• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಟ್ಟ ರಾಷ್ಟ್ರದ ನ್ಯಾಯಾಲಯ ಕೊಟ್ಟ ತೀರ್ಪಿಗೆ ಸುಸ್ತು ಹೊಡೆದ ಚೀನಾ

|

ನೈರೋಬಿ, ಜೂನ್ 25: ಪೂರ್ವ ಆಫ್ರಿಕಾದ ಪುಟ್ಟ ರಾಷ್ಟ್ರ ಕೀನ್ಯಾದ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ಚೀನಾ ಸುಸ್ತು ಹೊಡೆದಿದೆ. ಆ ದೇಶದಲ್ಲಿ ಚೀನಾದ ಸಹಯೋಗದೊಂದಿಗೆ ನಡೆಯುತ್ತಿರುವ ಅತಿದೊಡ್ದ ಪ್ರಾಜೆಕ್ಟ್ ಒಂದನ್ನು ಕಾನೂನು ಬಾಹಿರ ಎಂದು ತೀರ್ಪು ನೀಡಿದೆ.

   Sushanth Singh Rajput : ಬಂತು ಸುಶಾಂತ್ ಸಿಂಗ್ 2ನೇ ಮರಣೋತ್ತರ ಪರೀಕ್ಷೆ ವರದಿ|Final Report | Oneindia Kannada

   ಕೀನ್ಯಾ ಸರಕಾರ ಮತ್ತು ಚೀನಾ ರೋಡ್ ಬ್ರಿಡ್ಜ್ ಕಾರ್ಪೊರೇಷನ್ (ಸಿಆರ್‌ಬಿಸಿ) ನಡುವಿನ ಒಪ್ಪಂದವು, ಕಾನೂನನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಕೀನ್ಯಾದ ನ್ಯಾಯಾಲಯ ತೀರ್ಪು ನೀಡಿದೆ.

   ಗಾಲ್ವಾನ್ ಕಣಿವೆ ಗಡಿಯಿಂದ ಸೇನೆ ಹಿಂದಕ್ಕೆ ಪಡೆದ ಚೀನಾ?

   ಚೀನಾದ ಮಹತ್ವಾಕಾಂಕ್ಷೆಯಯ ಬಿಆರ್‌ಐ ಪ್ರಾಜೆಕ್ಟ್ (ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್) ಭಾಗವಾಗಿರುವ ಸ್ಟ್ಯಾಂಡರ್ಡ್ ಗೇಜ್ ರೈಲ್ವೆ (ಎಸ್‌ಜಿಆರ್) ಖರೀದಿಯಲ್ಲಿ ಸರಕಾರೀ ಸ್ವಾಮ್ಯದ ಕೀನ್ಯಾ ರೈಲ್ವೆ, ದೇಶದ ಕಾನೂನನ್ನು ಪಾಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

   3.2 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಈ ಪ್ರಾಜೆಕ್ಟ್ ಕಾನೂನು ಬಾಹಿರ ಎಂದು ಕೀನ್ಯಾ ನ್ಯಾಯಾಲಯ ತೀರ್ಪು ನೀಡಿದೆ. ಕೀನ್ಯಾದ ಕಾರ್ಯಕರ್ತರೊಬ್ಬರು ಈ ಪ್ರಾಜೆಕ್ಟ್ ಅನ್ನು ನಿಲ್ಲಿಸುವಂತೆ 2014ರಲ್ಲಿ ಮೊಕದ್ದಮೆ ಹೂಡಿದ್ದರು.

   ಟೆಂಡರ್ ಕರೆಯದೇ ಅಂತಿಮಗೊಳಿಸಲಾಗಿರುವ ಪ್ರಾಜೆಕ್ಟ್ ಇದಾಗಿದ್ದು, ಈ ಸಾಲದ ಮರುಪಾವತಿಯ ಜವಾಬ್ದಾರಿ ಕೀನ್ಯಾದ ಪ್ರತೀ ತೆರಿಗೆ ಪಾವತಿದಾರರ ಮೇಲೆ ಬೀಳಲಿದೆ. ಹಾಗಾಗಿ, ಈ ಪ್ರಾಜೆಕ್ಟ್ ಅನ್ನು ರದ್ದುಗೊಳಿಸುವಂತೆ, ಕಾರ್ಯಕರ್ತ ಕಾನೂನು ಮೊರೆ ಹೋಗಿದ್ದರು.

   ಕೀನ್ಯಾ ಸರಕಾರೀ ಒಡೆತನದ ಸಿಆರ್ಬಿಸಿ ಸಂಸ್ಥೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿತ್ತು. ಕೀನ್ಯಾದ ಹೈಕೋರ್ಟ್ ಈ ಆದೇಶ ನೀಡಿದ್ದು, ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.

   English summary
   A Setback To China: Kenya Hight Court Rejects China's Multi-Billion Dollar BRI Rail Project.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X