Earthquake: 8.7 ತೀವ್ರತೆ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
ಟೋಕಿಯೊ, ಜುಲೈ 30: ರಷ್ಯಾದ ಕರಾವಳಿ ಭಾಗದ ಪೆಸಿಫಿಕ್ ಸಾಗರದಲ್ಲಿ 8.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ರಷ್ಯಾದ ಕುರಿಲ್ ದ್ವೀಪಗಳು ಹಾಗೂ ಜಪಾನ್‌ನ ಹೊಕ್ಕೈಡೊ ಕರಾವಳಿಗೆ ಸುನಾಮಿ ಅಲೆಗಳು ಸೃಷ್ಟಿಯಾಗಿದ್ದು, ತೀರದಲ್ಲಿ ಸಾಕಷ್ಟು ಸದ್ದು ಕೇಳಿ ಬಂದ ಘಟನೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ ಎಂದು ಜಪಾನ್ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೊಕ್ಕೈಡೊದ ಪೂರ್ವ ಕರಾವಳಿಯ ನೆಮುರೋದಲ್ಲಿ 30 ಸೆಂಟಿಮೀಟರ್ ಎತ್ತರದ ಅಲೆ ದಾಖಲಾಗಿವೆ. ಹೆಚ್ಚಿನ ಅಲೆಗಳ ಸಾಧ್ಯತೆಯೇ ಇದೆ. ರಷ್ಯಾದ ಸೆವೆರೋ-ಕುರಿಲ್ಸ್ಕ್ ಪ್ರದೇಶದಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಬಂದಪ್ಪಳಿಸಿವೆ. ಹವಾಮಾನ ಇಲಾಖೆ ಜತೆಗಿನ ನಿರಂತರ ಸಂಪರ್ಕದಲ್ಲಿದ್ದ ನಮ್ಮ ಸರ್ಕಾರ ಸಮುದ್ರ ಅಕ್ಕಪಕ್ಕದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ವ್ಯಾಲೆರಿ ಲಿಮರೆಂಕೊ ತಿಳಿಸಿದ್ದಾರೆ.

ಅತಿ ದೊಡ್ಡ ಭೂಕಂಪ
ಪೆಸಿಫಿಕ್ ಸಾಗರದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಹವಾಯಿ, ಜಪಾನ್, ಚಿಲಿ, ಸೊಲೊಮನ್ ದ್ವೀಪಗಳು ಮತ್ತು ಇತರ ದೇಶಗಳಲ್ಲಿ 1ರಿಂದ 3 ಮೀ. ಎತ್ತರದ ಅಲೆಗಳ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಪಾನ್‌ನಲ್ಲಿ ಅಲ್ಲಿನ ಸಮಯದ ಪ್ರಕಾರ ಬೆಳಗ್ಗೆ 8:25ಕ್ಕೆ ಸಂಭವಿಸಿದೆ. ಈ ಭೂಕಂಪನದ ತೀವ್ರತೆ 19.3 ಕಿಮೀ ಆಳದಲ್ಲಿ ಕೆಂದ್ರಿತವಾಗಿತ್ತು. ಕಮ್ಚಟ್ಕಾದ ಪ್ರಮುಖ ನಗರಗಳಲ್ಲಿ ಅದರ ತೀವ್ರತೆ ದಾಖಲಾಗಿದೆ. ಭೂಮಿ ಕಂಪನಿಸುತ್ತಿದ್ದಂತೆ ಜನರು ರಸ್ತೆಗಳೆಡೆ ದಿಕ್ಕಾಪಾಲಾಗಿ ಓಡಿದರು. ಮನೆಯಿಂದ ಹೊರ ಬಂದ ದೃಶ್ಯಗಳು ಸಾಮಾನ್ಯವಾಗಿತ್ತು. ಸದ್ಯ ಕಮ್ಚಟ್ಕಾದಲ್ಲೂ ವಿದ್ಯುತ್ ಕಡಿತಗೊಳಿಸಲಾಗಿದೆ. ಅಗತ್ಯ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮುದ್ರ ತೀರ ಪ್ರದೇಶ ನಿವಾಸಿಗಳ ಒಂದಷ್ಟು ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ವರದಿ ಆಗಿದೆ. ಕರಾವಳಿ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಇದೇ ತಿಂಗಳ ಜುಲೈ ಬರೋಬ್ಬರಿ ಐದು ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಜನರು ಭಯಬೀತರಾಗಿದ್ದಾರೆ. 7.4 ತೀವ್ರತೆಯದ್ದೆ ದೊಡ್ಡ ಭೂಕಂಪ ಎನ್ನಲಾಗಿತ್ತು. ಇಂದು ಕಮ್ಚಟ್ಕಾ ಬಳಿ ಸಮುದ್ರದಲ್ಲಿ ಅಪ್ಪಳಿಸಿದ್ದು ಬೃಹತ್ ಭೂಕಂಪನವಾಗಿದೆ. ಇದು ಸುಮಾರು 20 ಕಿಲೋಮೀಟರ್ ಆಳದಲ್ಲಿ ಕಂಪಿಸಿದೆ. 1.80 ಲಕ್ಷ ಜನಸಂಖ್ಯೆಯ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿ ನಗರದಿಂದ ಪೂರ್ವಕ್ಕೆ 144 ಕಿಲೋಮೀಟರ್ ದೂರದಲ್ಲಿ ಭೂಮಿ ಪ್ರಬಲವಾಗಿ ಕಂಪಿಸಿದೆ ಎಂದು ವರದಿ ಆಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications