ದುಬೈನಲ್ಲಿ ಭೀಕರ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರಿಗೆ ಕನ್ನಡಿಗರ ನೆರವು

ದುಬೈ, ಏಪ್ರಿಲ್‌, 29: ಸುನಾಮಿತಂಹ ಮಳೆ ಸುರಿದ ಪರಿಣಾಮ ಅಬು ಧಾಬಿಯ ಬಹುತೇಕ ಭಾಗಗಳಲ್ಲಿ ಪ್ರವಾಹ ಆಗಿದ್ದು, ಜನರ ಪರಿಸ್ಥಿತಿ ಹೇಳತೀರದಾಗಿದೆ. ಇನ್ನು ಭಾರೀ ಮಳೆ ಹಾಗೂ ಪ್ರವಾಹ ಹಿನ್ನೆಲೆ ಶಾರ್ಜಾ ಅಜ್ಮಾನ್ ಭಾಗದಲ್ಲಿ ಕಳೆದ ಒಂದು ವಾರದಿಂದಲೂ ಮನೆಯಿಂದ ಹೊರ ಬರಲಾಗದೆ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಇಲ್ಲಿರುವ ಕನ್ನಡಿಗರು ಜನರ ನೆರವಿಗೆ ನಿಂತಿದ್ದು, ಅಲ್ಲದೆ ರಕ್ಷಣೆಕಾರ್ಯ ಮಾಡಿ ಆಹಾರ ವಿತರಣೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರವಾಹದಲ್ಲಿ ಸಿಲುಕಿದ್ದ ಭಾರತೀಯರು ಸೇರಿದಂತೆ ಇತರ ವಿದೇಶಿಯರಿಗೆ ಆಹಾರ ಪದಾರ್ಥ, ನೀರು ಮತ್ತು ಇನ್ನಿತರ ಅವಶ್ಯಕ ವಸ್ತುಗಳನ್ನು ಕೊಡುವ ಕೆಲಸವನ್ನು ಹೆಮ್ಮೆಯ ದುಬೈ ಕನ್ನಡ ಸಂಘ ಮಾಡಿ ಮಾನವೀಯತೆ ಮೆರೆದಿದೆ ಎಂದು ತಿಳಿದುಬಂದಿದೆ.

Kannadigas helped To victims of flood in Dubai

ಪ್ರವಾಹದಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ಜನರಿಗೆ, ಕೊಡಗಿನ ರಫೀಕಲಿ, ಮಂಡ್ಯದ ಹಾದಿಯ, ಮಡಿಕೇರಿ ಪ್ರತಾಪ್, ಶಿವಮೊಗ್ಗದ ಸಂತೋಷ್, ಬೆಂಗಳೂರಿನ ಅರ್ಪಿತಾ, ಶಿವಮೊಗ್ಗ ಅಯ್ಯುಬ್, ನಝೀರ ಮಂಡ್ಯ ಮತ್ತು ಅಬ್ರಾರ್ ಅವರು ಸೇರಿ ವಾಹನಗಳು ಸಂಚಾರ ಮಾಡದಂತಹ ಸ್ಥಳಗಳಿಗೆ ದೋಣಿ ಬಳಸಿಕೊಂಡು ಆಹಾರ ಪದಾರ್ಥಗಳು ಸೇರಿದಂತೆ ಅವಶ್ಯಕ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

ಅಷ್ಟೇ ಅಲ್ಲದೆ, ದುಬೈನಲ್ಲಿರುವ ಎಂಬಿಎಮ್ ಕ್ಲಿನಿಕ್ ಜೊತೆ ಸೇರಿ ಉಚಿತ ಅರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧಿಯನ್ನು ತಲುಪಿಸುವಲ್ಲಿ ನಮ್ಮ ಹೆಮ್ಮೆಯ ಕರ್ನಾಟಕದ ಕನ್ನಡ ತಂಡ ಮಾಡುತ್ತಿದೆ ಎನ್ನಿವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+