ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ದಿಕ್ಕು ಬದಲಿಸಲು ಹೋಗಿದ್ದಕ್ಕೆ ಶಿಕ್ಷೆ: ನವಾಜ್ ಷರೀಫ್

|
Google Oneindia Kannada News

ಲಂಡನ್, ಜುಲೈ 7: ಪಾಕಿಸ್ತಾನದ 70 ವರ್ಷದ ಇತಿಹಾಸದ ಗತಿಯನ್ನು ಬದಲಿಸಲು ಪ್ರಯತ್ನಿಸಿದ ಕಾರಣಕ್ಕಾಗಿ ತಮ್ಮನ್ನು ಶಿಕ್ಷಗೆ ಗುರಿಪಡಿಸಲಾಗಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.

ಪನಾಮ ಪೇಪರ್ ಹಗರಣದಲ್ಲಿ ಮೂರು ಭ್ರಷ್ಟಾಚಾರ ಪ್ರಕರಣಲ್ಲಿ ಒಂದಕ್ಕೆ ಸಂಬಂಧಿಸಿದಂತೆ ನವಾಜ್ ಷರೀಫ್ ಅವರಿಗೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಹತ್ತು ವರ್ಷಗಳ ಶಿಕ್ಷೆ ವಿಧಿಸಿದೆ.

ನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ಗೆ 7 ವರ್ಷ ಜೈಲುನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ಗೆ 7 ವರ್ಷ ಜೈಲು

ಲಂಡನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪುತ್ರಿ ಮರ್ಯಮ್ ಅವರ ಜತೆಗೆ ಮಾತನಾಡಿದ ಷರೀಫ್, ಸತ್ಯವನ್ನು ಹೇಳಿದಕ್ಕೆ ಸರಪಳಿಯಿಂದ ಬಂಧನಕ್ಕೆ ಒಳಗಾದ ಪಾಕಿಸ್ತಾನಿಯರನ್ನು ಸ್ವತಂತ್ರಗೊಳಿಸದೆ ಇರುವವರೆಗೂ ನಾನು ಈ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ.

london: Nawaz Sharif explains why he was punished

ಕೆಲವು ಜನರಲ್‌ಗಳು ಮತ್ತು ನ್ಯಾಯಾಧೀಶರು ಹೇರಿರುವ ಗುಲಾಮಗಿರಿಯಿಂದ ಪಾಕಿಸ್ತಾನಿಯರನ್ನು ಮುಕ್ತಿಗೊಳಿಸುವವರೆಗೂ ನಾನು ಹೋರಾಟ ನಡೆಸುತ್ತೇನೆ ಎಂದು ಷರೀಫ್ ಹೇಳಿದ್ದಾರೆ.

'ಮತಕ್ಕೆ ಗೌರವ ನೀಡುವ ಬೇಡಿಕೆ ಇಟ್ಟಿದ್ದಕ್ಕೆ ಜೈಲು ಸಿಕ್ಕಿದೆ. ಇದನ್ನು ನಾನು ಎದುರಿಸಲಿದ್ದೇನೆ' ಎಂದು ಷರೀಫ್ ಅವರು ತಮ್ಮ ಶಿಕ್ಷೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.

ಪನಾಮಾ ಪೇಪರ್ಸ್ ಹಗರಣ ಅಂದರೆ ಏನು, ಎತ್ತ? ಪನಾಮಾ ಪೇಪರ್ಸ್ ಹಗರಣ ಅಂದರೆ ಏನು, ಎತ್ತ?

ಷರೀಫ್ ಅವರ 44 ವರ್ಷದ ಮಗಳು ಮರ್ಯಮ್ ಅವರಿಗೂ ಏಳು ವರ್ಷದ ಶಿಕ್ಷೆ ವಿಧಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಹಕಾರ ನೀಡದೆ ಪಲಾಯನ ಮಾಡಿದ್ದಕ್ಕಾಗಿ ಅವರಿಗೆ ಒಂದು ವರ್ಷ ಶಿಕ್ಷೆ ವಿಧಿಸಲಾಗಿದೆ. ಒಟ್ಟು ಏಳು ವರ್ಷ ಅವರು ಜೈಲಿನಲ್ಲಿ ಕಳೆಯಬೇಕಾಗಲಿದೆ.

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಹಕಾರ ನೀಡದ ಕಾರಣಕ್ಕೆ ಷರೀಫ್ ಅವರ ಅಳಿಯ ಕ್ಯಾಪ್ಟನ್ ಮುಹಮ್ಮದ್ ಸಫ್ದಾರ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

English summary
Pakistan's deposed prime minister Nawaz Sharif on Friday said he has been punished because he tried to turn the course of Pakistan's 70-year history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X