ಮಾಲ್ಡೀವ್ಸ್ ಪಾಡು, ನಾಯಿ ಪಾಡು: ಭಾರತದ ಕಾಲು ಹಿಡಿಯಲು ಮಾಲ್ಡೀವ್ಸ್ ರೆಡಿ!
ಭಾರತ ವಿರೋಧಿ ಮಾಲ್ಡೀವ್ಸ್ ಈಗ ಬೀದಿಗೆ ಬಿದ್ದು ನರಳಾಡುತ್ತಿದೆ. ಭಾರತವನ್ನು ಇದೇ ಮಾಲ್ಡೀವ್ಸ್ ಎದುರು ಹಾಕಿಕೊಂಡ ನಂತರ, ಆ ದೇಶಕ್ಕೆ ಹೋಗುತ್ತಿದ್ದ ಭಾರತೀಯರ ಸಂಖ್ಯೆ ಕೂಡ ಭಾರಿ ಕುಸಿತ ಕಂಡಿದೆ. ಹೀಗಾಗಿ ಭಾರತೀಯರ ಕಾಲು ಹಿಡಿದು ಪ್ರವಾಸೋದ್ಯಮವನ್ನ ಉಳಿಸಿಕೊಳ್ಳಲು ಮಾಲ್ಡೀವ್ಸ್ ಅಧಿಕಾರಿಗಳು ಈಗ ಭಾರತಕ್ಕೆ ಬರಲು ಸಜ್ಜಾಗಿದ್ದಾರಂತೆ!
ಅಂದಹಾಗೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿದ್ದ ಕಾರಣ ಮಾಲ್ಡೀವ್ಸ್ ದೇಶಕ್ಕೆ ಈಗಾಗಲೇ ಭಾರತೀಯರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಹೀಗಿದ್ದಾಗ ದಿಢೀರ್, ಮಾಲ್ಡೀವ್ಸ್ ದೇಶದಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದ ಭಾರತೀಯರ ಸಂಖ್ಯೆ ಶೇಕಡಾ 30ಕ್ಕೂ ಹೆಚ್ಚು ಕುಸಿತ ಕಂಡಿದೆ ಎಂಬ ವರದಿಗಳು ಓಡಾಡುತ್ತಿವೆ. ಇದೇ ಸಮಯಕ್ಕೆ ಮತ್ತೆ ತನ್ನ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿಕೊಳ್ಳಲು ಮಾಲ್ಡೀವ್ಸ್ ಈಗ ಭಾರತದ ಕಾಲು ಹಿಡಿಯಲು ಸಜ್ಜಾಗಿದೆ.

ಮಾಲ್ಡೀವ್ಸ್‌ಗೆ ಪ್ರವಾಸಿಗರ ಕೊರತೆ
2024ರ ಜನವರಿ 1ರಿಂದ 28ರವರೆಗೆ ಒಟ್ಟಾರೆ 1.74 ಲಕ್ಷ ಪ್ರವಾಸಿಗರು ಮಾಲ್ದೀವ್ಸ್‌ಗೆ ಪ್ರವಾಸಕ್ಕೆ ಹೋಗಿದ್ದರು. ಇವರಲ್ಲಿ ಭಾರತೀಯರ ಸಂಖ್ಯೆ, 13,989ಕ್ಕೆ ಕುಸಿತ ಕಂಡಿದೆ. 2023 ರಲ್ಲಿ 17 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದರಂತೆ. ಈ ಪೈಕಿ ಭಾರತ ಮೂಲದ ಸುಮಾರು 2,09,198 ಪ್ರವಾಸಿಗರು ಮಾಲ್ಡೀವ್ಸ್ ದೇಶಕ್ಕೆ ಭೇಟಿ ನೀಡಿದ್ದರು. ಆದರೆ ಭಾರತದ ಜೊತೆಗೆ ಮಾಲ್ಡೀವ್ಸ್ ಹೊಸ ಅಧ್ಯಕ್ಷ ಕಿರಿಕ್ ಶುರು ಮಾಡಿದ ನಂತರ ಆ ದೇಶದ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಬೀದಿಗೆ ಬಂದಿದೆ. ಹೀಗಾಗಿ ಖುದ್ದು ಮಾಲ್ಡೀವ್ಸ್ ಅಧಿಕಾರಿ ವರ್ಗ ಈಗ ಭಾರತಕ್ಕೆ ಬಂದು ಭಾರತದ ನಗರಗಳಲ್ಲಿ ರೋಡ್ ಶೋ ಮಾಡಿ ಭಾರತೀಯ ಪ್ರವಾಸಿಗರನ್ನ ಬೇಡಲು ಸಜ್ಜಾಗಿದೆಯಂತೆ!
