ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಯ ಮೇಲ್ಮೈಯಿಂದ 660 ಕಿಮೀ ಕೆಳಗೆ ಬೃಹತ್ 'ಸಾಗರ' ಪತ್ತೆ: ಅಪರೂಪದ ವಜ್ರದಲ್ಲಿ ಅಡಗಿದ ರಹಸ್ಯ

|
Google Oneindia Kannada News

ಭೂಮಿಯ ಅತ್ಯಂತ ಆಳದಲ್ಲಿ 'ಸಾಗರ' ಇರುವುದನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ. ಅದರಲ್ಲಿ ಸಾಕಷ್ಟು ನೀರಿದ್ದು, ಅದು ನಮ್ಮ ಪ್ರಸ್ತುತ 6 ಸಾಗರಗಳಿಗೆ ಸ್ಥಳಾವಕಾಶ ಕಲ್ಪಿಸಬಹುದಾದಷ್ಟು ದೊಡ್ಡದಾಗಿದೆ ಎಂದು ಹೇಳಲಾಗುತ್ತಿದೆ. ತಂಡವು 2014 ರಿಂದ ಈ ಸಂಶೋಧನೆಯನ್ನು ಆರಂಭಿಸಿದೆ. ಈಗ ತಂಡ ಈ ಬೃಹತ್ ಸಾಗರವನ್ನು ಕಂಡುಕೊಂಡಿದಿದೆ. ಈ ಸಂಶೋಧನೆಯು ಭವಿಷ್ಯದಲ್ಲಿ ಭೂಮಿಯ ಆಳದಲ್ಲಿ ಅಡಗಿರುವ ಅನಂತ ರಹಸ್ಯಗಳನ್ನು ಬಹಿರಂಗಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿರುವ ಗೋಥೆ ವಿಶ್ವವಿದ್ಯಾಲಯದ ಭೂವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಫ್ರಾಂಕ್ ಬ್ರೆಂಕರ್ ಅವರನೊಳ್ಳಗೊಂಡ ತಂಡ ಈ ಸಂಶೋಧನೆಯನ್ನು ಮಾಡಿದೆ. ಈ ತಂಡ ಆಫ್ರಿಕಾದ ಬೋಟ್ಸ್ವಾನದಲ್ಲಿ ಸಿಕ್ಕ ವಜ್ರವನ್ನು ಪರಿಶೀಲಿಸಿದಾಗ ಈ ರಹಸ್ಯ ಬಯಲಾಗಿದೆ. ಇದರಿಂದ ಭೂಮಿಯ ಕೆಳಗೆ 660 ಕಿಮೀ ಆಳದಲ್ಲಿ ಬೃಹತ್ 'ಸಾಗರ' ಪತ್ತೆಯಾಗಿದೆ.

ಜರ್ಮನಿಯ ಜಿ-7 ಶೃಂಗಸಭೆಯಲ್ಲಿ ಮೋದಿ, ಬೈಡೆನ್, ಮ್ಯಾಕ್ರೋನ್, ಟ್ರುಡೋ ಚರ್ಚೆ ಜರ್ಮನಿಯ ಜಿ-7 ಶೃಂಗಸಭೆಯಲ್ಲಿ ಮೋದಿ, ಬೈಡೆನ್, ಮ್ಯಾಕ್ರೋನ್, ಟ್ರುಡೋ ಚರ್ಚೆ

