• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಕಾಫಿ, ಒಂದು ಟೀ ಗೆ 78,650 ಬಿಲ್ ನೀಡಿದ ಹೋಟೆಲ್!

|

ಬಾಲಿ, ಸೆಪ್ಟೆಂಬರ್ 04: ಕೆಲವು ದಿನಗಳ ಹಿಂದಷ್ಟೆ ಚಂಡೀಘಡದ ಐಶಾರಾಮಿ ಹೊಟೆಲ್ ಒಂದು ಎರಡು ಬಾಳೆಹಣ್ಣಿಗೆ 442 ರೂಪಾಯಿ ಬಿಲ್ ಹಾಕಿತ್ತು. ಮುಂಬೈನ ಹೊಟೆಲ್ ಒಂದು ಎರಡು ಬೇಯಿಸಿದ ಮೊಟ್ಟೆಗೆ 1700 ರೂಪಾಯಿ ಬಿಲ್ ಹಾಕಿದ್ದರು.

ಆದರೆ ಈಗ ಒಂದು ಕಾಫಿ ಮತ್ತು ಟೀ ಗೆ 78,650 ಬಿಲ್ ಹಾಕಿದ್ದಾರೆ. ಆದರೆ ಈ ಬಾರಿ ಬಿಲ್ ಪಾವತಿಸಿರುವ ಸೆಲೆಬ್ರಿಟಿಯು ಈ ಬಗ್ಗೆ ತಾವು ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮುಂಬೈನ ಹೋಟೆಲ್ ನಲ್ಲಿ ಬೇಯಿಸಿರುವ ಎರಡು ಮೊಟ್ಟೆಗೆ 1,700 ರುಪಾಯಿ

ಹೌದು, ಕಾಮಿಡಿಯನ್ ಕಿಕು ಶಾರ್ದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಒಂದು ಕಾಫಿ ಮತ್ತು ಒಂದು ಟೀಗೆ ಬರೋಬ್ಬರಿ 78,650 ಬಿಲ್ ಹಾಕಿದ್ದಾರೆ. ಆದರೆ ಈ ಬಗ್ಗೆ ನಾನು ದೂರು ನೀಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಬಿಲ್‌ನ ಚಿತ್ರವನ್ನೂ ಹಾಕಿದ್ದಾರೆ.

ನಿಜ ಸಂಗತಿ ಏನೆಂದರೆ, ಕಿಕು ಶಾರ್ದಾ ಹಾಕಿರುವ ಬಿಲ್ ಇಂಡೊನೇಷ್ಯಾದ ಬಾಲಿಯ ಹೊಟೆಲ್ ಒಂದರದ್ದು. ಅಲ್ಲಿನ ಹೊಟೆಲ್‌ನಲ್ಲಿ ಅವರಿಗೆ ಒಂದು ಕೆಫೆಚೀನೊ ಕಾಫಿಗೆ 35,000 ಬಿಲ್ ಹಾಕಿದ್ದರೆ, ಒಂದು ಬಿಸಿ ಚಹಕ್ಕೆ 30,000 ಬಿಲ್ ಹಾಕಿದ್ದಾರೆ. ಸೇವಾ ತೆರಿಗೆ 13,650 ಹಾಕಿದ್ದಾರೆ.

ವಿಷಯವೆಂದರೆ ಅಷ್ಟು ದೊಡ್ಡ ಬಿಲ್ ಪಾವತಿಸಿದರೂ ತಾವು ದೂರು ನೀಡುವುದಿಲ್ಲವೆಂದು ಕಿಕು ಶಾರ್ದಾ ಹೇಳಿರುವುದಕ್ಕೆ ಕಾರಣ, ಇಂಡೋನೇಷ್ಯಾದ 78,650 ರುಪಯ್ಯಾ ಭಾರತದ 400 ರೂಪಾಯಿಗಳಿಗೆ ಸಮ. ಹಾಗಾಗಿ ಕಿಕು ಶಾರ್ದಾ ಆರಾಮವಾಗಿ ಬಿಲ್ ಕೊಟ್ಟು ಬಂದಿದ್ದಾರೆ.

ಇಂಡೊನೇಷ್ಯಾದಲ್ಲಿ ರುಪಯಾ ಎಂಬ ಹಣ ಚಾಲ್ತಿಯಲ್ಲಿದೆ. ಇದು ಭಾರತದ ರೂಪಾಯಿಗಿಂತಲೂ ಬಹಳ ಕಡಿಮೆ ಮೌಲ್ಯದ್ದಾಗಿದೆ. ಹಾಗಾಗಿಯೇ 78,650 ಬಿಲ್ ಆಗಿದ್ದರೂ ಸಹ ಅದನ್ನು ಭಾರತದ ರೂಪಾಯಿಯಲ್ಲಿ ಬದಲಾಯಿಸಿದರೆ ಕೇವಲ 400 ರೂಪಾಯಿ ಮಾತ್ರವೇ ಆಗುತ್ತದೆ.

English summary
Comedian Kiku Sharda received 78,650 bill for just one coffee and one tea. But he is in Bali so as per Indian rupee it only cost 400 rs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X