ಏನಿದು ಮಾಲ್ಡೀವ್ಸ್ ಪರದಾಟ?
ಹೌದು, ಪ್ರವಾಸಿಗರೆ ಇಲ್ಲದೆ ಮಾಲ್ಡೀವ್ಸ್ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಈಗ ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ ಅಂಡ್ ಟೂರ್ ಆಪರೇಟರ್ಸ್ (MATATO) ಹೊಸ ಯೋಜನೆ ಹಾಕಿಕೊಂಡಿದೆ. ಭಾರತೀಯ ಪ್ರವಾಸಿಗರ ಕೊರತೆಯ ನಡುವೆ, ಎರಡೂ ದೇಶಗಳ ನಡುವಿನ ಪ್ರಯಾಣ & ಪ್ರವಾಸೋದ್ಯಮ ಸಹಕಾರ ಹೆಚ್ಚಿಸುವ ಬಗ್ಗೆ ಭಾರತದ ಹೈಕಮಿಷನರ್ ಜೊತೆ ಮಾಟಾಟೊ ಚರ್ಚಿಸಿದ್ದು, ಭಾರತದಲ್ಲಿನ ಪ್ರಮುಖ ನಗರಗಳಲ್ಲಿ ಈಗ ರೋಡ್ ಶೋ ಮಾಡಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಮಾಲ್ಡೀವ್ಸ್ ಈಗ, ಒಂದಷ್ಟು ಬುದ್ಧಿ ಕಲಿತಂತೆ ಕಾಣುತ್ತಿದೆ.
ಮಾಲ್ದೀವ್ಸ್ & ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾದ ಬಳಿಕ ದ್ವೀಪರಾಷ್ಟ್ರಕ್ಕೆ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆ ಕುಸಿಯುತ್ತ ಸಾಗಿದೆ. ಮಾಲ್ದೀವ್ಸ್‌ಗೆ ಹೋಗುತ್ತಿದ್ದ ವಿದೇಶಿಯರ ಪೈಕಿ ಭಾರತದ ಪ್ರವಾಸಿಗರು ಮೊದಲ ಸ್ಥಾನದಲ್ಲಿ ಇದ್ದರು. ಹೀಗಿದ್ದಾಗ ಭಾರತದ ಜೊತೆಗೆ ಮಾಲ್ಡೀವ್ಸ್ ಕಿರಿಕ್ ಶುರುವಾಗಿತ್ತು. ಕಳೆದ 4 ತಿಂಗಳ ಅವಧಿಯಲ್ಲಿ ಭಾರಿ ಕುಸಿತ ಕಂಡಿದೆ ಭಾರತೀಯ ಪ್ರವಾಸಿಗರ ಸಂಖ್ಯೆ. ಮೊದಲನೇ ಸ್ಥಾನದಿಂದ ಈಗ 5ನೇ ಸ್ಥಾನಕ್ಕೆ ಭಾರತ ಮೂಲದ ಪ್ರವಾಸಿಗರ ಸಂಖ್ಯೆ ಕುಸಿತ ಕಂಡಿದೆ ಈ ಮೂಲಕ ಭಾರತದ ಜೊತೆ ಕಿರಿಕ್ ಮಾಡಿದ್ದ ಮಾಲ್ಡೀವ್ಸ್ ಹೊಸ ಅಧ್ಯಕ್ಷನಿಗೆ ಶಾಕ್ ಸಿಕ್ಕಿದೆ. ಹೀಗಾಗಿ ಅದನ್ನ ಸರಿ ಮಾಡಲು ಈಗ ಮಾಲ್ಡೀವ್ಸ್ ದೇಶದ ಅಧಿಕಾರಿಗಳು ಭಾರತಕ್ಕೆ ಬರಲು ಸಜ್ಜಾಗಿದ್ದಾರೆ.












Click it and Unblock the Notifications