ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತರಾದ ಮಾರಿಯಾ ರೆಸ್ಸಾ, ಡಿಮಿಟ್ರಿ ಮುರಾಟೋವ್‌ಗೆ 2021ರ ನೊಬೆಲ್ ಶಾಂತಿ ಪ್ರಶಸ್ತಿ

|
Google Oneindia Kannada News

ಅಂತಾರಾಷ್ಟ್ರೀಯ, ಅಕ್ಟೋಬರ್ 8: ಫಿಲಿಪೈನ್ಸ್ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ 2021ನೇ ಸಾಲಿನ ನೊಬೆಲ್​ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

"ರಷ್ಯಾ ಹಾಗೂ ಫಿಲಿಪೈನ್ಸ್​​ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಇವರಿಬ್ಬರೂ ದಿಟ್ಟ ಹೋರಾಟ ನಡೆಸಿದ್ದರು. ರೆಸ್ಸಾ ಮತ್ತು ಮುರಾಟೋವ್ ಫಿಲಿಪೈನ್ಸ್​ ಮತ್ತು ರಷ್ಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಪರಿಗಣಿಸಿ ಇವರಿಬ್ಬರಿಗೆ ಈ ಬಾರಿಯ ನೊಬೆಲ್​ ಶಾಂತಿ ಪುರಸ್ಕಾರ ನೀಡಲಾಗುವುದು," ಎಂದು ನೊಬೆಲ್ ಸಮಿತಿಯ ಅಧ್ಯಕ್ಷೆ ಬೆರಿಟ್ ರೀಸ್- ಆಂಡರ್ಸನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್‌ಗೆ ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್‌ಗೆ ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ

ಇದೇ ವೇಳೆ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಪ್ರತಿಕೂಲ ಪರಿಸ್ಥಿತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇವರಿಬ್ಬರೂ ಜಗತ್ತಿಗೇ ಆದರ್ಶಪ್ರಾಯರಾಗಿ ನಿಂತಿದ್ದಾರೆ ಎಂದೂ ತಿಳಿಸಿದರು.

journalists maria ressa and dmitry muratov win 2021 nobel prize in peace

ಪತ್ರಕರ್ತೆ ರೆಸ್ಸಾ (58) ತಮಗೆ ನೊಬೆಲ್​ ಶಾಂತಿ ಪುರಸ್ಕಾರ ಬಂದಿದ್ದು ನಿಜಕ್ಕೂ ಶಾಕ್​​ ತಂದಿದ್ದು, ಭಾವನಾತ್ಮಕ ಕ್ಷಣವಾಗಿದೆ. ಇದನ್ನು ಸ್ವೀಕರಿಸಲು ತುಂಬ ಹೆಮ್ಮೆಯಾಗುತ್ತದೆ ಎಂದಿದ್ದಾರೆ. ಹಾಗಯೇ, ಫಿಲಿಪೈನ್ಸ್​ನಲ್ಲಿ ಈಗಿರುವ ಪತ್ರಕರ್ತರೂ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಯ ಹೋರಾಟವನ್ನು ಮುಂದುವರಿಸಬೇಕು ಎಂದು ಆಶಿಸಿದ್ದಾರೆ.

ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾದ ಅಮೆರಿಕದ ಇಬ್ಬರು ವಿಜ್ಞಾನಿಗಳುಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾದ ಅಮೆರಿಕದ ಇಬ್ಬರು ವಿಜ್ಞಾನಿಗಳು

ಮರಿಯಾ ರೆಸ್ಸಾ 2012ರಲ್ಲಿ ಸ್ಥಾಪನೆಯಾದ ತನಿಖಾ ಪತ್ರಿಕೋದ್ಯಮದ ಡಿಜಿಟಲ್​ ಮೀಡಿಯಾ ಸಂಸ್ಥೆ (ಆನ್​​ಲೈನ್​ ಮೀಡಿಯಾ) ರಾಪ್ಲರ್​ನ ಸಹ ಸಂಸ್ಥಾಪಕರಾಗಿದ್ದಾರೆ. ಪತ್ರಿಕೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿರುವದನ್ನು ಕಟುವಾಗಿ ವಿರೋಧಿಸಿದ್ದರು. ಅಮೆರಿಕ ಪೌರತ್ವ ಹೊಂದಿರುವ ಅವರಿಗೆ ಜೈಲು ಶಿಕ್ಷೆಯೂ ಆಗಿದೆ. ಅವರೀಗ ಜಾಮೀನನ ಮೇಲೆ ಹೊರಗಿದ್ದಾರೆ.

ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್​ಗೆ 59 ವರ್ಷ ವಯಸ್ಸಾಗಿದ್ದು, ಇವರೂ ಸಹ ರಷ್ಯಾದಲ್ಲಿ ಹರಣವಾಗುತ್ತಿರುವ ಅಭಿವ್ಯಕ್ತಿ, ವಾಕ್​​ ಸ್ವಾತಂತ್ರ್ಯ ರಕ್ಷಣೆಗಾಗಿ ದಶಕಗಳಿಂದಲೂ ಹೋರಾಟ ನಡೆಸಿದವರಾಗಿದ್ದಾರೆ. ನೊವಾಯಾ ಗೆಜೆಟಾ ಎಂಬ ಸ್ವತಂತ್ರ ಪತ್ರಿಕೆಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.

