ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ದಾಳಿಯ ಮೂವರು ಶಂಕಿತರ ಹತ್ಯೆ, ದಾಳಿಕೋರನದು ಪಾಕ್ ಮೂಲ

By ಮಾಧುರಿ ಅದ್ನಾಳ್
|
Google Oneindia Kannada News

ಲಂಡನ್, ಜೂನ್ 6: ಲಂಡನ್ ಬ್ರಿಜ್ ದಾಳಿಯ ಶಂಕಿತರನ್ನು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಕೊಂದು ಹಾಕಿದ್ದಾರೆ. ಶಂಕಿತರನ್ನು ಖುರ್ರಂ ಶಹಜಾದ್ ಭಟ್ ಮತ್ತು ರಚಿದ್ ರೆಡೌನ್ ಎಂದು ಗುರುತಿಸಲಾಗಿದೆ. ಇಪ್ಪತ್ತೇಳು ವರ್ಷದ ಖುರ್ರಂ ಶಹಜಾದ್ ಭಟ್ ಬ್ರಿಟಿಷ್ ನಾಗರಿಕ, ಜನಿಸಿದ್ದು ಪಾಕಿಸ್ತಾನದಲ್ಲಿ.

ಮೂವತ್ತು ವರ್ಷದ ರಚಿದ್ ರೆಡೌನ್ ಮೊರೊಕ್ಕೊ ಮತ್ತು ಲಿಬಿಯಾ ದೇಶದವನು ಎನ್ನಲಾಗುತ್ತಿದೆ. ಜತೆಗೆ ಆತ ರಚಿದ್ ಎಲ್ಖದರ್ ಎಂಬ ಹೆಸರಿಂದಲೂ ಗುರುತಿಸಿಕೊಂಡಿದ್ದಾನೆ. ಲಂಡನ್ ಬ್ರಿಜ್ ಹಾಗೂ ಬೊರೋಗ್ ಮಾರುಕಟ್ಟೆ ದಾಳಿಗೆ ಸಂಬಂಧಿಸಿದಂತೆ ಏಳು ಮಹಿಳೆಯರೂ ಸೇರಿ ಹನ್ನೊಂದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.[ರಂಜಾನ್ ಮಾಸಕ್ಕೂ ಭಯೋತ್ಪಾದಕರ ದಾಳಿಗೂ ಇದೆಂಥ ನಂಟು!?]

London Attackers

ಮೂವರು ಶಂಕಿತ ಉಗ್ರರನ್ನು ಪೊಲೀಸರು ಹೊಡೆದು ಕೊಂದಿದ್ದಾರೆ. ದಾಳಿಯಲ್ಲಿ ನೇರವಾಗಿ ಕೈವಾಡ ಇರುವ ಎಲ್ಲರನ್ನೂ ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿಯಿಂದ ಎಲ್ಲ ಮಾಹಿತಿಯನ್ನು ಪಡೆಯುತ್ತಿದ್ದೇನೆ ಎಂದು ಪ್ರಧಾನಿ ತೆರೇಸಾ ಮೇ ಹೇಳಿದ್ದಾರೆ.

ಈಚೆಗೆ ಲಂಡನ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು.

English summary
The Scotland Yard Police on Monday named two of the London Bridge attack suspects as Khuram Shazad Butt and Rachid Redouane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X