ರಷ್ಯಾ ಭೂಕಂಪದಿಂದ ಸುನಾಮಿ ಭೀತಿಯಿಲ್ಲ: ಎಚ್ಚರಿಕೆ ಹಿಂಪಡೆತ
ಮಾಸ್ಕೋ, ಜುಲೈ 18 : ರಷ್ಯಾದ ಕಾಮ್ಚಾಟ್ ಸ್ಕಿ ಪೆನಿನ್ಸುಲಾ ಕರಾವಳಿಯಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 7.8 ರಷ್ಟು ಪ್ರಮಾಣ ಕಂಡು ಬಂದಿದೆ.
ಭೂಕಂಪದ ಹಿನ್ನೆಲೆಯಲ್ಲಿ ಯುಎಸ್ ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ನೀಡಿದ್ದ ಸುನಾಮಿ ಭೀತಿಯ ಎಚ್ಚರಿಕೆಯನ್ನು ಆ ಸಂಸ್ಥೆ ಹಿಂಪಡೆದುಕೊಂಡಿದೆ.

ಭೂಕಂಪವಾದ ಕೂಡಲೇ ಸಾಗರಾದಳದಲ್ಲಿ ಎದ್ದಿದ್ದ ಅಲೆಗಳ ಪ್ರಮಾಣವನ್ನು ಆಧರಿಸಿ ಸುನಾಮಿ ಮುನ್ಸೂಚನೆ ನೀಡಲಾಗಿತ್ತು. ಭೂಕಂಪದ ಸಂಭವಿಸಿದ ಪ್ರದೇಶದಿಂದ ಸುಮಾರು 300 ಕಿ.ಮೀ (186 ಮೈಲ್) ವ್ಯಾಪ್ತಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.
ಸಂಸ್ಥೆಯ ಲೆಕ್ಕಾಚಾರದಂತೆ ಸುನಾಮಿಯು ಜುಲೈ 24ರ ವೇಳೆಗೆ ರಷ್ಯಾ ಕರಾವಳಿಗೆ ಬಂದು ಅಪ್ಪಳಿಸಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಅಲೆಗಳ ತೀವ್ರತೆಯು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಅಪಾಯ ತಪ್ಪಿದೆ ಎಂದು ತಜ್ಞರು ತಿಳಿಸಿದ್ದಾರೆ.












Click it and Unblock the Notifications