• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಿ ಪೋಸ್ಟರ್‌ ವಿವಾದ: ಕ್ರಮಕ್ಕೆ ಭಾರತೀಯ ಹೈಕಮಿಷನ್‌ ಆಗ್ರಹ

|
Google Oneindia Kannada News

ನವದೆಹಲಿ, ಜುಲೈ 05: ಟೊರೊಂಟೊದ ಅಗಾ ಖಾನ್ ಮ್ಯೂಸಿಯಂನಲ್ಲಿ 'ಅಂಡರ್ ದಿ ಟೆಂಟ್' ಯೋಜನೆಯ ಭಾಗವಾಗಿ ಪ್ರದರ್ಶಿಸಲಾದ ಹಿಂದೂ ದೇವರು ವಿವಾದಿತ ಕಾಳಿ ಪೋಸ್ಟರ್‌ ಅನ್ನು ಹಿಂತೆಗೆದುಕೊಳ್ಳುವಂತೆ ಭಾರತೀಯ ಹೈಕಮಿಷನ್ ಕೆನಡಾದ ಅಧಿಕಾರಿಗಳನ್ನು ಒತ್ತಾಯಿಸಿದೆ.

ಕೆನಡಾದ ಅಧಿಕಾರಿಗಳು ಮತ್ತು ಈವೆಂಟ್ ಆಯೋಜಕರು ಇಂತಹ ಎಲ್ಲಾ ಪ್ರಚೋದನಕಾರಿ ವಸ್ತುಗಳನ್ನು ಹಿಂತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ ಎಂದು ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 ಕಾಳಿ ದೇವಿ ಸಿಗರೇಟು ಸೇದುವ ಪೋಸ್ಟರ್‌: ನಿರ್ದೇಶಕಿ ವಿರುದ್ಧ ದೂರು ಕಾಳಿ ದೇವಿ ಸಿಗರೇಟು ಸೇದುವ ಪೋಸ್ಟರ್‌: ನಿರ್ದೇಶಕಿ ವಿರುದ್ಧ ದೂರು

ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶನದ ಚಿತ್ರದ ಪೋಸ್ಟರ್ ಕಾಳಿ ದೇವಿಯ ಚಿತ್ರ ಸಿಗರೇಟು ಸೇದುತ್ತಿದ್ದು, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಒಳಗಾಯಿತು. ಮಧುರೈನಲ್ಲಿ ಜನಿಸಿದ ಟೊರೊಂಟೊ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ತಮ್ಮ ಚಿತ್ರದ ಪೋಸ್ಟರ್ ಅನ್ನು ಟ್ವಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದು ದೇವಿಯನ್ನು ಧೂಮಪಾನ ಮಾಡುವ ವೇಷಭೂಷಣವನ್ನು ಧರಿಸಿರುವ ಮಹಿಳೆಯನ್ನು ಚಿತ್ರಿಸಿತ್ತು.

ಟೊರೊಂಟೊದಲ್ಲಿರುವ ನಮ್ಮ ಕಾನ್ಸುಲೇಟ್ ಜನರಲ್ ಕಾರ್ಯಕ್ರಮದ ಸಂಘಟಕರಿಗೆ ಸೂಚನೆ ನೀಡಿದ್ದಾರೆ. ಹಲವಾರು ಹಿಂದೂ ಗುಂಪುಗಳು ಕೆನಡಾದಲ್ಲಿ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳನ್ನು ಸಂಪರ್ಕಿಸಿವೆ ಎಂದು ನಮಗೆ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏತನ್ಮಧ್ಯೆ, ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಸಾಕ್ಷ್ಯಚಿತ್ರ ಕಾಳಿಯ ಪೋಸ್ಟರ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದದ್ದಾರೆ ಎಂದು ದೆಹಲಿ ಮೂಲದ ವಕೀಲರು ಪೊಲೀಸ್ ದೂರು ದಾಖಲಿಸಿದ್ದಾರೆ.

ನಟ ಸೂರ್ಯ, ಜ್ಯೋತಿಕಾ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶನಟ ಸೂರ್ಯ, ಜ್ಯೋತಿಕಾ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ಗುಂಪು ಪೋಸ್ಟರ್‌ನಲ್ಲಿ ಕಾಳಿ ದೇವಿಯ ಚಿತ್ರಣ ಧಾರ್ಮಿಕ ಭಾವನೆ ಕೆರಳಿಸಿದೆ. ಪೋಸ್ಟರ್ ಅನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಎಂದು ಹೇಳಿದೆ. ಇನ್ನೂ ಕೆಲವರು ಆಕೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ ಮತ್ತು '#ArrestLeenaManimekal' ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.

ಕಾರ್ಯಕರ್ತ ರಾಹುಲ್ ಈಶ್ವರ್ ಇದನ್ನು "ದ್ವೇಷದ ಪೋಸ್ಟರ್" ಎಂದು ಕರೆದಿದ್ದಾರೆ. ಇದು ಹಿಂದೂ ಸಮುದಾಯದ ವಿರುದ್ಧ ದ್ವೇಷವನ್ನು ಹರಡುತ್ತಿದೆ. ನಮ್ಮ ದೇವತೆಗಳನ್ನು ಅವಮಾನಿಸುತ್ತಿದೆ ಎಂದು ಹೇಳಿದ್ದಾರೆ. ವಿವಾದದ ಬಗ್ಗೆ ಎಎನ್‌ಐಗೆ ಮಾತನಾಡಿದ ಈಶ್ವರ್, ಸ್ವಾತಂತ್ರ್ಯವು ಸಂವೇದನೆಯೊಂದಿಗೆ ಬರುತ್ತದೆ, ಸ್ವಾತಂತ್ರ್ಯವು ಜವಾಬ್ದಾರಿಯೊಂದಿಗೆ ಬರುತ್ತದೆ. , ನಾವು ಸಂವೇದನಾಶೀಲರಾಗಿ, ಗೌರವಯುತವಾಗಿ ಮತ್ತು ಜವಾಬ್ದಾರರಾಗಿರದೆ ಜಗತ್ತಿನಲ್ಲಿ ಬದುಕಬಹುದೇ? ಕಾಳಿ ಪೋಸ್ಟರ್‌ನಿಂದ ಏನಾಯಿತು ಎಂದರೆ ಲೀನಾ ಹಿಂದೂ ಸಮುದಾಯದ ವಿರುದ್ಧ ದ್ವೇಷದ ಪೋಸ್ಟರ್ ಅನ್ನು ರಚಿಸಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಹಿಂದೂಗಳ ಅತ್ಯಂತ ಪೂಜ್ಯ ದೇವತೆಗಳಲ್ಲೊಬ್ಬರಾದ ಕಾಳಿಯನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Recommended Video

   BJP ನಾಯಕರು ಸಚಿವ ಸ್ಥಾನ ಬೇಡವೆನ್ನಲು ಕಾರಣವೇನು | OneIndia Kannada

   English summary
   The Indian High Commission has urged Canadian authorities to withdraw a controversial poster of the Hindu deity Kali displayed as part of the 'Under the Tent' project at the Aga Khan Museum in Toronto.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X