• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಬೂಲ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿ

|

ಕಾಬೂಲ್, ಸೆಪ್ಟೆಂಬರ್ 11: ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಗೆ 18 ವರ್ಷ ತುಂಬಿದ ದಿನದಂದೇ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ.

ದಾಳಿ ನಡೆದ ಸುಮಾರು ಒಂದು ಗಂಟೆಯ ಬಳಿಕ ಅಮೆರಿಕದ ಧೂತಾವಾಸ ಕಚೇರಿ ಪ್ರತಿಕ್ರಿಯೆ ನೀಡಿದ್ದು, ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ ಎಂದು ತಿಳಿಸಿದೆ.

ಅಮೆರಿಕದಲ್ಲಿ ಮತ್ತೆ ಶೂಟೌಟ್: ಐವರ ಸಾವು, 21 ಮಂದಿಗೆ ಗಾಯ

ಕೇಂದ್ರ ಕಾಬೂಲ್‌ನಲ್ಲಿರುವ ಕಟ್ಟಡದಲ್ಲಿ ಭಾರಿ ಪ್ರಮಾಣದ ಹೊಗೆ ಆವರಿಸಿತ್ತು. ಮಧ್ಯರಾತ್ರಿ ಈ ದಾಳಿ ನಡೆದಿದ್ದು ಇಡೀ ಪ್ರದೇಶದ ಸುತ್ತಲೂ ಸೈರನ್‌ಗಳನ್ನು ಮೊಳಗಿಸಲಾಗಿತ್ತು. ರಾಯಭಾರ ಕಚೇರಿ ಒಳಭಾಗದಲ್ಲಿ 'ಕಟ್ಟಡದ ಕಾಂಪೌಂಡ್ ಅನ್ನು ರಾಕೆಟ್‌ ಒಂದರಿಂದ ಸ್ಫೋಟಿಸಲಾಗಿದೆ' ಎಂದು ಉದ್ಯೋಗಿಗಳಿಗೆ ಧ್ವನಿ ವರ್ಧಕದಲ್ಲಿ ಮಾಹಿತಿ ನೀಡಲಾಯಿತು.

ಈ ಬಗ್ಗೆ ಅಫ್ಘಾನಿಸ್ತಾನದ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ರಾಯಭಾರ ಕಚೇರಿ ಸಮೀಪವೇ ಇದ್ದ ನ್ಯಾಟೋ ಯೋಜನೆಯ ತಂಡ ಕೂಡ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಾಬೂಲ್ : ಮದುವೆ ಛತ್ರದಲ್ಲಿ ಪ್ರಬಲ ಬಾಂಬ್ ಸ್ಫೋಟ, 63 ಸಾವು

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪಡೆಗಳು ತಾಲಿಬಾನ್ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗೆ ವಿರಾಮ ಹಾಡುವ ಸಲುವಾಗಿ ನಡೆಸಲಾಗುತ್ತಿದ್ದ ಮಾತುಕತೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಾತ್ ಸ್ಥಗಿತಗೊಳಿಸಿದ ಬಳಿಕ ಆಫ್ಘನ್ ರಾಜಧಾನಿಯಲ್ಲಿ ನಡೆದ ಮೊದಲ ಪ್ರಮುಖ ದಾಳಿ ಇದಾಗಿದೆ.

ಸಾರ್ವಜನಿಕ ಸ್ಥಳದಲ್ಲೇ ಗುಂಡು ಹಾರಿಸಿ ಪತ್ರಕರ್ತೆ ಮೀನಾ ಹತ್ಯೆ

2001ರ ಸೆಪ್ಟೆಂಬರ್ 11ರಂದು ಅಮೆರಿಕದ ಅವಳಿ ಗೋಪುರಗಳ ಮೇಲೆ ಆಫ್ಘಾನಿಸ್ತಾನದ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಅಲ್ಲಿಂದಲೂ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.

English summary
Blast at US Embassy in Kabul after a rocket exploded on compound on the anniversary of 9/11 attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X