ಭಾರತದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಮಸೂದ್ ಸೆರೆ

Posted By:
Subscribe to Oneindia Kannada

ಇಸ್ಲಾಮಾಬಾದ್, ಜ. 13: ಭಾರತದ ಪಠಾಣ್ ಕೋಟ್ ವಾಯುನೆಲೆ ದಾಳಿ ರೂವಾರಿ ಜೈಶ್ ಎ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ.

ಪಠಾಣ್ ಕೋಟ್ ವಾಯುನೆಲೆ ದಾಳಿ ಸಂಚು ರೂಪಿಸಿದ ಉಗ್ರರ ವಿರುದ್ಧ ಪಾಕಿಸ್ತಾನ ಸರ್ಕಾರ ಕೊನೆಗೂ ಕ್ರಮ ಜರುಗಿಸಿದೆ. ಮೌಲನಾ ಮಸೂದ್ ಅಜರ್ ಹಾಗೂ ಅವರ ನಾಲ್ಕು ಸಹಚರರನ್ನು ಬಂಧಿಸಲಾಗಿದೆ ಎಂದು ಬುಧವಾರ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ದೃಢಪಡಿಸಿದ್ದಾರೆ.

Maulana Masood Azhar

ಉಗ್ರರು ನೆಲೆಸಿರುವ 12 ತಾಣಗಳ ಮೇಲೆ ದಾಳಿ ನಡೆಸಿ ಅನೇಕ ಮುಖ್ಯಸ್ಥರನ್ನು ಸೆರೆ ಹಿಡಿಯಲಾಗಿದೆ. ಎಲ್ಲರ ವಿಚಾರಣೆ ಅಜ್ಞಾತ ಸ್ಥಳದಲ್ಲಿ ನಡೆಸಲಾಗುತ್ತಿದೆ ಎಂಬ ಸುದ್ದಿ ಬಂದಿದೆ. 2001ರ ಸಂಸತ್ ದಾಳಿ ಸಂಚು ರೂಪಿಸಿದ ಆರೋಪ ಕೂಡಾ ಅಜರ್ ಮೇಲಿದೆ. ಆ ದಾಳಿಯಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ ಸೇರಿದಂತೆ 9 ಜನ ಭಾರತೀಯರು ಸಾವನ್ನಪ್ಪಿದ್ದರು.

ಇದಕ್ಕೂ ಮುನ್ನ 1994ರಲ್ಲಿ ನಕಲಿ ಪೋರ್ಚ್ಗೀಸ್ ಪಾಸ್ ಪೋರ್ಟ್ ಹೊಂದಿದ್ದ ಕಾರಣಕ್ಕೆ ಕಾಶ್ಮೀರದಲ್ಲಿ ಅಜರ್ ಸೆರೆಸಿಕ್ಕಿದ್ದ. 1999ರಲ್ಲಿ ಇತರೆ ಇಬ್ಬರು ಪಾಕಿಸ್ತಾನಿಗಳ ಜೊತೆ ಜೈಲಿನಿಂದ ಹೊರ ಬಂದಿದ್ದ. ದಕ್ಷಿಣ ಆಫ್ಘಾನಿಸ್ತಾನದ ಕಂದಹಾರದಲ್ಲಿ ವಿಮಾನ ಹೈಜಾಕ್ ಮಾಡಿದ್ದರಿಂದ ಭಾರತ ಸರ್ಕಾರ ವಿಧಿ ಇಲ್ಲದಎ 155ಜನ ಪ್ರಯಾಣಿಕರ ಜೀವ ಉಳಿಸಲು ಅಜರ್ ಹಾಗೂ ಇನ್ನಿಬ್ಬರು ಪಾಕಿಸ್ತಾನಿ ಉಗ್ರರನ್ನು ಮುಕ್ತಗೊಳಿಸಬೇಕಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pakistan has reportedly detained Maulana Masood Azhar, leader of Jaish-e-Mohammed, the terror group blamed by India for the deadly attack on the Pathankot Air Force base earlier this month, in which seven military personnel were martyred.
Please Wait while comments are loading...