ಭೂಮಿಯ ಮೇಲಿನ ಮತ್ತು ಕೆಳಗಿನ ನಡುವಿನ ಸಂಕ್ರಮಣ ವಲಯದಲ್ಲಿ ಬೃಹತ್ ಪ್ರಮಾಣದ 'ನೀರು' ಇದೆ. ಅಂತರಾಷ್ಟ್ರೀಯ ಸಂಶೋಧನೆಯಿಂದ ಈ ಮಾಹಿತಿ ಬಂದಿದೆ. ಈ ಸಂಶೋಧನೆಗಾಗಿ ಸಂಶೋಧಕರು ಭೂಮಿಯ ಮೇಲ್ಮೈಯಿಂದ 660 ಕಿ.ಮೀ ಕೆಳಗೆ ದೊರೆತ ಅಪರೂಪದ ವಜ್ರವನ್ನು ಪರಿಶೀಲಿಸಿದ್ದಾರೆ. ಈ ಸಂಶೋಧನೆಗೆ ರಾಮನ್ ಸ್ಪೆಕ್ಟ್ರೋಸ್ಕೋಪಿ ಮತ್ತು FTIR ಸ್ಪೆಕ್ಟ್ರೋಮೆಟ್ರಿ ತಂತ್ರಗಳನ್ನು ಸಹ ಬಳಸಲಾಗಿದೆ. ಈ ಸಂಶೋಧನೆಯು ದೀರ್ಘಕಾಲ ಅಸ್ತಿತ್ವದಲ್ಲಿದ್ದ ಸ್ಥಳವನ್ನು ದೃಢೀಕರಿಸುತ್ತದೆ. ಅಂದರೆ ಭೂಮಿಯ ಒಳಭಾಗದಲ್ಲಿಯೂ ಸಮುದ್ರದ ನೀರು ಬಹಳಷ್ಟು ಶೇಖರಣೆಯಾಗುತ್ತದೆ. ಇದೊಂದು ದೊಡ್ಡ ಆವಿಷ್ಕಾರವಾಗಿದೆ.

ಅಪರೂಪದ ವಜ್ರದಲ್ಲಿ ಅಡಗಿದ 'ರಹಸ್ಯ'

ಅಪರೂಪದ ವಜ್ರದಲ್ಲಿ ಅಡಗಿದ 'ರಹಸ್ಯ'

ಹೊಸ ಆವಿಷ್ಕಾರ ಎಂದರೆ ಭೂಮಿ ಅದರ ಆಂತರಿಕ ಭಾಗವನ್ನು ಸಹ ಒಳಗೊಂಡಿದೆ. ಫ್ರಾಂಕ್‌ಫರ್ಟ್‌ನಲ್ಲಿರುವ ಗೋಥೆ ವಿಶ್ವವಿದ್ಯಾಲಯದ ಭೂವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಫ್ರಾಂಕ್ ಬ್ರೆಂಕರ್, "ಈ ಸಾಗರದ ಕೆಸರುಗಳು ಹೆಚ್ಚಿನ ಪ್ರಮಾಣದ ನೀರು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಹಿಡಿದಿಟ್ಟುಕೊಳ್ಳಬಲ್ಲವು" ಎಂದು ಹೇಳದ್ದಾರೆ. ಆದರೆ ಹೆಚ್ಚು ಸ್ಥಿರವಾದ, ಹೈಡ್ರಾಸ್ ಖನಿಜಗಳು ಮತ್ತು ಕಾರ್ಬೋನೇಟ್‌ಗಳ ರೂಪದಲ್ಲಿ ಪರಿವರ್ತನೆಯ ವಲಯವನ್ನು ಎಷ್ಟು ಪ್ರಮಾಣದಲ್ಲಿ ಪ್ರವೇಶಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಲ್ಲಿ ದೊಡ್ಡ ಪ್ರಮಾಣದ ನೀರು ಇದೆ ಎಂಬುದು ಮಾತ್ರ ಅಸ್ಪಷ್ಟವಾಗಿದೆ.

ವಿಜ್ಞಾನಿಗಳ ಪ್ರಕಾರ, ಪ್ರಸ್ತುತ ಪರಿಸ್ಥಿತಿಗಳು ಅಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಉಪಸ್ಥಿತಿಯನ್ನು ತೋರಿಸುತ್ತವೆ. ರಿಂಗ್‌ವುಡೈಟ್‌ನಂತಹ ದಟ್ಟವಾದ ಖನಿಜಗಳು ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲವು. ಇದು ಸೈದ್ಧಾಂತಿಕವಾಗಿ ನಮ್ಮ ಸಾಗರಗಳಿಗಿಂತ 6 ಪಟ್ಟು ಹೆಚ್ಚಿನ ಪ್ರಮಾಣದ ನೀರಾಗಿರಬಹುದು ಎಂದು ಬ್ರೆಂಕರ್ ಹೇಳುತ್ತಾರೆ.

