ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ಆರೋಗ್ಯ ಕಾರ್ಯದರ್ಶಿ ರಾಜೀನಾಮೆ ಹಿಂದೆ 'ಮುತ್ತಿನ ಕಥೆ'!

|
Google Oneindia Kannada News

ಲಂಡನ್, ಜೂನ್ 27: ಕೊರೊನಾವೈರಸ್ ನಿರ್ಬಂಧನಗಳ ನಡುವೆ ಆಪ್ತ ಸಹಾಯಕಿಗೆ ಮುತ್ತು ಕೊಟ್ಟ ಸುದ್ದಿ ವೈರಲ್ ಆಗುತ್ತಿದ್ದಂತೆ ಇಂಗ್ಲೆಂಡಿನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇಂಗ್ಲೆಂಡಿನಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ನಡೆಯುತ್ತಿರುವುದರ ನಡುವೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ರಿಗೆ ಪತ್ರವೊಂದನ್ನು ಬರೆದಿದ್ದಾರೆ. "ಮ್ಯಾಟ್ ಹ್ಯಾನ್ಕಾಕ್ ರಾಜೀನಾಮೆ ಸ್ವೀಕರಿಸುವುದಕ್ಕೆ ಬೇಸರ ಎನಿಸುತ್ತದೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಅವರು ಸಲ್ಲಿಸಿದ ಸೇವೆ ಕುರಿತು ಅಪಾರ ಗೌರವವಿದೆ," ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಪತಿ ಝೂಮ್ ಮೀಟಿಂಗ್‌ನಲ್ಲಿರುವಾಗ ಚುಂಬಿಸಲು ಬಂದ ಪತ್ನಿ: ವಿಡಿಯೋ ವೈರಲ್ಪತಿ ಝೂಮ್ ಮೀಟಿಂಗ್‌ನಲ್ಲಿರುವಾಗ ಚುಂಬಿಸಲು ಬಂದ ಪತ್ನಿ: ವಿಡಿಯೋ ವೈರಲ್

"ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಸಂದರ್ಭದಲ್ಲಿ ಪ್ರಮಾಣಿಕವಾಗಿದ್ದು, ರೋಗ ನಿಯಂತ್ರಣಕ್ಕಾಗಿ ನಿಯಮಗಳನ್ನು ಪಾಲನೆ ಮಾಡುವುದರ ಜೊತೆಗೆ ತಮ್ಮ ಬದುಕನ್ನೇ ತ್ಯಾಗ ಮಾಡಿದವರಿಗೆ ನಾನು ಚಿರಋಣಿ ಆಗಿರುತ್ತೇನೆ. ಇದರ ಮಧ್ಯ ನನ್ನಿಂದ ಕೊವಿಡ್-19 ನಿಯಮಗಳ ಉಲ್ಲಂಘನೆ ಆಗಿದೆ, ಎಂದು ಇಂಗ್ಲೆಂಡ್ ಪ್ರಧಾನಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Kiss Controversy: England Health Secretary Resigns After Coronavirus Rules Violation

ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ಸಾಜಿದ್ ಜಾವಿದ್ ನೇಮಕ:

ಇಂಗ್ಲೆಂಡ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಲ್ ರಾಜೀನಾಮೆ ಬೆನ್ನಲ್ಲೇ ಆ ಸ್ಥಾನಕ್ಕೆ ಸಾಜಿದ್ ಜಾವಿದ್ ಎಂ. ಪಿ ಅನ್ನು ನೇಮಿಸಲಾಗಿದೆ. ಹೊಸ ನೇಮಕಾತಿಗೆ ಸಂಬಂಧಿಸಿದಂತೆ ರಾಣಿ 2ನೇ ಎಲಿಜಬೆತ್ ಅನುಮೋದನೆ ನೀಡಿದ್ದಾರೆ.

ರಾಜೀನಾಮೆ ಹಿಂದೆ 'ಒಂದು ಮುತ್ತಿನ ಕಥೆ':

Recommended Video

Virat Kohliಗೆ ಇಷ್ಟೊಂದು ಅವಮಾನ ಆಗ್ತಿರೋದು ಯಾಕೆ !! | Oneindia Kannada

ಕಳೆದ ಮೇ 6ರಂದು ತಮ್ಮ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಪ್ತ ಸಹಾಯಕಿ ಗಿನಾ ಕೊಲೊಡಂಗೆಲೋರಿಗೆ ಆರೋಗ್ಯ ಕಾರ್ಯದರ್ಶಿ ಆಗಿದ್ದ ಮ್ಯಾಟ್ ಹ್ಯಾನ್ಕಾಕ್ ಮುತ್ತು ನೀಡಿರುವ ಬಗ್ಗೆ 'ದಿ ಸನ್' ಪತ್ರಿಕೆ ವರದಿ ಮಾಡಿತ್ತು. ಕೊವಿಡ್-19 ನಿರ್ಬಂಧಗಳ ನಡುವೆ ಸಾಮಾಜಿಕ ಅಂತರವನ್ನು ಮರೆತು ಆಪ್ತ ಸಹಾಯಕಿಗೆ ಮುತ್ತು ನೀಡಿರುವ ಘಟನೆ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು.

English summary
Kiss Controversy: England Health Secretary Matt Hancock Resigns After Coronavirus Rules Violation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X