Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ
ತಬಲಾ ಮಾಂತ್ರಿಕ ಎಂದೇ ಖ್ಯಾತಿ ಪಡೆದಿದ್ದ ಪ್ರಸಿದ್ಧ ತಬಲಾ ವಾದಕ ಜಾಕಿರ್ ಹುಸೇನ್ (73) ಅವರು ನಿಧನ ಹೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು.
ಹುಸೇನ್ ಅವರಿಗೆ ರಕ್ತದೊತ್ತಡದ ಸಮಸ್ಯೆ ಇತ್ತು ಎಂದು ವರದಿಯಾಗಿದೆ. ಇತ್ತೀಚೆಗೆ ಕಳೆದೆರಡು ವಾರಗಳಿಂದ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಿರುವುದಾಗಿರ ವ್ಯವಸ್ಥಾಪಕ ನಿರ್ಮಲಾ ಬಚಾನಿ ಹೇಳಿದ್ದರು.

ಉಸ್ತಾದ್ ಜಾಕಿರ್ ಹುಸೇನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ ಆಸ್ಪತ್ರೆಯಲ್ಲಿ ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಸಂಬಂಧಿ ತಿಳಿಸಿದ್ದರು. ಪ್ರಸಿದ್ಧ ಸಂಗೀತಗಾರರಾದ ಹುಸೇನ್ ಅವರು 1988ರಲ್ಲಿ ಪದ್ಮಶ್ರೀ ಹಾಗೂ 2002ರಲ್ಲಿ ಪದ್ಮಭೂಷಣ, 2023ರಲ್ಲಿ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದರು.
ಜಾಕಿರ್ ಹುಸೇನ್ ಅವರು ತಬಲಾ ವಾದಕ ಉಸ್ತಾದ್ ಅಲ್ಲಾ ರಖಾ ಖಾನ್ ಅವರ ಪುತ್ರ. ಭಾರತೀಯ ಮತ್ತು ಜಾಗತಿಕ ಸಂಗೀತಗಾರರಲ್ಲಿ ಖ್ಯಾತಿ ಪಡೆದಿದ್ದರು. ಹುಸೇನ್ ಅವರು ತಮ್ಮ ಏಳನೇ ವಯಸ್ಸಿನಲ್ಲಿ ತಬಲಾ ವಾದಿಸುವುದನ್ನು ಶುರು ಮಾಡಿದ್ದರು. 12ನೇ ವಯಸ್ಸಿಗೆ ಅವರು ಭಾರತದಾದ್ಯಂತ ತಮ್ಮ ತಬಲಾ ಪ್ರದರ್ಶನ ನೀಡಿದ್ದರು.

ಬಾಲ್ಯದಲ್ಲೇ ಉಸ್ತಾದ್ ಜಾಕಿರ್ ಹುಸೇನ್ ಅವರ ಸಂಗೀತ ಪಯಣ ಆರಂಭವಾಯಿತು. ಅವರು ತಮ್ಮ ಮೊದಲ ಸಂಗೀತ ಕಚೇರಿಯನ್ನು ಅಮೆರಿಕಾದಲ್ಲಿ ಪ್ರದರ್ಶಿಸಿದರು. ಅವರ ಚೊಚ್ಚಲ ಆಲ್ಬಂ 'ಲಿವಿಂಗ್ ಇನ್ ದಿ ಮೆಟೀರಿಯಲ್ ವರ್ಲ್ಡ್' 1973ರಲ್ಲಿ ಬಿಡುಗಡೆಯಾಗಿತ್ತು. ವಿಶಿಷ್ಟ ಪ್ರತಿಭೆಗೆ ಹೆಸರುವಾಸಿಯಾದ ಅವರು ಯಾವುದೇ ಸಮತಟ್ಟಾದ ಮೇಲ್ಮೈಯನ್ನು ಬಳಸಿ ಲಯವನ್ನು ರಚಿಸುತ್ತಿದ್ದರು. ಸಂಗೀತಕ್ಕೆ ತವಾ ಮತ್ತು ಥಾಲಿಯಂತಹ ಅಡುಗೆ ಪಾತ್ರೆಗಳನ್ನು ಸಹ ಬಳಸಿ ಗಮನ ಸೆಳೆದಿದ್ದರು.
ಅವರ ವೃತ್ತಿಜೀವನದುದ್ದಕ್ಕೂ ಭಾರತೀಯ ಶಾಸ್ತ್ರೀಯ ಮತ್ತು ವಿಶ್ವ ಸಂಗೀತ ಎರಡಕ್ಕೂ ವಿಶೇಷ ಕೊಡುಗೆಗಳನ್ನು ಹುಸೇನ್ ನೀಡಿದ್ದಾರೆ. ತಮ್ಮ ಅಸಾಧಾರಣ ತಬಲಾ ಕೌಶಲ್ಯಗಳ ಮೂಲಕ ಹಲವಾರು ಮೆಚ್ಚುಗೆ ಪಡೆದಿರುವ ಅವರು ಭಾರತೀಯ ಮತ್ತು ಅಂತರಾಷ್ಟ್ರೀಯ ಸಿನಿಮಾಗಳಲ್ಲೂ ಸಂಗೀತ ಸಂಯೋಜಿಸಿ, ಪ್ರದರ್ಶನವೂ ನೀಡಿದ್ದರು. ಅವರು ನಾಲ್ಕು ದಶಕಗಳ ಹಿಂದೆ ತಮ್ಮ ಕುಟುಂಬದೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯೇ ಹುಸೇನ್ ಅವರು ಜಾಗತಿಕ ಸಂಗೀತದತ್ತ ಚಿತ್ತ ಹರಿಸಿದ್ದರು.
ತಬಲಾ ವಿದ್ವಾಂಸರಾಗಿದ್ದ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರವು ಅವರಿಗೆ 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮ ವಿಭೂಷಣ ಸೇರಿದಂತೆ ಪ್ರತಿಷ್ಠಿತ ನಾಗರಿಕ ಗೌರವಗಳನ್ನು ನೀಡಿದೆ.












Click it and Unblock the Notifications