ಅಲಸ್ಕಾದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ
ಅಲಸ್ಕಾ, ಜುಲೈ 22 : ಅಲಸ್ಕಾದ ಪೆನಿನ್ಸುಲಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ಸುನಾಮಿ ಸಂಭವಿಸುವ ಮುನ್ಸೂಚನೆ ಸಿಕ್ಕಿದೆ. ಕರಾವಳಿ ಭಾಗದಲ್ಲಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ.
ಅಮೆರಿಕದ ಅಲಸ್ಕಾ ಸಮೀಪ ಬುಧವಾರ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಕಂಪನ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದುವಿನ ಸುಮಾರು 300 ಮೀಟರ್ ವ್ಯಾಪ್ತಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಭಾರತೀಯ ಕಾಲಮಾನ ಸುಮಾರು 11.30ರ ಹೊತ್ತಿಗೆ ಭೂಮಿ ಕಂಪಿಸಿದೆ. 10 ಕಿ. ಮೀ. ಆಳದಲ್ಲಿ ಭೂಮಿ ಕಂಪಿಸಿರುವುದರಿಂದ ಅಲಸ್ಕಾ ಪೆನಿನ್ಸುಲಾ, ದಕ್ಷಿಣ ಅಲಸ್ಕಾದಲ್ಲಿ ಸಮುದ್ರದ ಅಲೆಗಳು ಅಪಾಯಕಾರಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಸುನಾಮಿ ಎಚ್ಚರಿಕೆ ಹಿನ್ನಲೆಯಲ್ಲಿ ಕರಾವಳಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲಸ್ಕಾ ಮಾತ್ರವಲ್ಲದೆ ಕೆನಡಾ ಮತ್ತು ಅಮೆರಿಕದ ಇತರ ಕರಾವಳಿ ತೀರಗಳಿಗೂ ಸುನಾಮಿ ಅಪ್ಪಳಿಸಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಭೂಕಂಪದ ಕೇಂದ್ರ ಬಿಂದು ರಿಂಗ್ ಆಫ್ ಫೈರ್ ಎಂಬ ಪ್ರದೇಶವಾಗಿದೆ. ಈ ಪ್ರದೇಶಗಳಲ್ಲಿ ಹಲವು ಬಾರಿ ಭೂಕಂಪ ಸಂಭವಿಸಿದೆ. 1964ರಲ್ಲಿ 9.2 ತೀವ್ರತೆಯ ಭೂಕಂಪ ಇಲ್ಲಿ ಸಂಭವಿಸಿತ್ತು. ಆಗಲೂ ಅಮೆರಿಕ ಮತ್ತು ಕೆನಡಾದ ಕರಾವಳಿ ತೀರಕ್ಕೆ ಸುನಾಮಿ ಅಪ್ಪಳಿಸಿತ್ತು.












Click it and Unblock the Notifications