ಭೂಮಿಯ ಒಳಭಾಗದದಲ್ಲಿ ನೀರಿನಿಂದ ತುಂಬಿದ ಬಂಡೆಗಳು

ಭೂಮಿಯ ಒಳಭಾಗದದಲ್ಲಿ ನೀರಿನಿಂದ ತುಂಬಿದ ಬಂಡೆಗಳು

ಆಫ್ರಿಕಾದ ಬೋಟ್ಸ್ವಾನದ ಅಪರೂಪದ ವಜ್ರದ ವಿಶ್ಲೇಷಣೆಯಿಂದ ಸಂಶೋಧಕರು ಈ ಯಶಸ್ಸನ್ನು ಸಾಧಿಸಿದ್ದಾರೆ. ಈ ವಜ್ರವು ಭೂಮಿಯ 660 ಕಿಮೀ ಆಳದಲ್ಲಿ ರೂಪುಗೊಂಡಿದೆ. ಈ ಪ್ರದೇಶವು ಭೂಮಿಯ ಮೇಲಿನ ಮತ್ತು ಕೆಳಗಿನ ನಡುವಿನ ಪರಿವರ್ತನೆಯ ವಲಯದ ಭಾಗವಾಗಿದೆ. ಈ ಪ್ರದೇಶದಲ್ಲಿ ವಜ್ರವು ಬಹಳ ಅಪರೂಪವಾಗಿರುತ್ತದೆ. ಇದು ಅತ್ಯಂತ ಆಳವಾಗಿ ಕಂಡುಬರುವ ವಜ್ರಗಳಲ್ಲಿ ಒಂದಾಗಿದೆ. ಈ ಕಲ್ಲಿನಲ್ಲಿ ಬಹಳಷ್ಟು ರಿಂಗ್‌ವುಡೈಟ್ ಇದೆ, ಇದು ಹೆಚ್ಚಿನ ಪ್ರಮಾಣದ ನೀರಿನ ಸೂಚಕವಾಗಿದೆ.

ಇಷ್ಟೇ ಅಲ್ಲ, ಸಂಶೋಧನಾ ಗುಂಪು ಕಲ್ಲಿನ ರಾಸಾಯನಿಕ ಸಂಯೋಜನೆಯನ್ನು ಸಹ ಮಾಡಿದೆ. ಇದು ಪ್ರಪಂಚದ ಬಸಾಲ್ಟ್‌ನಲ್ಲಿ ಕಂಡುಬರುವ ಪ್ರತಿಯೊಂದು ಮ್ಯಾಂಟಲ್ ರಾಕ್‌ನಲ್ಲಿರುವಂತೆಯೇ ಇತ್ತು. ಪ್ರೊಫೆಸರ್ ಫ್ರಾಂಕ್ ಬ್ರೆಂಕರ್ ಅವರು ಹೇಳುವ ಪ್ರಕಾರ 'ಅಪರೂಪದ ವಜ್ರದಿಂದಾಗಿ ಇಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ ಎಂದು ಈ ಸಂಶೋಧನೆ ತೋರಿಸುತ್ತದೆ. ಜೊತೆಗೆ ಇದು ಭೂಮಿಯೊಳಗಿನ ಸಾಗರದ ಕಲ್ಪನೆಗೆ ಇದು ನಮ್ಮನ್ನು ಒಂದು ಹೆಜ್ಜೆ ಹತ್ತಿರಕ್ಕೆ ಕರೆಯುತ್ತದೆ. ವ್ಯತ್ಯಾಸವೆಂದರೆ ಅದು ಸಾಗರವಲ್ಲ, ಆದರೆ ನೀರಿನ ಬಂಡೆಯಂತೆ, ನಾವು ತೇವವಾಗುವುದಿಲ್ಲ ಅಥವಾ ಅದರಿಂದ ನೀರು ತೊಟ್ಟಿಕ್ಕುವುದನ್ನು ನೋಡುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂತಹ ಅಪರೂಪದ ವಜ್ರ 2014ರಲ್ಲೂ ಪತ್ತೆ

ಇಂತಹ ಅಪರೂಪದ ವಜ್ರ 2014ರಲ್ಲೂ ಪತ್ತೆ

ಹೈಡ್ರಸ್ ರಿಂಗ್‌ವುಡೈಟ್ ಅನ್ನು ಮೊದಲು 2014 ರಲ್ಲಿ ವಜ್ರದಂತಹ ಪರಿವರ್ತನೆಯ ವಲಯದಲ್ಲಿ ಕಂಡುಹಿಡಿಯಲಾಯಿತು. ಬ್ರೆಂಕರ್ ಆ ಸಂಶೋಧನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ, ಅದು ತುಂಬಾ ಚಿಕ್ಕದಾಗಿದ್ದು, ಅದರ ರಾಸಾಯನಿಕ ಸಂಯೋಜನೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆದರೆ, ಬೋಟ್ಸ್ವಾನಾದಿಂದ ಈಗ ಪತ್ತೆಯಾದ ವಜ್ರವು 1.5 ಸೆಂ.ಮೀ.ಗಳಷ್ಟು ದೊಡ್ಡದಾಗಿದೆ, ಅದರ ರಾಸಾಯನಿಕ ಸಂಯೋಜನೆಯನ್ನು ಪತ್ತೆಮಾಡಲು ಸುಲಭವಾಗಿದೆ. 2014 ರ ಆರಂಭಿಕ ಮಾಹಿತಿಯನ್ನು ತಿಳಿಯಲು ಸಹಾಯ ಮಾಡಿದೆ.

ಅನೇಕ ರೀತಿಯ ಸಂಶೋಧನೆಗಳಿಗೆ ದಾರಿ

ಅನೇಕ ರೀತಿಯ ಸಂಶೋಧನೆಗಳಿಗೆ ದಾರಿ

ಇದು ಅಂತಹ ಸಂಶೋಧನೆಯಾಗಿದ್ದು, ಭವಿಷ್ಯದಲ್ಲಿ ಭೂಮಿಯೊಳಗೆ ಅಡಗಿರುವ ರಹಸ್ಯಗಳ ಇನ್ನಷ್ಟು ಪದರಗಳನ್ನು ತೆರೆಯಬಹುದು. ಭವಿಷ್ಯದಲ್ಲಿ, ಇದು ಭೂ ವಿಜ್ಞಾನಕ್ಕೆ ಹೊಸ ದಿಕ್ಕನ್ನು ನೀಡಬಹುದು ಮತ್ತು ವಿವಿಧ ರೀತಿಯ ಖನಿಜಗಳು, ಬಂಡೆಗಳ ರಚನೆಯ ಪ್ರಕ್ರಿಯೆಯ ಮೇಲೆ ಹೊಸ ಬೆಳಕನ್ನು ಚೆಲ್ಲಬಹುದು. ನಿಸ್ಸಂಶಯವಾಗಿ, ಈ ಸಂಶೋಧನೆಯು ಇನ್ನೂ ಅನೇಕ ರೀತಿಯ ಸಂಶೋಧನೆಗಳಿಗೆ ದಾರಿ ತೆರೆದಿದೆ.

English summary
A team led by Professor Frank Brenker at the Institute of Geology at Goethe University in Frankfurt, Germany, has discovered the deepest 'ocean' on Earth. It has so much water that it is said to be big enough to accommodate our current 6 oceans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X