India & Canada: ಭಾರತ ವಿರೋಧಿ ಕೆನಡಾ ಪ್ರಧಾನಿ ಟ್ರುಡೋಗೆ ಗೇಟ್‌ಪಾಸ್!
ಭಾರತದ ಜೊತೆಗೆ ಕಿರಿಕ್ ಮಾಡಿಕೊಂಡು, ಭಾರತದ ವಿರುದ್ಧ ಹೇಳಿಕೆ ನೀಡುತ್ತಾ ಬಂದಿದ್ದ ಭಾರತ ವಿರೋಧಿ ಕೆನಡಾ ಪ್ರಧಾನಿ ಕಣ್ಣೀರು ಹಾಕಿದ್ದಾರೆ. ಖಲಿಸ್ತಾನಿಗಳ ವಿಚಾರದಲ್ಲಿ ಇದೇ ಕೆನಡಾ ಪ್ರಧಾನಿ ಭಾರತದ ವಿರುದ್ಧ ಮಾತನಾಡಿದ್ದರು. ಅಲ್ಲದೆ ಭಾರತ ಸರ್ಕಾರದ ವಿರುದ್ಧ ಹೇಳಿಕೆ ನೀಡಿ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಹಾಳು ಮಾಡಿದ್ದರು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಭಾರತ ವಿರೋಧಿ ಕೆನಡಾ ಪ್ರಧಾನಿ ಕಣ್ಣೀರು ಹಾಕಿದ್ದಾರೆ!
ಹೌದು, ಭಾರತದ ವಿರುದ್ಧ ಮಾತನಾಡುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಸೆಟಲ್‌ಮೆಂಟ್ ಆಗ್ತಾನೆ ಇದೆ. ಅದರಲ್ಲೂ ಭಾರತದ ವಿರುದ್ಧ ಮಾತನಾಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಕೊನೆಗೆ ಭಾರತಕ್ಕೆ ಬಂದು ಭಾರತದ ಕಾಲು ಹಿಡಿಯುವ ಸ್ಥಿತಿ ಬಂದಿತ್ತು. ಅದೇ ರೀತಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕೂಡ ಭಾರತದ ವಿರುದ್ಧ ಮಾತನಾಡಿ ದೊಡ್ಡ ವಿವಾದ ಎಬ್ಬಿಸಿದ್ದರು. ಆದರೆ ಈಗ ದಿಢೀರ್ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಗೆ ಗೇಟ್‌ಪಾಸ್ ಕೊಟ್ಟು ಹೊರಹಾಕಿದೆ ಅಲ್ಲಿನ ಸರ್ಕಾರ!

ಜಸ್ಟಿನ್ ಟ್ರುಡೋಗೆ ಗೇಟ್‌ಪಾಸ್!
ಹೌದು, ಕೆನಡಾ ಪ್ರಧಾನಿ ಪಟ್ಟದಿಂದ ಜಸ್ಟಿನ್ ಟ್ರುಡೋ ಕಿಕ್‌ಔಟ್ ಆಗಿದ್ದು, ಟ್ರುಡೋ ಜಾಗಕ್ಕೆ ಇದೀಗ ಮಾರ್ಕ್ ಕಾರ್ನಿ ಆಯ್ಕೆಯಾಗಿದ್ದಾರೆ. ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆ ಆಗಿರುವ ಮಾರ್ಕ್ ಕಾರ್ನಿ ಕೆನಡಾದ ನೂತನ ಪ್ರಧಾನಿ ಆಗಿದ್ದಾರೆ. ಆದರೆ ಹೀಗೆ ತಮ್ಮ ಸ್ಥಾನ ಬಿಟ್ಟು, ಹೊರಗೆ ಹೋಗುವ ಸಮಯದಲ್ಲಿ ಮಹತ್ವದ ಭಾಷಣ ಮಾಡಿದ ಜಸ್ಟಿನ್ ಟ್ರುಡೋ, ಕೊನೆಗೆ ತಮ್ಮ ನೋವು ತಡೆಯಲು ಆಗದೆ ಕಣ್ಣೀರು ಹಾಕಿಬಿಟ್ಟರು. ಅಲ್ಲದೆ ಭಾವುಕರಾಗಿ ಭಾಷಣ ಮಾಡಿದ ಜಸ್ಟಿನ್ ಟ್ರುಡೋ ನೋಡಿ ಲಿಬರಲ್ ಪಕ್ಷದ ಕಾರ್ಯಕರ್ತರು ಕೂಡ ಕಣ್ಣೀರು ಹಾಕಿದ ಘಟನೆ ಇದೀಗ ಕೆನಡಾದಲ್ಲಿ ನಡೆದಿದೆ.












Click it and Unblock the Notifications