• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂಕಂಪದ ಅಸಲಿ ಕಾರಣ ಪತ್ತೆ ಹಚ್ಚಿದ ಮೌಲಾನಾ!

By Mahesh
|

ಇಸ್ಲಾಮಾಬಾದ್, ಮೇ.31: ಭಾರತದಲ್ಲಿ ಧಾರ್ಮಿಕ ಮುಖಂಡರು ವಸ್ತ್ರ ಸಂಹಿತೆ ಬಗ್ಗೆ ಅನೇಕ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿದ್ದು ನೆನಪಿರಬಹುದು, ಈಗ ಅದೆಲ್ಲವನ್ನು ಮೀರಿಸುವ ಹೇಳಿಕೆ ಪಕ್ಕದ ರಾಷ್ಟ್ರ ಪಾಕಿಸ್ತಾನದ ಜಾಮಾತೆ ಉಲೆಮಾ -ಇ- ಇಸ್ಲಾಮಿ ಫಜ್ಲ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹ್ಮಾನ್ ಅವರಿಂದ ಬಂದಿದೆ. ಅವರ ಪ್ರಕಾರ ಮಹಿಳೆಯರು ಜೀನ್ಸ್ ಪ್ಯಾಂಟ್ ಧರಿಸುವುದರಿಂದ ಭೂಕಂಪ ಸಂಭವಿಸುತ್ತಿದೆಯಂತೆ.

ಅಯ್ಯೋ ಕಾಲ ಕೆಟ್ಟು ಹೋಯ್ತು, ಹಳ್ಳಿ ಜನ ಎಲ್ಲಾ ಪಟ್ಣ ಸೇರಿ ಕೆಟ್ಟು ಹೋದ್ರು, ಭೂಭಾರ ಹೆಚ್ಚಾಗಿದ್ದರಿಂದ ಅನಾಹುತಗಳು ಸಂಭವಿಸುತ್ತಿದೆ ಎಂದು ಭಾರತದ ಹಳ್ಳಿಗಳ ಕಡೆ ಎಷ್ಟೋ ಮಂದಿ ಹೇಳುವುದನ್ನು ಕೇಳಿರಬಹುದು. ಇದೇ ರೀತಿ ಪಾಕಿಸ್ತಾನದ ಇಸ್ಲಾಂ ಮೂಲಭೂತವಾದಿ ಮುಖಂಡರಾದ ರೆಹ್ಮಾನ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.

ಮಹಿಳೆಯರು ಜೀನ್ಸ್‌ ಪ್ಯಾಂಟ್‌ ಧರಿಸುವುದರಿಂದ ಭೂಕಂಪ, ಹಣದುಬ್ಬರ ಸೇರಿದಂತೆ ಅನೇಕ ಅನಾಹುತಗಳು ಸಂಭವಿಸುತ್ತಿದೆ. ಇಂಥ ಮಹಿಳೆಯರನ್ನು ಹುಡುಕಿ ಕೊಲ್ಲಬೇಕು, ಸೈನಿಕ ಕಾರ್ಯಾಚರಣೆಯಲ್ಲಿ ಎಲ್ಲರನ್ನು ಮುಗಿಸಬೇಕು ಎಂದು ಇಸ್ಲಾಮಾಬಾದ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೌಲಾನಾ ಕರೆ ನೀಡಿದ್ದಾರೆ.

ಬಲೂಚಿಸ್ತಾನದ ವಿದ್ಯುತ್ ಸಮಸ್ಯೆ, ಪಾಕಿಸ್ತಾನದ ಆಂತರಿಕ ಕಲಹ, ಉಗ್ರರ ದಾಳಿ ಎಲ್ಲಕ್ಕೂ ಆಧುನಿಕ ಉಡುಪು ಧರಿಸುವ ಮಹಿಳೆಯರೇ ಕಾರಣ, ಈ ಬಗ್ಗೆ ಕ್ರಮ ಜರುಗಿಸುವಂತೆ ಪಾಕಿಸ್ತಾನ ಪ್ರಧಾನಿಗೆ ಪತ್ರ ಬರೆಯುವುದಾಗಿ ಮೌಲಾನಾ ರೆಹ್ಮಾನ್ ಹೇಳಿದ್ದಾರೆ.

ಇದರ ಜೊತೆಗೆ ತೆಹರಿಕ್ ಇ ತಾಲಿಬಾನ್‌ ವಿರುದ್ಧ ಸೈನಿಕ ಕಾರ್ಯಾಚರಣೆ ಸರಿಯಲ್ಲ, ತಾಲಿಬಾನಿಗಳೇನು ಪಾಕಿಸ್ತಾನದ ಶತ್ರುಗಳಲ್ಲ. ಷರಿಯಾರ್ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದರೆ ತಾಲಿಬಾನಿಗಳು ಯಾರ ಮೇಲೂ ದಾಳಿ ನಡೆಸುತ್ತಿರಲಿಲ್ಲ ಎಂದಿದ್ದಾರೆ.

English summary
A new discrovery has been made by JUI-F Chief Maulana Fazlur Rehman. According to him Women Wearing Jeans Are Reason Behind Earthquakes. He has asked the Pakistani armed forces to launch a military operation against women wearing jeans all over Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X