ವಿಡಿಯೋ : 16 ಬಾರಿ ಭಾರತದ ಮನವಿ ತಿರಸ್ಕರಿಸಿದ ಪಾಕಿಸ್ತಾನ

By: ವಿಕಾಸ್ ನಂಜಪ್ಪ
Subscribe to Oneindia Kannada

ಹೇಗ್, ಮೇ 15: ನೆದರ್ಲೆಂಡ್ ನಲ್ಲಿರುವ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಭಾರತೀಯ ನೌಕಾದಳದ ಅಧಿಕಾರಿ ಕುಲಭೂಷಣ ಯಾದವ್ ರನ್ನು ಗೂಢಚಾರಿ ಎಂದು ಆರೋಪಿಸಿ ಪಾಕಿಸ್ತಾನ ಗಲ್ಲುಶಿಕ್ಷೆ ನೀಡಿದೆ.

ಈ ಆದೇಶದ ವಿರುದ್ಧ ಕೋರ್ಟಿನಲ್ಲಿ ಭಾರತ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ಸೋಮವಾರ ಮಧ್ಯಾಹ್ನ 1.30ರಿಂದ ಜಾರಿಯಲ್ಲಿದೆ.

* ಭಾರತದಿಂದ ವಾದ ಮಂಡನೆ ಮುಕ್ತಾಯ. ಇಂದೇ ತೀರ್ಪು ಹೊರ ಬೀಳುವ ಸಾಧ್ಯತೆ ಕಡಿಮೆ.
* 16 ಬಾರಿ ಭಾರತದ ಮನವಿ ತಿರಸ್ಕರುವ ಪಾಕಿಸ್ತಾನ, ಕುಲಭೂಷಣ್ ಮೇಲೆ ಒತ್ತಡ ಹೇರಿ ಗೂಢಚಾರಿಕೆ ಮಾಡಿದ ಆರೋಪ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ ಎಂದು ಹರೀಶ್ ಸಾಳ್ವೆ ವಾದ.
* ಕುಲಭೂಷನ್ ವಿಚಾರಣೆ ಬಗ್ಗೆ ಭಾರತಕ್ಕೆ ತಿಳಿಸದ ಪಾಕಿಸ್ತಾನವು ಕಾನೂನು ಉಲ್ಲಂಘಿಸಿದೆ
* ವಿಯೆನ್ನಾ ಒಪ್ಪಂದ ಮುರಿದಿರುವ ಪಾಕಿಸ್ತಾನ, ಕೈದಿಗಳ ವಿಚಾರಣೆ ನಿಯಮ ಉಲ್ಲಂಘಿಸಿದೆ.

* ಅಂತಾರಾಷ್ಟ್ರೀಯ ಕೋರ್ಟಿನ ಆದೇಶ ಹೊರ ಬರುವ ಮೊದಲೇ ಯಾದವ್ ರನ್ನು ಪಾಕಿಸ್ತಾನ ಗಲ್ಲಿಗೇರಿಸುವ ಭೀತಿ ಇದೆ.

* ಕುಲಭೂಷಣ್ ಯಾದವ್ ವಿರುದ್ಧ ಹಾಕಲಾಗಿರುವ ಚಾರ್ಜ್ ಶೀಟ್ ಕೂಡಾ ಭಾರತಕ್ಕೆ ನೀಡಿಲ್ಲ.

* ಕುಲಭೂಷಣ್ ಯಾದವ್ ಪರ ದೀಪಕ್ ಮಿತ್ತಲ್ ಹಾಗೂ ಹರೀಶ್ ಸಾಳ್ವೆ ಅವರಿಂದ ವಾದ ಮಂಡನೆ

Kulbhushan Jadhav at the ICJ: An Indo-Pak face off today

* ಕುಲಭೂಷಣ್ ಯಾದವ್ ಅವರನ್ನು ಭೇಟಿ ಮಾಡಲು ಯಾದವ್ ಅವರ ತಂದೆ ತಾಯಿಗೆ ಅವಕಾಶ ನೀಡಿಲ್ಲ
* ಯಾದವ್ ತಂದೆ ತಾಯಿಗೆ ನೀಡಬೇಕಾಗಿದ್ದ ವೀಸಾಕ್ಕೆ ಪಾಕಿಸ್ತಾನ ತಡೆ ನೀಡಿರುವುದು ಏಕೆ?

* ಅಂತಾರಾಷ್ಟ್ರೀಯ ಕೋರ್ಟಿನ ಆದೇಶ ಹೊರ ಬರುವ ಮೊದಲೇ ಯಾದವ್ ರನ್ನು ಪಾಕಿಸ್ತಾನ ಗಲ್ಲಿಗೇರಿಸುವ ಭೀತಿ ಇದೆ.

* ಕುಲಭೂಷಣ್ ಯಾದವ್ ವಿರುದ್ಧ ಹಾಕಲಾಗಿರುವ ಚಾರ್ಜ್ ಶೀಟ್ ಕೂಡಾ ಭಾರತಕ್ಕೆ ನೀಡಿಲ್ಲ.

ಕುಲಭೂಷಣ ಯಾದವ್ ವಿರುದ್ ಪಾಕಿಸ್ತಾನದ ಸೇನಾ ಕೋರ್ಟ್ ನೀಡಿದ ಗಲ್ಲುಶಿಕ್ಷೆ ಆದೇಶಕ್ಕೆ ಅಂತಾರಾಷ್ಟ್ರೀಯ ಕೋರ್ಟ್ (ಐಸಿಜೆ) ಕಳೆದ ವಾರ ತಡೆಯಾಜ್ಞೆ ನೀಡಿತ್ತು.

Kulbhushan Jadhav at the ICJ: An Indo-Pak face off today

ಈ ಕುರಿತಂತೆ ಮೇ 15ರ ಮಧ್ಯಾಹ್ನ 1.30(ಭಾರತೀಯ ಕಾಲಮಾನ ಪ್ರಕಾರ) ವಿಚಾರಣೆ ಆರಂಭವಾಗಿದೆ. ಭಾರತದ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಸುಮಾರು ಒಂದು ಗಂಟೆಗಳ ಕಾಲ ತಮ್ಮ ವಾದ ಮಂಡಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It would be an Indo-Pak face off at The Hague today as both nations argue before the International Court of Justice on the Kulbhushan Jadhav issue. The ICJ had stayed the execution of Jadhav by Pakistan last week.
Please Wait while comments are loading...