ಕೊರೊನಾ ಬಗ್ಗೆ ವರದಿಗೆಂದು ತೆರಳಿದ್ದ ಚೀನಾದ ವರದಿಗಾರ ನಾಪತ್ತೆ

ವುಹಾನ್, ಫೆಬ್ರವರಿ 10: ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ವರದಿಗೆ ತೆರಳಿದ್ದ ಚೀನಾ ವರದಿಗಾರರೊಬ್ಬರು ನಾಪತ್ತೆಯಾಗಿದ್ದಾರೆ.

ಕಳೆದ ಸಾಕಷ್ಟು ವಾರಗಳಿಂದ ಚೆನ್ ಕಿಯೂಷಿ, ಫಾಂಗ್ ಬಿನ್ ಎಂಬ ಇಬ್ಬರು ಪತ್ರಕರ್ತರು ಕೊರೊನಾ ವೈರಸ್ ಕುರಿತ ವರದಿ ಮಾಡುತ್ತಿದ್ದರು.

ಅಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಬಗ್ಗೆ ಸುದ್ದಿ ಕೊಟ್ಟವರೇ ಅವರು. ಅವರು ತಮ್ಮ ಮೊಬೈಲ್ ಫೋನ್‌ಗಳ ಮೂಲಕ ಅಲ್ಲಿನ ಪರಿಸ್ಥಿತಿಯನ್ನು ಸೆರೆಹಿಡಿದು ಟ್ವಿಟ್ಟರ್, ಶೇರ್‌ಚಾಟ್‌, ಯೂಟ್ಯೂಬ್‌ಗಳಲ್ಲಿ ವಿಡಿಯೋಗಳನ್ನು ಶೇರ್ ಮಾಡಿದ್ದರು.

Chinese Journalist Missing

ಆ ಇಬ್ಬರಲ್ಲಿ ಈಗ ಓರ್ವ ವರದಿಗಾರ ಕಾಣೆಯಾಗಿದ್ದಾರೆ. ಅವರು ಕಳೆದ 20 ಗಂಟೆಗಳಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.ಅಪಾರ್ಟ್‌ಮೆಂಟ್‌ಗಳಲ್ಲಿ ರೋಗಿಗಳನ್ನು ಕೂಡಿಹಾಕಿರುವ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದೀಗ ವರದಿಗಾರನಿಗೂ ರೋಗ ತಗುಲಿದೆಯೇ ಎನ್ನುವ ಕುರಿತು ಊಹಾಪೋಹಗಳು ಎದ್ದಿವೆ.

ವೈರಸ್ ಕುರಿತು ವರದಿ ಮಾಡಿ ಇಡೀ ವಿಶ್ವಕ್ಕೆ ಅಲ್ಲಿನ ಪರಿಸ್ಥಿತಿ ರವಾನಿಸಿದ್ದಕ್ಕಾಗಿ ಅವರನ್ನು ಸರ್ಕಾರ ಬಂಧಿಸಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.
ಅಲ್ಲಿನ ಪರಿಸ್ಥಿತಿಯನ್ನು ಬಗ್ಗೆ ಬೇರೆ ಯಾವುದೇ ದೇಶಗಳಿಗೆ ಮಾಹಿತಿ ರವಾನೆಯಾಗದಂತೆ ನೋಡಿಕೊಳ್ಳುತ್ತಿದೆ. ಕ್ಯಾಮರಾಗಳು ಬ್ಯಾನ್ ಆಗಿವೆ. ಇದರ ಮಧ್ಯೆ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಚೇನ್ ಅಪ್‌ಲೋಡ್ ಮಾಡಿದ್ದರು.

ಈ ರೀತಿಯ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದರಿಂದ ಜನರು ಇನ್ನಷ್ಟು ಗಾಬರಿಗೊಳ್ಳುತ್ತಾರೆ. ಇದಕ್ಕೆ ಯಾವುದೇ ಅವಕಾಶ ಮಾಡಿಕೊಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಶೇರ್‌ ಚಾಟ್ , ಟ್ವಿಟ್ಟರ್ ಮೂಲಕ ತಮಗಾದ ಅನುಭವಗಳನ್ನು ಅಲ್ಲಿಯ ಜನರು ಹಂಚಿಕೊಳ್ಳುತ್ತಿದ್ದಾರೆ.

ಚೇನ್ ಗುರುವಾರ 7 ಗಂಟೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದುವರೆಗೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+