Get Updates
Get notified of breaking news, exclusive insights, and must-see stories!

Bengaluru with Maldives: ಮಾಲ್ಡೀವ್ಸ್‌ ಐಟಿ ಉದ್ಯಮಕ್ಕೆ ಸಿಗಲಿದೆ ಸಿಲಿಕಾನ್‌ ಸಿಟಿಯ ಸಾಥ್‌!

ಭಾರತದ ಎದುರು ತೊಡೆ ತಟ್ಟಿದ್ದ ಮಾಲ್ಡೀವ್ಸ್‌ ಈಗ ಭಾರತದ್ದೇ ಸಪೋರ್ಟ್‌ ಪಡೆದುಕೊಳ್ಳಲು ಮುಂದಾಗಿದೆ. ಸದ್ಯ ಮೂರು ದಿನಗಳಲ್ಲಿ ಪ್ರವಾಸದಲ್ಲಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ತಮ್ಮ ಪತ್ನಿ ಜೊತೆ ಇಂದು ಉದ್ಯಾನನಗರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ರಾಜ್ಯ ಸರ್ಕಾರದೊಂದಿಗೆ ಮಹತ್ವದ ಚರ್ಚೆಗಳನ್ನು ಸಹ ಮಾಡಿದ್ದಾರೆ.

ದೆಹಲಿಯಿಂದ ನೇರವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮುಯಿಝು ದಂಪತಿಯನ್ನು ರಾಜ್ಯ ಸರ್ಕಾರ ಬರಮಾಡಿಕೊಂಡು ಆತಿಥ್ಯ ನೀಡಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಮೊಹಮ್ಮದ್ ಮುಯಿಝು ಭೇಟಿಯಾಗಿ, ಹಲವು ಒಪ್ಪಂದಗಳನ್ನು ಸಹ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Karnataka Government Will Support IT Industry In Maldives

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಮಾಲ್ಡೀವ್ಸ್ ಅಧ್ಯಕ್ಷರಾದ ಮೊಹಮ್ಮದ್ ಮುಯಿಝು ಹಾಗೂ ಮತ್ತು ಮಾಲ್ಡೀವ್ಸ್‌ನ ಪ್ರಥಮ ಮಹಿಳೆಯಾದ ಮುಯಿಝು ಪತ್ನಿ ಸಾಜಿದಾ ಮೊಹಮ್ಮದ್ ಅವರನ್ನು ಬೆಂಗಳೂರಿಗೆ ಸ್ವಾಗತಿಸಲು ನನಗೆ ಗೌರವವಿದೆ. ಸಾಜಿದಾ ಅವರು ನಮ್ಮ ಬೆಂಗಳೂರಿನಲ್ಲಿ ವಿದ್ಯಾರ್ಥಿ ಜೀವನ ಕಳೆದಿದ್ದರು ಎಂಬ ವಿಚಾರ ಅತೀವ ಸಂತಸವನ್ನುಂಟು ಮಾಡಿದೆ ಎಂದಿದ್ದಾರೆ.

ಜಾಗತಿಕವಾಗಿ ಐಟಿ ಸಿಟಿ, ಸಿಲಿಕಾನ್‌ ಸಿಟಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನ ಪ್ರಮುಖ ಐಟಿ ವಲಯದೊಂದಿಗೆ ಪಾಲುದಾರಿಕೆಗೆ ಮಾಲ್ಡೀವ್ಸ್ ಸರ್ಕಾರ ಆಸಕ್ತಿ ತೋರಿದೆ. ಭಾರತದ ಸಿಲಿಕಾನ್ ವ್ಯಾಲಿಯಾಗಿ, ಮಾಲ್ಡೀವ್ಸ್‌ನಲ್ಲಿ ಐಟಿ ಬೆಳವಣಿಗೆಯನ್ನು ಬೆಂಬಲಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಾಲ್ಡೀವ್ಸ್‌ಗೆ ಭೇಟಿ ನೀಡುವ ಅನೇಕ ಪ್ರವಾಸಿಗರಿಗೆ ಕರ್ನಾಟಕದ ಹೆಸರಾಂತ ಕರಕುಶಲ ಮತ್ತು ಕೈಮಗ್ಗಗಳನ್ನು ಉತ್ತೇಜಿಸುವ ಮೂಲಕ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

Karnataka Government Will Support IT Industry In Maldives

ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಪ್ರಾಕೃತಿಕ ಸೌಂದರ್ಯ ಮತ್ತು ಸುಮಾರು 300 ಕಿಲೋಮೀಟರ್ ಉದ್ದದ ಕರಾವಳಿ ಹೊಂದಿರುವ ಕರ್ನಾಟಕವನ್ನು ಸಾಮರಸ್ಯದ ನಾಡು, ಸರ್ವ ಜನಾಂಗದ ಶಾಂತಿಯ ತೋಟ, ಎಲ್ಲಾ ಸಮುದಾಯಗಳ ಶಾಂತಿಯ ತೋಟ ಎಂದು ಕವಿ ಕುವೆಂಪು ಮೊದಲೇ ಸಾರಿದ್ದರು ಎಂದು ನೆನೆದಿದ್ದಾರೆ.

