ಲಂಡನ್ ರೈಲ್ವೇ ಮೇಲೆ ಭಯೋತ್ಪಾದಕ ದಾಳಿ

Subscribe to Oneindia Kannada

ಲಂಡನ್, ಸೆಪ್ಟೆಂಬರ್ 15: ಲಂಡನ್ ರೈಲ್ವೇ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ ಎಂದು ಅಲ್ಲಿನ 'ಮೆಟ್ರೋಪಾಲಿಟನ್ ಪೊಲೀಸ್'ರು ಖಚಿತ ಪಡಿಸಿದ್ದಾರೆ.

ನೈರುತ್ಯ ಲಂಡನಿನ ಪಾರ್ಸನ್ಸ್ ಗ್ರೀನ್ ಸುರಂಗ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಹಂಚಿಕೊಂಡಿದ್ದರು. ಇದರ ಬೆನ್ನತ್ತಿದ್ದ ಪೊಲೀಸ್ ಮತ್ತು ಅಲ್ಲಿನ ಅಗ್ನಿಶಾಮಕ ದಳ ಇದೊಂದು ಭಯೋತ್ಪಾದಕ ಕೃತ್ಯ ಎಂದು ಖಚಿತಪಡಿಸಿದೆ.

London Blast : Reported explosion in London train station

ನಿಲ್ದಾಣದಲ್ಲಿ ಪ್ಲಾಸ್ಟಿಕ್ ಕಸದ ತೊಟ್ಟಿಯಲ್ಲಿ ಬೆಂಕಿ ಉರಿಯುತ್ತಿರುವ ಚಿತ್ರವನ್ನು ಪ್ರಯಾಣಿಕರು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜತೆಗೆ ಜನ ಗಾಬರಿಯಾಗಿ ಓಡಿ ಬರುತ್ತಿದ್ದುದ್ದಾಗಿ ಹಲವರು ದೂರು ನೀಡಿದ್ದರು. ಕೆಲವರಿಗೆ ಗಾಯಗಳಾಗಿವೆ ಎಂದೂ ಪ್ರಯಾಣಿಕರು ಹೇಳಿದ್ದರು. ರೈಲ್ವೇ ಪ್ರಯಾಣವೂ ಬೆನ್ನಿಗೆ ರದ್ದಾಗಿತ್ತು. ಹೀಗೆ ಲಂಡನ್ ರೈಲ್ವೇಯಲ್ಲಿ ಒಮ್ಮಿಂದೊಮ್ಮೆಯೇ ಗಾಬರಿ, ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

London Blast : Reported explosion in London train station

ಇದಾದ ನಂತರ ಸ್ಥಳಕ್ಕೆ ಅಲ್ಲಿನ ಪೊಲೀಸರು ಮತ್ತು ಅಗ್ನಿಶಾಮಕ ತಂಡಗಳು ಭೇಟಿ ನೀಡಿ ವಿವರವಾಗಿ ಪರಿಶೀಲನೆ ನಡೆಸಿವೆ. ಪರಿಶೀಲನೆ ನಂತರ ಮಾಹಿತಿ ನೀಡಿರುವ ಪೊಲೀಸರು ಇದೊಂದು ಭಯೋತ್ಪಾದಕ ಕೃತ್ಯ. ಆದರೆ, ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂದು ತಿಳಿದು ಬಂದಿಲ್ಲ ಎಂದು ಟ್ವೀಟ್ ಮಾಡಿದೆ.

ದಾಳಿಯಿಂದಾಗಿ ಎಡ್ಜ್ ವೇರ್ ಮತ್ತು ವಿಂಬಲ್ಡನ್ ನಡುವಿನ ರೈಲ್ವೇ ಪ್ರಯಾಣವನ್ನು ರದ್ದು ಪಡಿಸಲಾಗಿದೆ. ಮೆಟ್ರೋಪಾಲಿಟನ್ ಉಗ್ರ ನಿಗ್ರಹ ದಳ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಜನ ಗಾಬರಿಯಾಗುವ ಅಗತ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಯಾವುದೇ ಮಾಹಿತಿ ಇದ್ದರೆ ಹಂಚಿಕೊಳ್ಳುವಂತೆ ನಾಗರಿಕರನ್ನು ಕೇಳಿಕೊಂಡಿದೆ.

ಈ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ. ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
London Blast: Fire observed in Underground Train in West London. London Metropolitan Police confirmed that it is the 'terrorist incident'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