Get Updates
Get notified of breaking news, exclusive insights, and must-see stories!

ಚೀನಾ: ಚಾಕುವಿನಿಂದ ಇರಿದು 9 ಮಕ್ಕಳ ಕೊಲೆ

ಶಾಂಕ್ಸಿ(ಚೀನಾ), ಏಪ್ರಿಲ್ 28: ವ್ಯಕ್ತಿಯೊಬ್ಬ ಚಾಕುವಿನಿಂದ ಒಂಬತ್ತು ಮಕ್ಕಳನ್ನು ಹತ್ಯೆಗೈದ ದಾರುಣ ಘಟನೆ ಚೀನಾದ ಶಾಂಕ್ಸಿ ಪ್ರದೇಶದಲ್ಲಿ ನಡೆದಿದೆ.

ಮಿಡ್ಲ್ ಸ್ಕೂಲ್ ಓದುತ್ತಿದ್ದ ಮಕ್ಕಳು ಮನೆಗೆ ಮರಳುತ್ತಿದ್ದ ಸಮಯದಲ್ಲಿ ಎದುರಾತ ವ್ಯಕ್ತಿ ಸುಮಾರು 19 ಜನ ಮಕ್ಕಳಿಗೆ ಚಾಕುವಿನಿಂದ ಇರಿದಿದ್ದು, ಅದರಲ್ಲಿ 9 ಮಕ್ಕಳು ಸಾವನ್ನಪ್ಪಿದ್ದರೆ, 10 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ 28 ವರ್ಷ ವಯಸ್ಸಿನ ಝಾವೋ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪೊಪ್ಪಿಕೊಂಡಿರುವ ಝಾವೋ, 'ನಾನು ಮಿಡ್ಲ್ ಸ್ಕೂಲ್ ಓದುತ್ತಿದ್ದ ಸಮಯದಲ್ಲಿ ಸಾಕಷ್ಟು ಹಿಂಸೆ ಅನುಭವಿಸಿದ್ದೆ. ಆ ನೋವನ್ನು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದೇನೆ' ಎಂದಿದ್ದಾನೆ.

ಬಹುಶಃ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಚೀನಾದ ಮಟ್ಟಿಗೆ ಚಾಕು ದಾಳಿಗಳು ಮಾಮೂಲಾಗಿದ್ದರೂ, ಹೀಗೆ ಮಕ್ಕಳ ಮೇಲೆ ಇತ್ತೀಚಿನ ದಿನಗಳಲ್ಲಿ ಇಂಥ ಅಮಾನವೀಯ ದಾಳಿ ನಡೆದಿರಲಿಲ್ಲ. ಈ ಘಟನೆ ಇಡೀ ದೇಶವನ್ನೂ ತಲ್ಲಣಗೊಳಿಸುವಂತೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+