Breaking News :ಲಂಡನ್ನಿನಲ್ಲಿ ವಿಜಯ್ ಮಲ್ಯ ಬಂಧನ
ಲಂಡನ್ನಿನಲ್ಲಿ ಉದ್ಯಮಿ ವಿಜಯ್ ಮಲ್ಯರನ್ನು ಯುಕೆ ಪೊಲೀಸರು ಬಂಧಿಸಿದ್ದಾರೆ. ಲಂಡನ್ನಿನ ಕೋರ್ಟಿನ ವಿಧಿವಿಧಾನಗಳು ಮುಗಿದ ಬಳಿಕ ಭಾರತಕ್ಕೆ ಕರೆ ತರಲು ಸಿಬಿಐ ಮುಂದಾಗಿದೆ.
ಲಂಡನ್, ಏಪ್ರಿಲ್ 18: ಉದ್ಯಮಿ ವಿಜಯ್ ಮಲ್ಯರನ್ನು ಯುಕೆ ಪೊಲೀಸರು ಬಂಧಿಸಿದ್ದಾರೆ. ಮಲ್ಯ ಅವರನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಗಿದ್ದು, ಅವರನು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರುಪಡಿಸಲಾಗುತ್ತಿದೆ.
ಭಾರತದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕುಗಳಿಂದ 9,000 ಕೋಟಿ ರುಗೂ ಅಧಿಕ ಮೊತ್ತ ಸಾಲವನ್ನು ಪಡೆದು ಹಿಂತಿರುಗಿಸದೆ ದೇಶ ತೊರೆದಿದ್ದರು.[ಆರ್ಟ್ ಆಫ್ ಲೀವಿಂಗ್: ಮಲ್ಯರಿಗೂ ಮುಂಚೆ ದೇಶ ತೊರೆದವರು]

ಲಂಡನ್ನಿನಲ್ಲಿ ನೆಲೆಸಿದ್ದ ಮಲ್ಯರನ್ನು ಗಡಿಪಾರು ಮಾಡಿ ಭಾರತದ ಕೋರ್ಟಿಗೆ ಕರೆತರಲು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸೇರಿದಂತೆ ತನಿಖಾಧಿಕಾರಿಗಳು ಕೋರಿದ್ದರು.[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]
ಇತ್ತೀಚೆಗೆ ಭಾರತದ ಮನವಿಯನ್ನು ಪುರಸ್ಕರಿಸಿದ್ದ ಯುಕೆ ಸರ್ಕಾರ, ಮಲ್ಯರನ್ನು ಭಾರತಕ್ಕೆ ಒಪ್ಪಿಸಲು ಸಿದ್ಧ ಎಂದು ಹೇಳಿತ್ತು. ಲಂಡನ್ನಿನ ಕೋರ್ಟಿನ ವಿಧಿವಿಧಾನಗಳು ಮುಗಿದ ಬಳಿಕ ಭಾರತಕ್ಕೆ ಕರೆ ತರಲು ಸಿಬಿಐ ಮುಂದಾಗಿದೆ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ]
ಉದ್ದೇಶಪೂರ್ವಕ ಸುಸ್ತಿದಾರ ವಿರುದ್ಧ ಕೇಂದ್ರ ಸರ್ಕಾರ ಇಡುತ್ತಿರುವ ನಡೆ ಬಗ್ಗೆ ಉದ್ಯಮಿ ವಿಜಯ್ ಮಲ್ಯ ಅವರು ಗರಂ ಆಗಿದ್ದಾರೆ. ಬ್ಯಾಂಕ್ ಗಳ ಜತೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ. ಅವಕಾಶ ನೀಡಿದರೆ 'ಒನ್ ಟೈಮ್ ಸೆಟ್ಲ್ ಮೆಂಟ್ ' ಗೆ ನಾನು ಸಿದ್ಧ ಎಂದು ಮಲ್ಯ ಹೇಳಿದ್ದರು.

ಬ್ಯಾಂಕ್ ಗಳಿಗೆ ಸಾಲ ತೀರಿಸುವ ಕ್ರಮದ ಬಗ್ಗೆ ಸುಪ್ರೀಂಕೋರ್ಟ್ ಸೂಚಿಸಲಿ. ನಾನು ಸೆಟ್ಲ್ ಮೆಂಟ್ ಮಾಡಿಕೊಳ್ಳಲು ಸಿದ್ಧ. ನನ್ನನ್ನು ಅಪರಾಧಿಯಂತೆ ಸರ್ಕಾರ ನಡೆಸಿಕೊಳ್ಳುವುದು ಸರಿಯಲ್ಲ ಎಂದಿದ್ದರು.
ಕಳೆದ ವರ್ಷ ಮಾರ್ಚ್ 02ರಂದು ಭಾರತ ತೊರೆದ ಮಲ್ಯರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ಜಾರಿ ನಿರ್ದೇಶನಾಲಯ, ಸಿಬಿಐ, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಸೇರಿದಂತೆ ಕೇಂದ್ರ ಸರ್ಕಾರ ಇನ್ನಿಲ್ಲದ್ದಂತೆ ಯತ್ನಿಸಿ ಕೊನೆಗೂ ಫಲ ಕಾಣುತ್ತಿದೆ.(ಒನ್ಇಂಡಿಯಾ ಸುದ್ದಿ)












Click it and Unblock the Notifications