• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

24 ಗಂಟೆ.. 50 ಸಾವು.. 2,600ಕ್ಕೂ ಹೆಚ್ಚು ಜನರಿಗೆ ಸೋಂಕು.. ಅಬ್ಬಬ್ಬಾ ಅಮೇರಿಕಾ!

|

ವಾಶಿಂಗ್ ಟನ್, ಮಾರ್ಚ್.22: ಕೊರೊನಾ ವೈರಸ್ ಕಾಟಕ್ಕೆ ಅಮೆರಿಕಾಗೆ ಅಮೆರಿಕಾವೇ ಸ್ತಬ್ಧಗೊಂಡಿದೆ. ಲಾಕ್ ಡೌನ್ ಆಗಿರುವ ದೇಶದಲ್ಲೂ ಕೂಡಾ ಸೋಂಕಿತರು ಮತ್ತು ಶಂಕಿತರ ಸಂಖ್ಯೆ ದಿನೇ ದಿನೆ ಸಾವಿರದ ಗಡಿ ದಾಟುತ್ತಿದೆ.

ಕಳೆದ 24 ಗಂಟೆಗಳಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಹರಡಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಕೇಳುತ್ತಿದ್ದರೆ ಎದೆಯಲ್ಲಿ ನಡುಕ ಹುಟ್ಟುತ್ತದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಶನಿವಾರ ಒಂದೇ ದಿನ 50ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ.

ಕೊರೊನಾ ವೈರಸ್: ಯಾವ ವಯಸ್ಸಿನವರಿಗೆ ಎಷ್ಟು ಅಪಾಯ? ಇಲ್ಲಿದೆ ವಿವರ

ಯುನೈಟೆಡ್ ಸ್ಟೇಟ್ಸ್ ನಲ್ಲಿ ಭಾನುವಾರದ ಅಂಕಿ-ಅಂಶಗಳ ಪ್ರಕಾರ 2,685ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಸ್ಪಷ್ಟವಾಗಿದೆ. ಇದುವರೆಗೂ ಸೋಂಕಿತರ ಸಂಖ್ಯೆಯು 26,892ಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಲಕ್ಷದ ಗಡಿ ದಾಟುವಂತೆ ನೀಡಿದ ವರದಿ ನಿಜವಾಗುತ್ತಾ?

ಲಕ್ಷದ ಗಡಿ ದಾಟುವಂತೆ ನೀಡಿದ ವರದಿ ನಿಜವಾಗುತ್ತಾ?

ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ವರದಿ ಪ್ರಕಾರ ಕೊರೊನಾ ವೈರಸ್ ನಿಂದ ಯುನೈಟೆಡ್ ಸ್ಟೇಟ್ಸ್ ನಲ್ಲೇ 20 ಲಕ್ಷ 20 ಸಾವಿರಕ್ಕೂ ಅಧಿಕ ಜನರು ಪ್ರಾಣ ಬಿಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇಂಪೀರಿಯರ್ ಕಾಲೇಜ್ ನ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ವರದಿಯ ಪ್ರತಿಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಂಗ್ಲೆಂಡ್ ನ ವೈಜ್ಞಾನಿಕ ಸಲಹಾ ಸಮಿತಿ ಮುಖ್ಯಸ್ಥ ಸರ್ ಪ್ಯಾಟ್ರಿಕ್ ವ್ಯಾಲೆನ್ಸ್ ಅವರಿಗೆ ನೀಡಲಾಗಿದೆ ಎಂದು ಪ್ರೊಫೆಸರ್ ನೀಲ್ ಫರ್ಗ್ಯೂಸನ್ ಸಿಎನ್ಎನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ನಲ್ಲಿ ಶನಿವಾರ 3,200 ಮಂದಿಗೆ ಸೋಂಕು

ಯುನೈಟೆಡ್ ಸ್ಟೇಟ್ಸ್ ನಲ್ಲಿ ಶನಿವಾರ 3,200 ಮಂದಿಗೆ ಸೋಂಕು

ಅಮೆರಿಕಾದಲ್ಲಿ ಖಾಸಗಿ ಲ್ಯಾಬೋರೇಟರಿಗಳಿಗೂ ಕೊರೊನಾ ವೈರಸ್ ತಪಾಸಣೆಗೆ ಅನುಮತಿ ನೀಡಲಾಗಿದೆ. ಶನಿವಾರ 3,200ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ತಪಾಸಣೆ ವೇಳೆ ದೃಢಪಟ್ಟಿದೆ. ವಾಶಿಂಗ್ ಟನ್ ನಲ್ಲಿರುವ ಒಂದೇ ಒಂದು ಆಸ್ಪತ್ರೆಯಲ್ಲಿ 32ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿರುವ ಬಗ್ಗೆ ವರದಿಯಾಗಿದೆ.

ಅಮೆರಿಕಾದ ವಾಶಿಂಗ್ ಟನ್ ನಲ್ಲಿ ಅತಿಹೆಚ್ಚು ಸಾವು

ಅಮೆರಿಕಾದ ವಾಶಿಂಗ್ ಟನ್ ನಲ್ಲಿ ಅತಿಹೆಚ್ಚು ಸಾವು

ಪ್ರತಿದಿನ ವಾಶಿಂಗ್ ಟನ್ ನಲ್ಲಿ 100ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ತಪಾಸಣೆ ವೇಳೆ ದೃಢಪಟ್ಟಿದೆ. ಇದೀಗ ಸೋಂಕಿತರ ಸಂಖ್ಯೆಯು 1,647ಕ್ಕೆ ಏರಿಕೆಯಾಗಿದ್ದು, ಇದುವರೆಗೂ 96ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು.

ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಯಾವ ರಾಜ್ಯಕ್ಕೆಷ್ಟು ಕೇಸ್?

ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಯಾವ ರಾಜ್ಯಕ್ಕೆಷ್ಟು ಕೇಸ್?

ರಾಜ್ಯ ಪ್ರಕರಣಗಳು ಸಾವು

ನ್ಯೂಯಾರ್ಕ್ 10,356 80

ವಾಶಿಂಗ್ ಟನ್ 1,647 96

ಕ್ಯಾಲಿಪೋರ್ನಿಯಾ 1,346 24

ನ್ಯೂ ಜೆರ್ಸಿ 1,336 16

ಮಿಚಿಗನ್ 786 05

ಇಲ್ಲಿನೈಸ್ 753 06

ಫ್ಲೋರಿಡಾ 727 11

ಲೋಸಿಯಾನ 585 16

ಮಾಸ್ ಚುಸೆಟ್ 525 01

ಜಿಯೋರ್ಜಿಯಾ 506 14

English summary
Last 24 Hours: More than 50 Peoples Death From Coronavirus In United State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X