ಲಂಡನ್ ಸ್ಫೋಟದ ಎರಡನೇ ಆರೋಪಿ ಬಂಧನ
ಲಂಡನ್, ಸೆಪ್ಟೆಂಬರ್ 17: ಲಂಡನ್ ಸುರಂಗ ರೈಲಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಶನಿವಾರ ರಾತ್ರಿ ಪಶ್ಚಿಮ ಲಂಡನಿನಲ್ಲಿ 21 ವರ್ಷದ ಮೊದಲ ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ 18 ವರ್ಷ ವಯಸ್ಸಿನ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ.

ಶುಕ್ರವಾರ ಲಂಡನ್ ರೈಲ್ವೇಯ ಪಾರ್ಸನ್ಸ್ ಗ್ರೀನ್ ಸುರಂಗ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಟ 30 ಜನರು ಗಾಯಗೊಂಡಿದ್ದರು.
ಇನ್ನು ಇಬ್ಬರ ಬಂಧನದ ಬೆನ್ನಿಗೆ ಬ್ರಿಟನ್ ನಲ್ಲಿ ಸದ್ಯದಲ್ಲೇ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಅಲ್ಲಿನ ಗೃಹ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.












Click it and Unblock the Notifications