ಮೂವರು ವಿಜ್ಞಾನಿಗಳಿಗೆ 2021ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟಮೂವರು ವಿಜ್ಞಾನಿಗಳಿಗೆ 2021ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ

1993ರಲ್ಲಿ ನೊವಾಯಾ ಗೆಜೆಟಾ ಪ್ರಾರಂಭವಾಗಿದ್ದು, 1995ರವರೆಗೆ ಡಿಮಿಟ್ರಿಯವರೇ ಅದರ ಮುಖ್ಯ ಸಂಪಾದಕರಾಗಿದ್ದರು. ಈ ಪತ್ರಿಕೆ ಅಧಿಕಾರವನ್ನು ಮೂಲಭೂತವಾಗಿ ವಿಮರ್ಶಿಸುವ ಮನೋಭಾವದಿಂದ ಕೆಲಸ ಮಾಡುತ್ತಿದೆ. ಇದಕ್ಕೆ ಅಪಾರ ವಿರೋಧಿಗಳು ಇದ್ದು, ಡಿಮಿಟ್ರಿ ಮುರಾಟೋವ್​ಗೂ ಸಹ ಕೊಲೆ ಬೆದರಿಕೆಗಳು ಬಂದಿವೆ.

"ಇಲ್ಲಿಯವರೆಗೆ ಈ ಸುದ್ದಿಪತ್ರಿಕೆಗೆ ಸಂಬಂಧಪಟ್ಟಂತೆ 6 ಮಂದಿಯನ್ನು ಕೊಲ್ಲಲಾಗಿದೆ. ಅಂದರೆ ಅಲ್ಲಿನ ಆಡಳಿತ ಸರ್ಕಾರ ವಿರೋಧಿಗಳನ್ನು ಸಹಿಸಿಕೊಳ್ಳುತ್ತಿಲ್ಲ. ಈ ಮಧ್ಯೆಯೂ ಡಿಮಿಟ್ರಿ ಮುರಾಟೋವ್​ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ. ಈ ನೊಬೆಲ್​ ಶಾಂತಿ ಪುರಸ್ಕಾರವನ್ನು ಡಿಸೆಂಬರ್​ 10ರಂದು ಪ್ರದಾನ ಮಾಡಲಾಗುವುದು," ಎಂದು ತಿಳಿಸಿದೆ.

ಪ್ರತಿಷ್ಠಿತ ಬಹುಮಾನವು 10 ದಶಲಕ್ಷ ಸ್ವೀಡಿಷ್ ಕ್ರೌನ್‌ಗಳ (1.15 ಮಿಲಿಯನ್ ಡಾಲರ್) ಮೌಲ್ಯದ್ದಾಗಿದೆ ಮತ್ತು ಇದನ್ನು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನೀಡುತ್ತದೆ.

ಮೊನ್ನೆ ಬುಧವಾರ ಅಕ್ಟೋಬರ್ 6ರಂದು ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಲಾಗಿದ್ದು, ಜರ್ಮನಿಯ ಬೆಂಜಮಿನ್ ಲಿಸ್ಟ್ ಹಾಗೂ ಇಂಗ್ಲೆಂಡ್‌ನ ಡೇವಿಡ್ ಡಬ್ಲು.ಸಿ. ಮ್ಯಾಕ್‌ಮಿಲನ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಅಸಿಮ್ಮೆಟ್ರಿಕ್ ಆರ್ಗನೊಕಟಲಿಸಿಸ್ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಈ ಇಬ್ಬರಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.

ಇನ್ನು ಮಂಗಳವಾರದಂದು 2021ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಸೈಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್, ಪ್ಯಾರಿಸಿಗೆ ಘೋಷಿಸಲಾಗಿತ್ತು. ಜಪಾನ್, ಜರ್ಮನಿ ಮತ್ತು ಇಟಲಿಯ ಈ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿತ್ತು. ಇದೀಗ ರಸಾಯನ ಶಾಸ್ತ್ರ ವಿಭಾಗದಲ್ಲೂ ಜರ್ಮನಿಯ ವಿಜ್ಞಾನಿಗೆ ನೊಬೆಲ್ ಪ್ರಶಸ್ತಿ ಬಂದಿದೆ.

ಸೋಮವಾರದಂದು ನೊಬೆಲ್ ಸಮಿತಿಯು ಶರೀರಶಾಸ್ತ್ರ ಅಥವಾ ಔಷಧದಲ್ಲಿ ಅಮೆರಿಕನ್ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್‌ರಿಗೆ ಮಾನವ ದೇಹವು ತಾಪಮಾನ ಮತ್ತು ಸ್ಪರ್ಶವನ್ನು ಹೇಗೆ ಗ್ರಹಿಸುತ್ತದೆ ಎಂಬುದನ್ನು ಕಂಡುಹಿಡಿದಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.

"ಮುಂಬರುವ ದಿನಗಳಲ್ಲಿ ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೆಲಸಗಳಿಗಾಗಿ ಬಹುಮಾನಗಳನ್ನು ಸಹ ನೀಡಲಾಗುವುದು,'' ಎಂದು ನೊಬೆಲ್ ಸಮಿತಿ ಹೇಳಿದೆ.

English summary
Journalists Maria Ressa and Dmitry Muratov win 2021 Nobel Prize In Peace, for their efforts to safeguard freedom of expression, which is a precondition for democracy and lasting peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X