ಕರ್ನಾಟಕ ಮತ್ತು ಮಾಲ್ಡೀವ್ಸ್ ನಡುವೆ ಶೈಕ್ಷಣಿಕ, ಸಾಂಸ್ಕೃತಿಕ ವಿನಿಮಯವನ್ನು ಬಲಪಡಿಸಲು ನಾವು ಪ್ರಯತ್ನಿಸುತ್ತೇವೆ. ಇದು ಎರಡೂ ರಾಷ್ಟ್ರಗಳ ನಡುವೆ ಸಹಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಭಾರತವೆಂದರೆ ಕೆಂಡಕಾರುತ್ತಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ಮೂರು ದಿನಗಳ ಪ್ರವಾಸದಲ್ಲಿದ್ದಾರೆ. ಮೊದಲಿಗೆ ದೆಹಲಿಗೆ ತಮ್ಮ ನಿಯೋಗದೊಂದಿಗೆ ತೆರಳಿದ್ದ ಅವರು ಇಂದು ಬೆಂಗಳೂರಿಗೆ ಬಂದಿದ್ದಾರೆ.

Karnataka Government Will Support IT Industry In Maldives

ಮುಯಿಝು ಪತ್ನಿ ಬೆಂಗಳೂರಿನ ವಿದ್ಯಾರ್ಥಿ: ಮುಯಿಝು ಅವರು ಇಂದು ತಮ್ಮ ಪತ್ನಿ ಸಾಜಿದಾ ಮೊಹಮ್ಮದ್ ಅವರೊಟ್ಟಿಗೆ ಬೆಂಗಳೂರಿಗೆ ಬಂದಿದ್ದಾರೆ. ಇದೇ ವೇಳೆ ಸಾಜಿದಾ ಅವರು ಬೆಂಗಳೂರಿನಲ್ಲೇ ಶಿಕ್ಷಣ ಪಡೆದಿದ್ದರು ಎನ್ನುವ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ. ಹಾಗಾಗಿ ಸಾಜಿದಾ ಅವರಿಗೆ ಬೆಂಗಳೂರು ಹೊಸದೇನಲ್ಲ ಎನ್ನುವುದು ಅಚ್ಚರಿಯ ಸಂಗತಿ.

ಮಾಲೆಯಲ್ಲಿ ಜನಿಸಿದ ಸಾಜಿದಾ ಅವರು 2003ರಲ್ಲಿ ತಮ್ಮ ಬ್ಯಾಚುಲರ್ ಪದವಿಯನ್ನು ಭಾರತದಲ್ಲೇ ಪೂರ್ಣಗೊಳಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಾಜಿದಾ ಅವರು ತಮ್ಮ ಪದವಿ ವ್ಯಾಸಂಗ ಮಾಡಿದ್ದರು ಎಂದು ಹೇಳಲಾಗಿದೆ. ಹಾಗಾಗಿ ಸಾಜಿದಾ ಅವರ ಕರ್ನಾಟಕದ ಹೆಣ್ಣುಮಗಳಿದ್ದಂತೆ, ಮುಯಿಝು ಬೆಂಗಳೂರಿನ ಅಳಿಯ ಎಂದೆಲ್ಲ ಹೇಳುತ್ತಿದ್ದಾರೆ.

ಸಾಜಿದಾ ಅವರು ಬೆಂಗಳೂರಿಗೆ ಈಗಾಗಲೇ ಪರಿಚಿತರಾಗಿರುವುದರಿಂದ ಖುದ್ದು ಅವರೇ ತಮ್ಮ ಪತಿ ಮೊಹಮ್ಮದ್ ಮುಯಿಝು ಅವರಿಗೆ ಸಿಲಿಕಾನ್‌ ಸಿಟಿಯನ್ನು ತೋರಿಸಲಿದ್ದಾರೆ ಎಂದು ಹೇಳಲಾಗಿದೆ. ತಾವು ಓದಿದ ಸೇಂಟ್‌ ಜೋಸೆಫ್‌ ಕಾಲೇಜಿಗೂ ಭೇಟಿ ನೀಡುವ ನಿರೀಕ್ಷೆ ಇದೆ.

Karnataka Government Will Support IT Industry In Maldives

ಸಾಜಿದಾ ಅವರು ಪದವಿ ಬಳಿಕ ಯುನೈಟೆಡ್ ಕಿಂಗ್‌ಡಂನ (ಯುಕೆ) ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ತನ್ನ ಪತಿಯೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ನಂತರ ಮಾಲ್ಡೀವ್ಸ್‌ನ ಸಿವಿಲ್ ಸರ್ವಿಸ್ ಕಮಿಷನ್‌ನಲ್ಲಿ ನಾಗರಿಕ ಸೇವಕರಾಗಿ ಕೆಲಸ ಮಾಡಿದರು ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+