ಮ್ಯಾಂಚೆಸ್ಟರ್ ನಲ್ಲಿ ಅಪರಿಚಿತ ವ್ಯಕ್ತಿಯಿಂದ ಮೂವರಿಗೆ ಚೂರಿ ಇರಿತ
ಇಂಗ್ಲೆಂಡ್, ಜನವರಿ 01 : ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮ್ಯಾಂಚೆಸ್ಟರ್ ನ ವಿಕ್ಟೋರಿಯಾ ರೈಲ್ವೆ ನಿಲ್ದಾಣದಲ್ಲಿ ಚಾಕುಧಾರಿ ವ್ಯಕ್ತಿಯೊಬ್ಬ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರಿಗೆ ಇರಿದಿದ್ದಾನೆ.
ಸ್ಥಳೀಯ ಕಾಲಮಾನ ಸಂಜೆ 8.50ರ ಸುಮಾರಿಗೆ ಈ ಘಟನೆ ನಡೆದಿದ್ದು, ಬ್ರಿಟಿಷ್ ಸಂಚಾರಿ ಪೊಲೀಸ್ ನ ಭುಜದ ಮೇಲೆ ವ್ಯಕ್ತಿಯೊಬ್ಬ ಇರಿದಿದ್ದಾನೆ. ಐವತ್ತು ವರ್ಷ ಆಸುಪಾಸಿನಲ್ಲಿರುವ ದಂಪತಿಗಳು ಕೂಡ ಚಾಕುವಿನಿಂತ ಇರಿತಕ್ಕೊಳಗಾಗಿದ್ದಾರೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ತಿಳಿಸಿದ್ದಾರೆ.
ಇದು ಭಯೋತ್ಪಾದಕ ದಾಳಿ ಇರಬಹುದಾ ಎಂಬ ಬಗ್ಗೆ ತನಿಖೆ ನಡೆಸುತ್ತಿರುವ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ. ಸದ್ಯಕ್ಕೆ ರೈಲ್ವೆ ನಿಲ್ದಾಣವನ್ನು ಮುಚ್ಚಲಾಗಿದ್ದು, ಪೊಲೀಸರು ದಾಳಿಯ ಹಿಂದಿನ ಕಾರಣದ ಪತ್ತೆಯಲ್ಲಿ ತೊಡಗಿದ್ದಾರೆ.

ಈ ದಾಳಿಯನ್ನು ತನಿಖಾ ದಳದವರು ಅತ್ಯಂತರ ಗಂಭೀರ ಪ್ರಕರಣ ಎಂದು ಬಣ್ಣಿಸಿದ್ದು, ಇಂಥ ದಾಳಿಯ ಬಗ್ಗೆ ಗುಪ್ತದಳದಿಂದ ಯಾವುದೇ ಮುನ್ಸೂಚನೆ ಬಂದಿರಲಿಲ್ಲ ಎಂದಿದ್ದಾರೆ. ದಾಳಿಗೊಳಗಾಗಿರುವವರಿಗೆ ಗಂಭೀರವಾದ ಗಾಯಗಳಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆಗೆ ಕೈಗೆ ಮತ್ತು ಹೊಟ್ಟೆಗೆ ಗಾಯವಾಗಿದ್ದರೆ, ಆಕೆಯ ಗಂಡನಿಗೆ ಹೊಟ್ಟೆಯ ಬಳಿ ಆಳವಾದ ಗಾಯವಾಗಿದೆ.
ನನ್ನಿಂದ ಕೆಲವೇ ಹೆಜ್ಜೆ ದೂರದಲ್ಲಿದ್ದ ವ್ಯಕ್ತಿಯೊಬ್ಬ ಸ್ಟೇಷನ್ ನ ಟ್ರಾಮ್ ಪ್ಲಾಟ್ ಫಾರಂನಲ್ಲಿ ಚಾಕುವಿನಿಂದ ಇರಿಯುತ್ತಿದ್ದುದನ್ನು ನೋಡಿದೆ. ದಾಳಿಕೋರನ ಬಳಿ ದೊಡ್ಡ ಚಾಕು ಇದ್ದಿದ್ದರಿಂದ ನಾನು ಪ್ಲಾಟ್ ಫಾರಂ ಜಂಪ್ ಮಾಡುವವನಿದ್ದೆ ಎಂದು ಆಗ ಅದೇ ಸ್ಥಳದಲ್ಲಿದ್ದ ಬಿಬಿಸಿ 5 ಲೈವ್ ನಿರ್ಮಾಪಕ ಸ್ಯಾಮ್ ಕ್ಲಾರ್ಕ್ ಎಂಬುವವರು ಘಟನೆಯನ್ನು ವಿವರಿಸಿದ್ದಾರೆ.
ಮೊದಲಿಗೆ ಇಬ್ಬರು ಪುರುಷರ ನಡುವೆ ಜಗಳ ನಡೆದಿರಬಹುದು ಎಂದು ಅಂದುಕೊಂಡಿದ್ದೆ. ಆದರೆ, ಅವರ ಪಕ್ಕದಲ್ಲಿದ್ದ ಮಹಿಳೆ ಕೂಡ ರಕ್ತಸಿಕ್ತರಾಗಿ ಚೀರಿಕೊಳ್ಳಲು ಆರಂಭಿಸಿದರು. ಚೀರಾಟ ಕೇಳಿ ಪೊಲೀಸರೊಬ್ಬರು ಓಡಿಬರುತ್ತಿದ್ದಂತೆ ಚಾಕು ಹಿಡಿದಿದ್ದವ ನನ್ನ ಬಳಿ ಬರಲು ಆರಂಭಿಸಿದ. ನಾನು ಅತ್ಯಂತ ಭಯಭೀತನಾಗಿದ್ದೆ. ಆತನ ಬಳಿ 12 ಇಂಚ್ ನ ಅಡುಗೆಮನೆಯಲ್ಲಿ ಬಳಸುವ ಚಾಕು ಇತ್ತು ಎಂದಿದ್ದಾರೆ ಕ್ಲಾರ್ಕ್.
ಆರೇಳು ಪೊಲೀಸರು ಆತನ ಮೇಲೆ ಮುಗಿಬಿದ್ದು, ಪೆಪ್ಪರ್ ಸ್ಪ್ರೇ ಸಿಂಪಡಿಸಿ ಆತನನ್ನು ಬಂಧಿಸಿದ್ದಾರೆ. ಆತ ತುಂಬಾ ಉಗ್ರನಾಗಿದ್ದ, ಕೂಡಲೆ ಬಂಧಿಸಿರದಿದ್ದರೆ ಇನ್ನೂ ಹೆಚ್ಚಿನ ಹಾನಿ ಮಾಡುವ ಸಾಧ್ಯತೆ ಇತ್ತು ಎಂದು ಕ್ಲಾರ್ಕ್ ವಿವರಿಸಿದ್ದಾರೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications