ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ನಲ್ಲಿ ಭಾರಿ ಸ್ಫೋಟ : 19 ಮಂದಿ ಸಾವು, 300 ಮಂದಿಗೆ ಗಾಯ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಬುಧವಾರ ಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿದೆ. ಭಾರತ, ಜರ್ಮನಿ ಹಾಗೂ ಹಲವು ದೇಶಗಳ ರಾಯಭಾರಿ ಕಚೇರಿಗಳ ಕಟ್ಟಡಗಳ ಸಮೀಪದಲ್ಲೇ ಸ್ಫೋಟವಾಗಿದೆ.

By Mahesh
|
Google Oneindia Kannada News

ಕಾಬೂಲ್, ಮೇ 31 : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಬುಧವಾರ ಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿದೆ. ಭಾರತ, ಜರ್ಮನಿ ಹಾಗೂ ಹಲವು ದೇಶಗಳ ರಾಯಭಾರಿ ಕಚೇರಿಗಳ ಕಟ್ಟಡಗಳ ಸಮೀಪದಲ್ಲೇ ಸ್ಫೋಟವಾಗಿದೆ.

ಈ ದುರ್ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯದ ವಕ್ತಾರ ವಹೀದ್ ಮಜ್ರೋಹ್ ಹೇಳಿದ್ದಾರೆ.

ಈ ನಡುವೆ ಭಾರತೀಯ ರಾಯಭಾರ ಕಚೇರಿಯಲ್ಲಿನ ಎಲ್ಲಾ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಜರ್ಮನಿ, ಸ್ಪೇನ್ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲೇ ಅಫ್ಘಾನಿಸ್ತಾನದಲ್ಲಿ ಜರ್ಮನಿ ಹಾಗೂ ಭಾರತದ ರಾಯಭಾರಿ ಕಚೇರಿಗಳ ನಡುವೆ(ಸುಮಾರು 1.5 ಕಿ.ಮೀ ದೂರ) ಸ್ಫೋಟವಾಗಿದೆ.

Kabul blast near embassies: Huge explosion hits Afghan capital

ಕಾಬೂಲಿನ ಜಾನ್ಬಾಕ್ ಸ್ಕ್ವೇರ್ ನಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ಸುಮಾರು 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ತಕ್ಷಣವೆ ಸಮೀಪದ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯದ ವಕ್ತಾರ ವಹೀದ್ ಮಜ್ರೋಹ್ ಹೇಳಿದ್ದಾರೆ.


ಘಟನಾ ಸ್ಥಳದಲ್ಲಿ ಆತಂಕ ಮನೆ ಮಾಡಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

English summary
Kabul blast near embassies: Huge explosion hits Afghan capital
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X