾನಿಗೀಡಾಗಿ ಮುಳುಗುತ್ತಿದೆ. ಇದೇ ಹಡಗಿನಿಂದ ಸೋರಿಕೆಯಾಗುತ್ತಿರುವ ಅಪಾರ ಪ್ರಮಾಣದ ಡೀಸೆಲ್‌ ಮಾರಿಷಸ್ ಕಡಲ ತೀರವನ್ನು ಆವರಿಸಿದೆ.

   ಕೇಂದ್ರದ ಮುಂದೆ ಪರಿಹಾರ ಕೇಳೋಕೆ ಇವರಿಗೆ ಧಮ್ ಇಲ್ಲ | Oneindia Kannada

   ಡೀಸೆಲ್ ವಿಷ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದ ಹವಳದ ದಂಡೆಗಳು ಹಾಗೂ ಮತ್ಸ್ಯ ಸಂಪತ್ತಿಗೆ ಅಪಾಯ ಎದುರಾಗಿದೆ. ಜಲಚರಗಳ ಕಳೆಬರಹ ಸಾಗರ ತೀರಕ್ಕೆ ತೇಲಿ ಬರುತ್ತಿವೆ. ಈಗಾಗಲೇ ತುರ್ತು ಪರಿಸ್ಥಿತಿ ಘೋಷಿಸಿರುವ ಮಾರಿಷಸ್ ಸರ್ಕಾರ, ಸಾಗರ ಹಾಗೂ ಸಾಗರ ತೀರವನ್ನು ಕಾಪಾಡಲು ಹೆಣಗಾಡುತ್ತಿದೆ. ನೂರಾರು ಸ್ವಯಂ ಸೇವಕರು ಪ್ರಕೃತಿ ಮಾತೆಯ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಎಲ್ಲೆಲ್ಲೂ ಹರಡಿರುವ ಅಪಾರ ಪ್ರಮಾಣದ ಡೀಸೆಲ್ ಸಾಗರಕ್ಕೆ ಭಾರಿ ಹಾನಿ ಮಾಡುವ ಮುನ್ಸೂಚನೆ ನೀಡಿದೆ.

   ‘ನಾಗಸಾಕಿ ಶಿಪ್ಪಿಂಗ್ ಕಂಪನಿ’ ಎಡವಟ್ಟು..!

   ‘ನಾಗಸಾಕಿ ಶಿಪ್ಪಿಂಗ್ ಕಂಪನಿ’ ಎಡವಟ್ಟು..!

   ಈಗ ತೀವ್ರವಾಗಿ ಹಾನಿಗೀಡಾಗಿರುವ ಹಡಗು ಜಪಾನ್‌ನ ‘ನಾಗಸಾಕಿ ಶಿಪ್ಪಿಂಗ್ ಕಂಪನಿ'ಗೆ ಸೇರಿದ್ದಾಗಿದೆ. ಈ ಕಂಪನಿಯ ‘ಎಂ.ವಿ.ವಾಕಾಶಿಯೊ' ಎಂಬ ಹೆಸರಿನ ಹಡಗು ಜುಲೈ 25 ರಂದು ಅಪಘಾತಕ್ಕೆ ಈಡಾಗಿತ್ತು. ಮಾರಿಷಸ್ ಕರಾವಳಿಯ ಆಗ್ನೇಯ ಭಾಗದಲ್ಲಿ ಸಾಗರ ತಳದ ಬಂಡೆಗಲ್ಲಿಗೆ ಹೊಡೆದು ಹಡಗು ದುರಂತಕ್ಕೀಡಾಯಿತು. ದುರಂತದ ಬಳಿಕ ಅರ್ಧಭಾಗ ಮುಳುಗಿರುವ ಹಡಗಿನಿಂದ ಅದರಲ್ಲಿದ್ದ ಕೆಲಸಗಾರರನ್ನು ರಕ್ಷಿಸಲಾಗಿದೆ. ಆದರೆ ತೈಲವನ್ನು ಹೊರತೆಗೆಯಲು ಸಾಧ್ಯವಾಗದೇ ಇದ್ದಿದ್ದು ಎಡವಟ್ಟಿಗೆ ಕಾರಣವಾಗಿದೆ.

   ಒಂದಲ್ಲ.. ಎರಡಲ್ಲ.. 200 ಟನ್‌ ಡೀಸೆಲ್‌..!

   ಒಂದಲ್ಲ.. ಎರಡಲ್ಲ.. 200 ಟನ್‌ ಡೀಸೆಲ್‌..!

   ಇದು ಸರಕು ಸಾಗಣಿಕೆ ಮಾಡುವ ಹಡಗು. ಆದರೂ ಈ ಹಡಗು ಮಾರಿಷಸ್ ತೀರದಲ್ಲಿ ಅಪಘಾತಕ್ಕೆ ತುತ್ತಾಗುವ ಸಂದರ್ಭ ಖಾಲಿ ಇದ್ದರೂ 200 ಟನ್‌ ಡೀಸೆಲ್‌ ಹಾಗೂ 3,800 ಬಂಕರ್‌ ತೈಲ ದಾಸ್ತಾನು ಹೊಂದಿತ್ತು. ಈ ತೈಲ ಇದೀಗ ಸಾಗರಕ್ಕೆ ಸೋರಿಕೆಯಾಗುತ್ತಿದೆ. ನೆಲಕಚ್ಚಿರುವ ಹಡಗಲ್ಲಿ ದೊಡ್ಡ ಬಿರುಕು ಕಂಡು ಬಂದಿದ್ದು, ಹಡಗು 2 ತುಂಡಾಗುವ ಸಾಧ್ಯತೆಗಳಿವೆ ಎಂದು ಮಾರಿಷಸ್ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

   ಕೈಚೆಲ್ಲಿ ಕೂತ ಮಾರಿಷಸ್ ಸರ್ಕಾರ..?

