ಸತ್ಯಾಗ್ರಹ ಮೂಡಿದ ನಾಡಲ್ಲೇ ಗಾಂಧೀಜಿಗೆ ಅವಮಾನ!
ಜೋಹಾನ್ಸ್ಬರ್ಗ್:ಏ. 13: ರಾಷ್ಟ್ರಪಿತ ಮಾಹಾತ್ಮ ಗಾಂಧೀಜಿ ಅಹಿಂಸಾ ಹೋರಾಟ ಆರಂಭಿಸಿದ ದಕ್ಷಿಣ ಆಫ್ರಿಕಾದಲ್ಲೆ ಅವರ ಪ್ರತಿಮೆಗೆ ಅವಮಾನ ಮಾಡಲಾಗಿದೆ. ಜೋಹಾನ್ಸ್ಬರ್ಗ್ನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ದುಷ್ಕರ್ಮಿಗಳು ಬಿಳಿ ಬಣ್ಣ ಎರಚಿದ್ದಾರೆ.
ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗಾಂಧೀಜಿ ಪ್ರತಿಮೆಗೆ ಬಣ್ಣ ಎರಚಿದ್ದಾರೆ. ನಂತರ 'ಜನಾಂಗೀಯವಾದಿ ಗಾಂಧಿ ಕೆಳಕ್ಕೆ ಬೀಳಲಿ' ಎಂದು ಘೊಷಣಾ ಫಲಕ ಹಿಡಿದು ಘೋಷಣೆ ಕೂಗಿದ್ದಾರೆ.[ಗಾಂಧೀಜಿ ಹಂತಕ ಕುರಿತ ಚಿತ್ರ ಬಿಡುಗಡೆಗೆ ಸಿದ್ಧ]

ಕೃತ್ಯ ಎಸಗಿದವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ನ ಲಾಂಛನ ಧರಿಸಿದ್ದರು. ಇವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಆದರೆ ಈ ಮಾತನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಪಕ್ಷ, ನಮಗೆ ಕೆಟ್ಟ ಹೆಸರು ತರಲು ಬೇಕೆಂತಲೇ ಯಾರೋ ಇಂಥ ಕೃತ್ಯ ಎಸಗಿದ್ದಾರೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.[ಪಟೇಲರಿಗೆ ಅಧ್ಯಕ್ಷ ಗಾದಿ ತಪ್ಪಿಸಿತೆ ಮೋತಿಲಾಲರ ಪತ್ರ?]
ವರ್ಣ ಬೇಧ ನೀತಿಯ ವಿರುದ್ಧ ಗಾಂಧೀಜಿ ಹೋರಾಟ ಆರಂಭಿಸಿದ ನಾಡಲ್ಲೇ ಅವರಿಗೆ ಅವಮಾನವಾಗಿದೆ. ಇದು ವಿದೇಶಗಳ ನಡುವಿನ ಬಾಂಧವ್ಯಕ್ಕೂ ಅಡ್ಡಗಾಲಾಗಿ ಪರಿಣಮಿಸುವ ಸಂಭವವಿದೆ. ಭಾರತಕ್ಕೆ ಆಗಮಿಸುವ ಮುನ್ನ ಗಾಂಧೀಜಿ ಸತ್ಯಾಗ್ರಹ ಎಂಬ ಪರಿಕಲ್ಪನೆಯನ್ನು ದಕ್ಷಿಣ ಆಫ್ರಿಕಾದಲ್ಲೇ ಆರಂಭ ಮಾಡಿದ್ದರು. 1903 ರಿಂದ 1914 ರ ವರೆಗೆ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲೇ ನೆಲೆ ನಿಂತು ವರ್ಣಭೇದ ನೀತಿ ವಿರುದ್ಧ ಹೋರಾಟ ಮಾಡಿ ಜಯಗಳಿಸಿದ್ದರು.












Click it and Unblock the Notifications