ರಷ್ಯಾ ಶಾಪಿಂಗ್ ಮಾಲ್ ನಲ್ಲಿ ಭೀಕರ ಬೆಂಕಿ ಅವಘಡ: 37 ಸಾವು
ಮಾಸ್ಕೋ, ಮಾರ್ಚ್ 26: ರಷ್ಯಾದ ಕೆಮೆರೊವೊ ಎಂಬಲ್ಲಿರುವ ಝಿಮ್ನಾಯ ವಿಷ್ನ್ಯ ಎಂಬ ಶಾಪಿಂಗ್ ಮಾಲಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 37 ಜನ ಮೃತರಾಗಿದ್ದಾರೆ.
ಮಾಲ್ ನ ಮೊದಲ ಮಹಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ. 13 ಮೃತ ದೇಹಗಳನ್ನು ಸಿನಿಮಾ ಹಾಲ್ ನಿಂದ ತೆಗೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ಹಲವರು ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆಂದು ಹೇಳಲಾಗಿದೆ.
40 ಮಕ್ಕಳು ಸೇರಿದಂತೆ ಒಟ್ಟು 69 ಜನ ನಾಪತ್ತೆಯಾಗಿದ್ದಾರೆಂದೂ ಕೆಲವು ವರದಿಗಳು ಹೇಳಿವೆ.

2013 ರಲ್ಲಿ ನಿರ್ಮಾಣವಾದ ಈ ಮಾಲ್ 23,000 ಚ.ಕಿ.ಮೀ.ವಿಸ್ತೀರ್ಣ ಹೊಂದಿದೆ. ಶಾಪಿಂಗ್ ಸೆಂಟರ್, ಬೌಲಿಂಗ್ ಕ್ಲಬ್, ಮಕ್ಕಳ ಆಟದ ಏರಿಯಾ, ಸಿನೆಮಾ ಹಾಲ್ ಜೊತೆಗೆ ಸಾಕುಪ್ರಾಣಿ ಸಂಗ್ರಹಾಲಯವೂ ಈ ಮಾಲ್ ನಲ್ಲಿತ್ತು. ಘಟನೆಯಿಂದಾಗಿ 200 ಕ್ಕೂ ಹೆಚ್ಚು ಪ್ರಾಣಿಗಳು ಮೃತವಾಗಿವೆ.












Click it and Unblock the Notifications