   ಕೈಚೆಲ್ಲಿ ಕೂತ ಮಾರಿಷಸ್ ಸರ್ಕಾರ..?

   ತೈಲ ಸೋರಿಕೆ ಅಪಾರ ಪ್ರಮಾಣದಲ್ಲಿ ಕಂಡುಬಂದ ತಕ್ಷಣ ತುರ್ತು ಪರಿಸ್ಥಿತಿ ಘೋಷಿಸಿ ಕಾರ್ಯಾಚರಣೆ ನಡೆಸಿದ್ದರೂ ದುರಂತ ತಪ್ಪಿಸಲು ಸಾಧ್ಯವಾಗಿಲ್ಲ. ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಾಗಿ ತೈಲ ಸೋರಿಕೆ ತಡೆಯುವ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಹೀಗಾಗಿ ಕಡಲ ತೀರದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು. ಹೀಗೆ ಮಾರಿಷಸ್ ಸರ್ಕಾರದ ಅಧಿಕಾರಿಗಳ ಮಾತು ಕೇಳಿದರೆ ಪರಿಸ್ಥಿತಿ ಎದುರು ಮಂಡಿಯೂರಿದಂತೆ ಕಾಣುತ್ತಿದೆ.

   ಫ್ರಾನ್ಸ್‌ ನೆರವು ಕೋರಿದ ಮಾರಿಷಸ್..!

   ಫ್ರಾನ್ಸ್‌ ನೆರವು ಕೋರಿದ ಮಾರಿಷಸ್..!

   ಪರಿಸ್ಥಿತಿ ಎಷ್ಟು ಕಠೋರವಾಗಿದೆ ಎಂದರೆ ಇಷ್ಟು ದಿನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ನೀಲಿ ನೀಲಿ ಸಾಗರವೀಗ ಕಪ್ಪುಗಟ್ಟಿಹೋಗಿದೆ. ಸದ್ಯ ಉಪಗ್ರಹಗಳ ದೃಶ್ಯ ಪರಿಶೀಲಿಸಿದರೂ ಮಾರಿಷಸ್ ಕಡಲ ತೀರ ಕಪ್ಪುಕಪ್ಪಾಗಿ ಕಾಣುತ್ತಿದೆ. ನೀರಿನಲ್ಲಿ ಅಪಾರ ಪ್ರಮಾಣದ ಇಂಧನ ಬೆರೆತಿದೆ. ಪರಿಸ್ಥಿತಿ ನಿಭಾಯಿಸಲು ಮಾರಿಷಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಫ್ರಾನ್ಸ್‌ ನೆರವಿಗೆ ಮೊರೆಯಿಡಲಾಗಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್‌‌ ಮ್ಯಾಕ್ರನ್‌ಗೆ ಈ ಕುರಿತು ಮನವಿ ಮಾಡಲಾಗಿದೆ ಅಂತಾ ಮಾರಿಷಸ್‌ ಪ್ರಧಾನ ಪ್ರವಿಂದ್‌ ಜುಗ್ನಾಥ್‌ ಮಾಹಿತಿ ನೀಡಿದ್ದಾರೆ.

   ಹಡಗಿನ ವಿರುದ್ಧ FIR ದಾಖಲು..!

   ಹಡಗಿನ ವಿರುದ್ಧ FIR ದಾಖಲು..!

   ತನ್ನ ಸುಂದರ ಕಡಲ ತೀರವನ್ನು ಹಾಳುಗೆಡವಿದ ಜಪಾನ್‌ನ ‘ಒಕಿಯೊ ಮಾರಿಟೈಮ್‌ ಕಾರ್ಪೊರೇಷನ್‌ & ನಾಗಸಾಕಿ ಶಿಪ್ಪಿಂಗ್‌ ಕಂಪನಿ'‌ ವಿರುದ್ಧ ಮಾರಿಷಸ್ ಸರ್ಕಾರ ರೊಚ್ಚಿಗೆದ್ದಿದೆ. ಈ ಕಂಪನಿ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಪ್ರಕರಣ ದಾಖಲಾದ ಹಿನ್ನೆಲೆ ತನಿಖೆ ನಡೆಯುತ್ತಿದ್ದು, ಈ ಕಂಪನಿಗೆ ಭಾರಿ ಪ್ರಮಾಣದ ದಂಡ ವಿಧಿಸುವ ಸಾಧ್ಯತೆಗಳು ದಟ್ಟವಾಗಿವೆ.

   English summary
   A grounded ship off the coast of Mauritius has leaked tonnes of crude oil into the island's clear waters. But Salvors have bit managed to halt the spilling oil from the grounded Wakashio ship off the south coast of Mauritius.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X