ವಾರಣಾಸಿ: ಜ್ಞಾನವಾಪಿ ಪ್ರಕರಣದ ವಿಚಾರಣೆ ತೀರ್ಪು ಅ.11ಕ್ಕೆ ಮುಂದೂಡಿಕೆ
ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಶುಕ್ರವಾರ (ಅಕ್ಟೋಬರ್ 7) ಜ್ಞಾನವಾಪಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ನಿಗದಿಪಡಿಸಿದೆ. ಜ್ಞಾನವಾಪಿ ಮಸೀದಿಯ ವಝುಖಾನಾ ಒಳಗೆ ಇರುವ ರಚನೆ ಶಿವಲಿಂಗದ್ದು ಎಂಬ ತನಿಖೆಯ ತೀರ್ಪಿಗೆ ಒತ್ತಾಯಿಸಿ ಹಿಂದೂ ಕಡೆಯವರು ಸಲ್ಲಿಸಿದ ಮನವಿಯ ಕುರಿತು ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಬೇಕಿತ್ತು. ಮಹತ್ವದ ವಿಚಾರಣೆಗೂ ಮುನ್ನ ನ್ಯಾಯಾಲಯದ ಆವರಣದ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಜ್ಞಾನವಾಪಿ ಮಸೀದಿಗೆ ಹೊಂದಿಕೊಂಡಿರುವ ಗೌರಿ ಪೂಜೆಗೆ ಅವಕಾಶಕ್ಕಾಗಿ ಒತ್ತಾಯಿಸಿ ನಾಲ್ವರು ಮಹಿಳಾ ಅರ್ಜಿದಾರರು ಸಲ್ಲಿಸಿರುವ ವಿಚಾರಣೆಯ ಭಾಗವಾಗಿ ಸಮಿತಿಯ ತಂಡ ರಚನೆಯಾಗಿತ್ತು. ಸಮಿತಿ ಮಸೀದಿಯ ಸಮೀಕ್ಷೆ ವೇಳೆ ರಚನೆಯೊಂದು ಪತ್ತೆ ಮಾಡಿದ್ದು, ಅದು ಶಿವಲಿಂಗ ಎಂದು ಹಿಂದೂಗಳು ವಾದಿಸಿದ್ದಾರೆ. ಮಸೀದಿಯಲ್ಲಿ ಸಿಕ್ಕಿ ರಚನೆ ಶಿವಲಿಂಗದ್ದೇ ಎನ್ನುವ ಬಗ್ಗೆ ಇಂದು ತೀರ್ಪು ಹೊರಬೀಳಬೇಕಾಗಿತ್ತು. ನ್ಯಾಯಲಯ ಶಿವಲಿಂಗದ ಸ್ವರೂಪ ಮತ್ತು ವಯಸ್ಸನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ತನಿಖೆ ಮಾಡಲು ಆದೇಶಿಸಿತ್ತು. ಮಸೀದಿ ಕಮಿಟಿಯವರು 'ಶಿವಲಿಂಗ'ದ ಕಾರ್ಬನ್ ಡೇಟಿಂಗ್‌ಗಾಗಿ ಹಿಂದೂವಾದಿಗಳ ಮನವಿಯ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು ಕಂಡುಹಿಡಿಯುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ.

ಸೆಪ್ಟೆಂಬರ್ 22 ರಂದು, ಹಿಂದೂ ಕಡೆಯವರು ಶಿವಲಿಂಗದಂತಹ ರಚನೆಯ ಕಾರ್ಬನ್ ಡೇಟಿಂಗ್ ಮತ್ತು ಇತರ ವೈಜ್ಞಾನಿಕ ಪರೀಕ್ಷೆಗಳನ್ನು ಒತ್ತಾಯಿಸಿದರು. ಇದನ್ನು ಮುಸ್ಲಿಂ ಕಡೆಯ ಅಂಜುಮನ್ ಇನಾಝಾನಿಯಾ ಮಸಾಜಿದ್ ಕಮಿಟಿ ಮಾತ್ರವಲ್ಲದೆ, ಹಿಂದೂ ಕಡೆಯ ಫಿರ್ಯಾದಿ ನಂಬರ್ ಒನ್ ರಾಖಿ ಸಿಂಗ್ ಕೂಡ ವಿರೋಧಿಸಿದ್ದಾರೆ. ಕಾರ್ಬನ್ ಡೇಟಿಂಗ್ ರಚನೆಗೆ ಹಾನಿಯಾಗುತ್ತದೆ ಎಂದು ವಕೀಲರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸೆ.29ರಂದು ಎರಡೂ ಕಡೆಯ ವಾದ ಆಲಿಸಿದ ಬಳಿಕ ಆದೇಶವನ್ನು ಕಾಯ್ದಿರಿಸಿತ್ತು.
ಹಿಂದೂ ಅರ್ಜಿದಾರರು ಮಸೀದಿ ಆವರಣದ ನ್ಯಾಯಾಲಯದ ಕಡ್ಡಾಯ ವೀಡಿಯೊಗ್ರಫಿ ಸಮೀಕ್ಷೆಯ ಸಮಯದಲ್ಲಿ ಮುಸ್ಲಿಂ ಭಕ್ತರು ನಮಾಜ್ ಮಾಡುವ ಬಳಿ "ಶಿವಲಿಂಗ" ಕಂಡುಬಂದಿದೆ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಮಸೀದಿ ಕಮಿಟಿ ಅಲ್ಲಗಳಿದಿದೆ. ಅದೊಂದು ಕಾರಂಜಿ ಎಂದು ಹೇಳಿದೆ.












Click it and Unblock the Notifications